ಕೊಪ್ಪಳ: ನಿವೃತ್ತಿಯಾಗುವ ಮುನ್ನ 200 ಹೆಣ್ಣು ಮಕ್ಕಳಿಗೆ 'ಸುಕನ್ಯಾ ಸಮೃದ್ದಿ ಖಾತೆ' ತೆರೆದ ಪೋಸ್ಟ್ ಮಾಸ್ಟರ್

ಮುಂದಿನ ತಿಂಗಳು ನಿವೃತ್ತರಾಗಲಿರುವ ಕೊಪ್ಪಳದ ಈ ಅಂಚೆ ಉದ್ಯೋಗಿ, ನಿರ್ಗಮಿಸುವ ಮುನ್ನ ಉಡುಗೊರೆಯಾಗಿ 200 ಹುಡುಗಿಯರಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಸಿದ್ದಾರೆ.
ಸುಕನ್ಯಾ ಸಮೃದ್ದಿ ಯೋಜನೆಗಾಗಿ 200 ಖಾತೆ ತೆರೆಸಿದ ಪೋಸ್ಟ್ ಮಾಸ್ಟರ್
ಸುಕನ್ಯಾ ಸಮೃದ್ದಿ ಯೋಜನೆಗಾಗಿ 200 ಖಾತೆ ತೆರೆಸಿದ ಪೋಸ್ಟ್ ಮಾಸ್ಟರ್

ಕೊಪ್ಪಳ: ಮುಂದಿನ ತಿಂಗಳು ನಿವೃತ್ತರಾಗಲಿರುವ ಕೊಪ್ಪಳದ ಈ ಅಂಚೆ ಉದ್ಯೋಗಿ, ನಿರ್ಗಮನಕ್ಕೆ ಮುನ್ನ ಉಡುಗೊರೆಯಾಗಿ 200 ಹುಡುಗಿಯರಿಗೆ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಸಿದ್ದಾರೆ.

ಸದ್ಯ ಕೊಪ್ಪಳದ ಎಲ್‌ಎಸ್‌ಜಿ (ಲೋ ಸೆಲೆಕ್ಷನ್ ಗ್ರೇಡ್) ಪೋಸ್ಟ್‌ಮಾಸ್ಟರ್ ವೈ.ವೈ.ಕೋಳೂರು ಕಳೆದ ಕೆಲವು ವಾರಗಳಿಂದ ಅಂಚೆ ಇಲಾಖೆಯ ತಮ್ಮ ಸಹೋದ್ಯೋಗಿಗಳ ಸಹಾಯದಿಂದ ಫಲಾನುಭವಿಗಳನ್ನು ಗುರುತಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಅವರನ್ನು ಗುರುತಿಸಿದ ನಂತರ, ಅವರ ಹೆಸರನ್ನು ಪಟ್ಟಿಗೆ ಹಾಕಲು ಮತ್ತು ಅವರ ಖಾತೆಗಳನ್ನು ತೆರೆಯುವ ಸಮಯವಾಗಿತ್ತು. ಕಳೆದ ತಿಂಗಳು, ಅವರು 200 ಹುಡುಗಿಯರ ಖಾತೆಗಳಿಗೆ ಕನಿಷ್ಠ ಮೊತ್ತವಾದ ತಲಾ 250 ರೂ ಹಣ ಹಾಕಿಸಿದ್ದಾರೆ. ಅವರು 18 ವರ್ಷ ವಯಸ್ಸನ್ನು ತಲುಪಿಲ್ಲವಾದ್ದರಿಂದ, ಅವರ ಖಾತೆಗಳನ್ನು ಅವರ ಪೋಷಕರು ನಿರ್ವಹಿಸುತ್ತಾರೆ.

ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯ ಕ್ರಮವಾಗಿದೆ. “ನಾವು ಕಳೆದ ನಾಲ್ಕು ದಶಕಗಳಿಂದ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದರಿಂದ, ನಾವು ಸಾಮಾನ್ಯವಾಗಿ ಉಳಿತಾಯ ಖಾತೆ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತೇವೆ. ಆದರೆ ನನ್ನ ನಿವೃತ್ತಿ ಸಮೀಪಿಸುತ್ತಿದ್ದಂತೆ, ಸಮಾಜಕ್ಕೆ ಉತ್ತಮ ಮಾರ್ಗವನ್ನು ನೀಡಲು ನಾನು ಯೋಚಿಸಿದೆ ಎಂದು ಕೋಳೂರು ಹೇಳಿದರು.

ದೀರ್ಘಕಾಲದ ವಿವಿಧ ಯೋಜನಗಳ್ನು ವಿಶ್ಲೇಷಿಸಿದ ನಂತರ, ನಾನು 200 ಹುಡುಗಿಯರ ಖಾತೆಗಳನ್ನು ತೆರೆಯಲು ನಿರ್ಧರಿಸಿದೆ. ಖಾತೆಗಳನ್ನು ತೆರೆಯುವ ಪ್ರಯೋಜನಗಳ ಬಗ್ಗೆ ನಾನು ಅವರ ಪೋಷಕರಿಗೆ ಮನವರಿಕೆ ಮಾಡಿದೆ. ಬಡ ಕುಟುಂಬಗಳ ಸದಸ್ಯರು ಅಂಚೆ ಕಚೇರಿ ಅಥವಾ ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆಯುವುದಿಲ್ಲ, ಹೀಗಾಗ ನಾನು ಅವರಿಗೆ ಕೌನ್ಸೆಲಿಂಗ್ ಮಾಡಿದ್ದೇನೆ ಮತ್ತು ಅದರ ಮಹತ್ವವನ್ನು ತಿಳಿಯುವಂತೆ ಮಾಡಿದ್ದೆ ಎಂದು ಪೋಸ್ಟ್ ಮಾಸ್ಟರ್ ಕೋಳೂರು ತಿಳಿಸಿದ್ದಾರೆ.

ಕುಷ್ಟಗಿ ತಾಲೂಕಿನ ಹನುಮಸಾಗರ ಮೂಲದ ಕೋಳೂರು ಅವರು ಕೊಪ್ಪಳದ ಪ್ರಧಾನ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ, ಸುಕನ್ಯಾ ಸಮೃದ್ಧಿ ಯೋಜನೆಗೆ ಗರಿಷ್ಠ ಖಾತೆದಾರರನ್ನು ಸೃಷ್ಟಿಸಲು ಕೊಪ್ಪಳ ಸೇರಿದಂತೆ ಭಾರತದ 75 ನಗರಗಳನ್ನು ಅಂಚೆ ಇಲಾಖೆ ಆಯ್ಕೆ ಮಾಡಿತ್ತು. ಕೊಪ್ಪಳ ಪ್ರಥಮವಾಗಿ ಹೊರಹೊಮ್ಮಿತು. ಕೋಳೂರು ಅವರು ತಮ್ಮ ತಂಡದೊಂದಿಗೆ ಕೊಪ್ಪಳದ ಬಿಪಿಎಲ್ ಕಾರ್ಡುದಾರರ ಮನೆಗಳಿಗೆ ಭೇಟಿ ನೀಡಿ ಉಳಿತಾಯ ಖಾತೆ ತೆರೆಯುವಂತೆ ಮನವೊಲಿಸಿದರು.

ಪೋಸ್ಟ್ ಮಾಸ್ಟರ ಕೋಳೂರು ಅವರ ಅಗಾಧ ಶ್ರಮದ ವಿಚಾರ ನವದೆಹಲಿಯನ್ನೂ ತಲುಪಿದೆ. ನನ್ನ ಕೆಲಸಕ್ಕೆ ಕೊಪ್ಪಳ ಮತ್ತು ನವದೆಹಲಿಯ ಹಿರಿಯ ಅಧಿಕಾರಿಗಳು ನನ್ನನ್ನು ಅಭಿನಂದಿಸಿದ್ದಾರೆ. ಇದು ಉತ್ತಮ ಭಾವನೆ, ಮತ್ತು ಹುಡುಗಿಯರಿಗಾಗಿ ಉದ್ದೇಶಿಸಿರುವ ಅಂಚೆ ಉಳಿತಾಯ ಯೋಜನೆಗಳಲ್ಲಿ ಹೆಚ್ಚಿನ ಜನರು ಹೂಡಿಕೆ ಮಾಡಬೇಕೆಂದು ನಾನು ಬಯಸುತ್ತೇನೆ. ನಾನು ರೂ 50,000 ಖರ್ಚು ಮಾಡಿದ್ದೇನೆ ಮತ್ತು ಪೋಷಕರು ತಮ್ಮ ಮಕ್ಕಳ ಹಿತದೃಷ್ಟಿಯಿಂದ ಯೋಜನೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದುವರಿಸಬೇಕೆಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.

ಅನೇಕ ಬಿಪಿಎಲ್ ಕುಟುಂಬಗಳು ದಿನಗೂಲಿಯಿಂದ ನಡೆಯುತ್ತಿವೆ, ಅವರಲ್ಲಿ ಹೆಚ್ಚಿನವರು ಉಳಿತಾಯದ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ನಾವು ಅವರನ್ನು ಸಂಪರ್ಕಿಸಿದ್ದೇವೆ ಮತ್ತು ಉಳಿತಾಯದ ಪ್ರಯೋಜನಗಳನ್ನು ವಿವರಿಸಿದೆವು, ಇದರಿಂದ ಅವರ ಕುಟುಂಬಗಳು ಸ್ವಲ್ಪ ಹಣ ಉಳಿತಾಯ ಮಾಡುತ್ತಿವೆ ಎಂದಿದ್ದಾರೆ.

ಭಾರತೀಯ ಅಂಚೆ ಇತರ ಬ್ಯಾಂಕಿಂಗ್ ಸೇವೆಗಳೊಂದಿಗೆ ನೀಡುವ ಅನೇಕ ಉಳಿತಾಯ ಯೋಜನೆಗಳಿವೆ. ಅವರು ಸಣ್ಣ ಮೊತ್ತವನ್ನು ಠೇವಣಿ ಮಾಡುವ ಮೂಲಕ ಪ್ರಾರಂಭಿಸಬಹುದು. ನೂಲುವ ಗಿರಣಿ ಮತ್ತು ವಿಗ್ ತಯಾರಿಸುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರು ನಮ್ಮ ಗುರಿ ಎಂದು ಕೋಳೂರು ಹೇಳಿದರು.

ಭಾಗ್ಯನಗರದ ಫಲಾನುಭವಿಯೊಬ್ಬರು ಮಾತನಾಡಿ, ‘ಹೆಣ್ಣು ಮಕ್ಕಳ ಉಳಿತಾಯ ಯೋಜನೆ ಬಗ್ಗೆ ಕೇಳಿದ್ದೇನೆ. ಆದರೆ ಹಿರಿಯ ಅಧಿಕಾರಿಗಳು ನನ್ನ ಮನೆಗೆ ಭೇಟಿ ನೀಡಿದಾಗ ಇತರ ಹಲವು ಅಂಶಗಳ ಬಗ್ಗೆ ತಿಳಿದುಕೊಂಡೆ. ತಮ್ಮ ಸ್ವಂತ ಹಣದಲ್ಲಿ ನಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಖಾತೆ ತೆರೆದಿದ್ದಕ್ಕಾಗಿ ಕೋಳೂರು ಅವರಿಗೆ ನಾನು ಆಭಾರಿಯಾಗಿದ್ದೇನೆ. ನಾವು ಆ ಖಾತೆಗಳಿಗೆ ಹಣವನ್ನು ಜಮಾ ಮಾಡಲು ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಕೋಳೂರು ಅವರು ಪೋಸ್ಟ್ ಆಫೀಸ್ ಮತ್ತು ಉಳಿತಾಯ ಖಾತೆಗಳ ದೈನಂದಿನ ಕರ್ತವ್ಯಗಳನ್ನು ಪೂರ್ಣಗೊಳಿಸಲು ತಡ ರಾತ್ರಿ ಕೆಲಸ ಮಾಡುವುದನ್ನು ನಾವು ನೋಡಿದ್ದೇವೆ. ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಕೊಪ್ಪಳ ಪ್ರಥಮ ಸ್ಥಾನ ಪಡೆಯುವಲ್ಲಿ ಕೋಳೂರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಿವೃತ್ತಿಯ ಮೊದಲು ಅವರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಮಗೆ ಹೆಮ್ಮೆ ಇದೆ. ಫಲಾನುಭವಿಗಳನ್ನು ಗುರುತಿಸಲು ಶ್ರಮಿಸಿದ್ದು, ಖಾತೆದಾರರಲ್ಲಿ ಸಂತಸ ಮೂಡಿದೆ' ಎಂದರು.

‘ಬೇಟಿ ಬಚಾವೋ ಬೇಟಿ ಪಢಾವೋ’ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ (SSY) ಎಂಬ ಉಳಿತಾಯ ಯೋಜನೆಯನ್ನು ಪ್ರಾರಂಭಿಸಿತು. 2019 ರ ಕೇಂದ್ರ ಸರ್ಕಾರದ ಆದೇಶದ ಪ್ರಕಾರ, 10 ವರ್ಷವನ್ನು ತಲುಪದ ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಹೂಡಿಕೆಯ ಅವಧಿಯು 21 ವರ್ಷಗಳು ಮತ್ತು ಹಣಕಾಸು ವರ್ಷದಲ್ಲಿ ಠೇವಣಿ ಮಾಡಿದ ಒಟ್ಟು  1,50,000 ರೂ ಮೊತ್ತವನ್ನು ಮೀರಬಾರದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com