ಪಂಜಾಬ್: ಬಾಲಕಿಯರಿಗಾಗಿ ಪೊಲೀಸ್ ಪೇದೆಯ ಕ್ರಿಕೆಟ್ ಆಕಾಡೆಮಿ; ಗುಲಾಬ್ ಸಿಂಗ್ ಶೆರ್ಗಿಲ್ ನಿಸ್ವಾರ್ಥ ಸೇವೆ!

9 ರಿಂದ 14 ವರ್ಷದೊಳಗಿನ 18 ಮಂದಿ ಹುಡುಗಿಯರು ಹಿಂಭಾಗದಲ್ಲಿ ತಮ್ಮ ಹೆಸರನ್ನು ಬರೆದ ಜೆರ್ಸಿ ನಂಬರ್ ಇರುವ ಬಿಳಿ ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿ ಪಂಜಾಬ್ ನ ಪಟಿಯಾಲ ಜಿಲ್ಲೆಯ ಧರೋಕಿ ಗ್ರಾಮದ ಮೈದಾನದಲ್ಲಿ ಕಳೆದ 4 ವರ್ಷಗಳಿಂದ ಆಟವಾಡುತ್ತಿದ್ದಾರೆ.
ಮಕ್ಕಳಿಗೆ ತರಬೇತಿ ನೀಡುತ್ತಿರುವುದು
ಮಕ್ಕಳಿಗೆ ತರಬೇತಿ ನೀಡುತ್ತಿರುವುದು

ಪಂಜಾಬ್: 9 ರಿಂದ 14 ವರ್ಷದೊಳಗಿನ 18 ಮಂದಿ ಹುಡುಗಿಯರು ಹಿಂಭಾಗದಲ್ಲಿ ತಮ್ಮ ಹೆಸರನ್ನು ಬರೆದ ಜೆರ್ಸಿ ನಂಬರ್ ಇರುವ ಬಿಳಿ ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿ ಪಂಜಾಬ್ ನ ಪಟಿಯಾಲ ಜಿಲ್ಲೆಯ ಧರೋಕಿ ಗ್ರಾಮದ ಮೈದಾನದಲ್ಲಿ ಕಳೆದ 4 ವರ್ಷಗಳಿಂದ ಆಟವಾಡುತ್ತಿದ್ದಾರೆ. ಪಂಜಾಬ್ ಪೊಲೀಸ್ ಕಾನ್ಸ್‌ಟೇಬಲ್ ಗುಲಾಬ್ ಸಿಂಗ್ ಶೆರ್ಗಿಲ್ (34ವ) ಅವರ ಕೋಚ್ ಆಗಿದ್ದು, ಅವರು ತಮ್ಮಲ್ಲಿರುವ ಅಲ್ಪ ಬಂಡವಾಳದೊಂದಿಗೆ ಹೆಣ್ಣು ಮಕ್ಕಳ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. 

ಶೆರ್ಗಿಲ್ 2016 ರಲ್ಲಿ ರಾಜ್ಯ ಪೊಲೀಸ್‌ಗೆ ನೇಮಕಗೊಂಡ ಅತಿ ಕಿರಿಯ ವಯಸ್ಸಿನ ಕೋಚ್ ಆಗಿದ್ದರು. 2019 ರಲ್ಲಿ ಪರೀಕ್ಷೆ ಮುಗಿದ ತಕ್ಷಣ ಹೆಣ್ಣು ಮಕ್ಕಳಿಗೆ ಕೋಚಿಂಗ್ ನೀಡುವ ಕೆಲಸ ಆರಂಭಿಸಿದರು. ಇಷ್ಟು ಪುಟ್ಟ ಹೆಣ್ಣುಮಕ್ಕಳ ಉತ್ಸಾಹ ನನ್ನನ್ನು ತರಬೇತಿ ಪ್ರಾರಂಭಿಸಲು ಪ್ರೇರೇಪಿಸಿತು. ಹಳ್ಳಿಗಳಲ್ಲಿನ ಮಕ್ಕಳಿಗೆ ಕ್ರೀಡೆಯಲ್ಲಿ ಅಗತ್ಯ ಮಾರ್ಗದರ್ಶನ ಸಿಗದ ಕಾರಣ ಅವರಿಗೆ ತರಬೇತಿ ನೀಡಲು ಅವಕಾಶ ಸಿಕ್ಕಿದೆ ಎಂದು ಖುಷಿಯಿಂದ ಪ್ರಾರಂಭಿಸಿದೆ ಎನ್ನುತ್ತಾರೆ. 

ಆದರೆ ಆರಂಭದಲ್ಲಿ ಗ್ರಾಮದಲ್ಲಿ ಆಟದ ಮೈದಾನ ಇರಲಿಲ್ಲ. ಹೀಗಾಗಿಯೇ ಗುಲಾಬ್ ಉತ್ತಮ ತರಬೇತಿ ಪಡೆದ ಕ್ರೀಡಾಪಟುವಾಗಲು ಸಾಧ್ಯವಾಗಲಿಲ್ಲ. ಕಟಾವು ಮಾಡಿದ ಬೆಳೆಗಳನ್ನು ಜೀವನೋಪಾಯಕ್ಕಾಗಿ ಇತರ ರಾಜ್ಯಗಳಿಗೆ ಕೊಂಡೊಯ್ದು ಮಾರುತ್ತೇನೆ. ಅಂತಹ ಒಂದು ಸಂದರ್ಭದಲ್ಲಿ ಗುಜರಾತ್‌ಗೆ ಭೇಟಿ ನೀಡಿದಾಗ ಕೆಲವು ಹಳ್ಳಿಗಳು ತಮ್ಮದೇ ಆದ ಆಟದ ಮೈದಾನಗಳನ್ನು ಹೊಂದಿದ್ದವು. ಇದು ನನ್ನನ್ನು ಒಂದೇ ರೀತಿಯ ಮಾರ್ಗದಲ್ಲಿ ಯೋಚಿಸಲು ಕಾರಣವಾಯಿತು ಎನ್ನುತ್ತಾರೆ. 

ಗುಲಾಬ್ ತಮಗೆ ಬರುವ ಆದಾಯದಿಂದ ಜಮೀನು ಕೊಳ್ಳಲು ಉಳಿತಾಯ ಮಾಡುತ್ತಿದ್ದರು. ಆದರೆ ಬೆಳೆಹಾನಿಯಾದ ಸಂದರ್ಭದಲ್ಲಿ ನಷ್ಟ ಉಂಟಾಯಿತು. ತಮ್ಮ ಹಳ್ಳಿಯಿಂದ ಕ್ರಿಕೆಟ್ ತರಬೇತಿಗೆ ಮಕ್ಕಳು ಬೇರೆಡೆಗೆ ಹೋಗುತ್ತಿರುವುದು ಕಂಡಾಗ ಅವರ ಮನಸ್ಸಿಗೆ ನೋವಾಗುತ್ತಿತ್ತು. 

2016 ರಲ್ಲಿ, ನಾನು ಪಂಜಾಬ್ ಪೊಲೀಸ್ ಇಲಾಖೆಗೆ ಸೇರಲು ಪರೀಕ್ಷೆ ಬರೆದು ಉತ್ತೀರ್ಣನಾದೆ. ಎರಡು ವರ್ಷಗಳ ಪ್ರೊಬೇಷನ್ ನಂತರ, ನನ್ನ ಹಳ್ಳಿಯ ಯುವಕರಿಗೆ ತರಬೇತಿ ನೀಡುವ ನನ್ನ ಕನಸು ನೆರವೇರಿತು. ನಮ್ಮ ಹಳ್ಳಿಯಲ್ಲಿ ಆಟದ ಮೈದಾನವನ್ನು ವ್ಯವಸ್ಥೆ ಮಾಡಲು ನಾನು ಹಣವನ್ನು ಉಳಿಸಿದೆ ಎಂದು ಗುಲಾಬ್ ಹೇಳುತ್ತಾರೆ.

ಆಗಸ್ಟ್ 5, 2019 ರಂದು ಹಳ್ಳಿಯ ನನ್ನ ಮನೆಯ ಛಾವಣಿಯ ಮೇಲೆ ಕ್ರಿಕೆಟ್ ಮ್ಯಾಟ್ ನೊಂದಿಗೆ ಕೇವಲ ಮೂರು ಮಕ್ಕಳೊಂದಿಗೆ ಪ್ರಾರಂಭಿಸಿದೆ. ಪಂಜಾಬ್ ಪಬ್ಲಿಕ್ ಸ್ಕೂಲ್ PPS ನಭಾದ ತರಬೇತುದಾರ ಅಭಿಷೇಕ್ ಜಲೋಟಾ ಅವರನ್ನು ನೇಮಿಸಲಾಯಿತು. ಅದಾಗಲೆ ಅವರು ತಮ್ಮದೇ ಆದ ಅಕಾಡೆಮಿಯನ್ನು ನಡೆಸುತ್ತಿದ್ದರು.

<strong>ಕ್ರಿಕೆಟ್ ಅಕಾಡೆಮಿ ಮಕ್ಕಳೊಂದಿಗೆ ಗುಲಾಬ್ ಸಿಂಗ್ ಶೆರ್ಗಿಲ್</strong>
ಕ್ರಿಕೆಟ್ ಅಕಾಡೆಮಿ ಮಕ್ಕಳೊಂದಿಗೆ ಗುಲಾಬ್ ಸಿಂಗ್ ಶೆರ್ಗಿಲ್

ಜಲೋಟಾ ನನ್ನ ಮನೆಯ ಛಾವಣಿಯ ಮೇಲೆ 10 ತಿಂಗಳು ತರಬೇತಿ ನೀಡಿದರು. ಏಪ್ರಿಲ್ 2020 ರಲ್ಲಿ, ನಾವು ಕೇವಲ ಮೂರು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲು ನನ್ನ ಸ್ವಂತ ಹೊಲದ ಒಂದು ಎಕರೆಗಿಂತ ಕಡಿಮೆ ಅಳತೆಯ ಮೈದಾನಕ್ಕೆ ಸ್ಥಳಾಂತರಗೊಂಡೆವು. ನಂತರ ಕೋವಿಡ್ ಬಂತು. ಮಕ್ಕಳು ತಮ್ಮ ಮನೆ ಮತ್ತು ಮೊಬೈಲ್ ಫೋನ್‌ಗಳಿಗೆ ಸೀಮಿತರಾಗಿದ್ದರು. ವಿದ್ಯಾರ್ಥಿನಿಯರನ್ನು ಟಿವಿಯಿಂದ ದೂರವಿಡಲು ಕ್ರಿಕೆಟ್ ಆಡಲು ಕಳುಹಿಸುವಂತೆ ಪೋಷಕರ ಮನವೊಲಿಸಲು ನಾನು ನನ್ನ ಹಳ್ಳಿಯಲ್ಲಿ ಮನೆ ಮನೆಗೆ ಹೋಗಿದ್ದೆ. ಆಗ 10 ಮಕ್ಕಳು ಸೇರ್ಪಡೆಯಾದರು ಎಂದು ಪಯಣವನ್ನು ವಿವರಿಸುತ್ತಾರೆ. 

ಜುಲೈ 2021 ರಲ್ಲಿ, ನಮ್ಮ ಮೂವರು ಹುಡುಗಿಯರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಸಂಗ್ರೂರ್ ಜಿಲ್ಲೆಯ ಅಂಡರ್-19 ತಂಡಕ್ಕಾಗಿ ಆಡಿದರು. ಕಳೆದ ವರ್ಷ, ಸಂಗ್ರೂರ್ ಜಿಲ್ಲೆಗೆ ಇಬ್ಬರು ಹುಡುಗಿಯರನ್ನು 15 ವರ್ಷದೊಳಗಿನವರಿಗೆ ಆಯ್ಕೆ ಮಾಡಲಾಯಿತು. ಈ ವರ್ಷ ಪಟಿಯಾಲ ಜಿಲ್ಲೆಯಲ್ಲಿ ಪ್ರಯೋಗಾರ್ಥವಾಗಿ ಶಾರ್ಟ್-ಲಿಸ್ಟ್ ಮಾಡಬೇಕಾಗಿದೆ. ನಮ್ಮ ಹಳ್ಳಿಯ ಏಳು ಹುಡುಗಿಯರು ಪಟಿಯಾಲಾ ಅಂಡರ್-15 ಬಾಲಕಿಯರ ತಂಡಕ್ಕೆ ಬರಬಹುದು ಎಂದು ಭಾವಿಸಿದ್ದೇನೆ ಎನ್ನುತ್ತಾರೆ. 

ಸಂಜೆ 4.30 ರಿಂದ 7.30 ರವರೆಗೆ ಹವಾಮಾನಕ್ಕೆ ಅನುಗುಣವಾಗಿ ಹಳ್ಳಿಯ ಹುಡುಗಿಯರಿಗೆ ಪ್ರತಿದಿನ ಮೂರು ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ.

ನಮ್ಮ ಎಲ್ಲಾ ವಿದ್ಯಾರ್ಥಿನಿಯರನ್ನು ಐಪಿಎಲ್ ವೀಕ್ಷಿಸಲು ಮತ್ತು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (PCA) ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡುವ ಪಂದ್ಯಗಳಿಗೆ ಕರೆದೊಯ್ಯುತ್ತೇನೆ. ಪಿಸಿಎ, ತರಬೇತಿ ಪಡೆಯುವ ಹೆಣ್ಣುಮಕ್ಕಳಿಗೆ ಟಿಕೆಟ್‌ಗಳನ್ನು ಪ್ರಾಯೋಜಿಸುತ್ತದೆ. ಆಟಗಾರರು ಈ ಮಕ್ಕಳನ್ನು ಭೇಟಿಯಾಗುತ್ತಾರೆ. ಇದು ಅವರ ನೈತಿಕತೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಗುಲಾಬ್ ಸಿಂಗ್ ಶೆರ್ಗಿಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com