ವಿಜಯಪುರದಲ್ಲಿ ಪ್ರತಿಭಾವಂತ ವ್ಹೀಲ್‌ಚೇರ್ ಕ್ರಿಕೆಟಿಗರು! ಸರ್ಕಾರದಿಂದ ಬೇಕಿದೆ ನೆರವು

ನಾವೆಲ್ಲರೂ ಪ್ರತಿ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಕನಿಷ್ಠ ಐದು ಗಂಟೆಗಳ ಕಾಲ ಅಭ್ಯಾಸ ಮಾಡುತ್ತೇವೆ ಎಂದು ವ್ಹೀಲ್‌ಚೇರ್ ಕ್ರಿಕೆಟ್ ಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹೇಶ್ ತೋಟದ ಹೇಳಿದರು.
ದಿವ್ಯಾಂಗ ಕ್ರಿಕೆಟಿಗರ ಅಭ್ಯಾಸದ ಚಿತ್ರ
ದಿವ್ಯಾಂಗ ಕ್ರಿಕೆಟಿಗರ ಅಭ್ಯಾಸದ ಚಿತ್ರ

ವಿಜಯಪುರ: ಪ್ರತಿ ಭಾನುವಾರ ಅನಿಲ್ ರಾಠೋಡ್ (30) ಸಿಂದಗಿ ತಾಲೂಕಿನ ಕೆರುಟಗಿ ಗ್ರಾಮದಿಂದ ವಿಜಯಪುರ ಜಿಲ್ಲಾ ಕ್ರೀಡಾಂಗಣದವರೆಗೆ ತಾವು ಹೆಚ್ಚು ಇಷ್ಟಪಡುವ ಆಟ ಆಡಲು ಬರುತ್ತಾರೆ. ಪೋಲಿಯೋ ಪೀಡಿತ ಅನಿಲ್ ತನ್ನಂತಹ ಇತರ ಆಟಗಾರರೊಂದಿಗೆ ಕ್ರಿಕೆಟ್ ಅಭ್ಯಾಸ ಮಾಡಲು ತನ್ನ ಗ್ರಾಮದಿಂದ 60 ಕಿ.ಮೀ ದೂರದಲ್ಲಿರುವ ಕ್ರೀಡಾಂಗಣಕ್ಕೆ ಹೋಗುತ್ತಾರೆ. ಪೋಲಿಯೊದಿಂದಾಗಿ ಅವರ ಒಂದು ಕಾಲಿನ ಬಲ ಕಳೆದುಕೊಂಡು, ಗಾಲಿ ಕುರ್ಚಿ ಮೇಲಿದ್ದರೂ ಕ್ರಿಕೆಟ್‌ ಮೇಲಿನ ಅವರ ಉತ್ಸಾಹ ಪ್ರವರ್ಧಮಾನಕ್ಕೆ ಬರುತ್ತಲೇ ಇದೆ.

'ಕರ್ನಾಟಕ ರಾಜ್ಯ ದಿವ್ಯಾಂಗ ಕ್ರಿಕೆಟ್ ಅಸೋಸಿಯೇಷನ್' ಅಡಿಯಲ್ಲಿ ಕ್ರಿಕೆಟ್ ಆಡುವ ವಿಜಯಪುರ ಜಿಲ್ಲೆಯ 25 ವೀಲ್ಹ್ ಚೇರ್ ಕ್ರಿಕೆಟಿಗರಲ್ಲಿ ಅನಿಲ್ ಕೂಡಾ ಒಬ್ಬರು. ಇದನ್ನು 2008 ರಲ್ಲಿ ದಿವ್ಯಾಂಗರಿಗಾಗಿ ರಚಿಸಲಾಯಿತು. 2020 ರಲ್ಲಿ ವೀಲ್ಹ್ ಚೇರ್ ಕ್ರಿಕೆಟಿಗರಿಗೆ ಪ್ರತ್ಯೇಕ ವಿಭಾಗವನ್ನು ರಚಿಸಲಾಯಿತು. ಈ ವಿಭಾಗ ಈಗ ರಾಜ್ಯಾದ್ಯಂತ 120 ಕ್ಕೂ ಹೆಚ್ಚು ಆಟಗಾರರನ್ನು ಹೊಂದಿದೆ. ಅವರು ಎಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾರೆ ಎಂದು ರಾಜ್ಯ ವ್ಹೀಲ್‌ಚೇರ್ ಕ್ರಿಕೆಟಿಗರ ವಿಭಾಗದ ಮುಖ್ಯಸ್ಥ ಹಾಗೂ ಕರ್ನಾಟಕ ವ್ಹೀಲ್‌ಚೇರ್ ಕ್ರಿಕೆಟ್ ತಂಡದ ನಾಯಕ ಮಹೇಶ್ ತೋಟದ ಹೇಳುತ್ತಾರೆ.

ಎರಡು ವರ್ಷದವನಿದ್ದಾಗ ಪೋಲಿಯೊಗೆ ತುತ್ತಾಗಿ ದಿವ್ಯಾಂಗರಾದ ಮಹೇಶ್ ಪ್ರೌಢಶಾಲೆಯಲ್ಲಿ ಕ್ರಿಕೆಟ್ ಆಡಲು ಆರಂಭಿಸಿದ್ದಾರೆ. ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಅವರಿಗೆ ವಿಕೆಟ್ ಗಳ ನಡುವೆ ಓಡಾಡಲು ರನ್ನರ್ ನೀಡಲಾಗುತ್ತಿತಂತೆ. ಆದರೆ 2016 ರಲ್ಲಿ ಮಹೇಶ್ ವೃತ್ತಿಪರ ಪ್ಯಾರಾ-ಸಿಟ್ಟಿಂಗ್ ಕ್ರಿಕೆಟ್ ಆಡಲು ಪ್ರಾರಂಭಿಸಿದ್ದು, ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದು, 2020 ರಲ್ಲಿಅವರು ವೀಲ್ಹ್ ಚೇರ್ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡರು. 2020ರಲ್ಲಿ ಕರ್ನಾಟಕ ರಾಜ್ಯ ದಿವ್ಯಾಂಗ ಕ್ರಿಕೆಟ್ ಸಂಸ್ಥೆಯ ರಾಜ್ಯಾಧ್ಯಕ್ಷ ಎಂ.ಆರ್.ಮಹೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಮಹೇಶ್ ಅಗಲಿ ಅವರನ್ನು ಭೇಟಿಯಾದ ನಂತರ, ಅವರು ವ್ಹೀಲ್‌ಚೇರ್ ವಿಭಾಗ ತೆರೆದು ಸಂಪೂರ್ಣ ಜವಾಬ್ದಾರಿ ನೀಡಿದರು ಎಂದು ತಿಳಿಸಿದರು. 

ವಿಜಯಪುರ ನಗರದ ನಿವಾಸಿಯಾದ ಮಹೇಶ್ (32) ತನ್ನ ದೈನಂದಿನ ಅಗತ್ಯಗಳಿಗಾಗಿ ಮನೆ ಬಾಡಿಗೆಯಿಂದ ಸ್ವಲ್ಪ ಹಣ ಪಡೆಯುತ್ತಾರೆ. ಅಧಿಕಾರ ವಹಿಸಿಕೊಂಡ ನಂತರ ತನ್ನಂತಹ ಆಟಗಾರರನ್ನು ಕ್ರಿಕೆಟ್‌ಗೆ ಕರೆತರಲು ಶ್ರಮಿಸುತ್ತಿದ್ದೇನೆ. ನಮ್ಮ ವಿಜಯಪುರ ಗುಂಪಿನಲ್ಲಿ 25 ಜನರಿದ್ದೇವೆ. ಜಿಲ್ಲೆಯ ವಿವಿಧೆಡೆ ನೆಲೆಸಿರುವ ಇವರು ಸಮಾಜದ ನಾನಾ ರಂಗಗಳಿಂದ ಬಂದವರು. ಆದರೆ ಇವರೆಲ್ಲರಿಗೂ ಕ್ರಿಕೆಟ್ ಬಗ್ಗೆ ಅಪಾರವಾದ ಒಲವು. ಅವರು ಪೋಲಿಯೊದಿಂದ ಅಥವಾ ಅಪಘಾತದಿಂದ ಅಂಗವಿಕಲರಾಗಿದ್ದಾರೆ. ನಾವೆಲ್ಲರೂ ಪ್ರತಿ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಕನಿಷ್ಠ ಐದು ಗಂಟೆಗಳ ಕಾಲ ಅಭ್ಯಾಸ ಮಾಡುತ್ತೇವೆ ಎಂದು ವ್ಹೀಲ್‌ಚೇರ್ ಕ್ರಿಕೆಟ್ ಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹೇಶ್ ಹೇಳಿದರು. 

<strong>ವ್ಹೀಲ್‌ಚೇರ್ ಕ್ರಿಕೆಟಿಗರು</strong>
ವ್ಹೀಲ್‌ಚೇರ್ ಕ್ರಿಕೆಟಿಗರು

ಮಹೇಶ್ ಅವರು ದೆಹಲಿ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾರೆ ಮತ್ತು ದೆಹಲಿಯಲ್ಲಿ ಇಂಡಿಯನ್ ವೀಲ್‌ಚೇರ್ ಪ್ರೀಮಿಯರ್ ಲೀಗ್ (IWPL) ನಲ್ಲಿ ಟೀಮ್ ಹೈದರಾಬಾದ್‌ಗಾಗಿ ಆಡಿದ್ದಾರೆ. ಆದಾಗ್ಯೂ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಂತೆ ಹರಾಜಿನ ಸಮಯದಲ್ಲಿ ಆಟಗಾರರು ಭಾರಿ ಹಣವನ್ನು ಪಡೆಯುತ್ತಾರೆ, ಐಡಬ್ಲ್ಯುಪಿಎಲ್‌ನಲ್ಲಿ ಆಟಗಾರರು ಯಾವುದೇ ಹಣವನ್ನು ಪಡೆಯುವುದಿಲ್ಲ ಎಂದು ಅವರು ವಿಷಾದಿಸಿದರು. ಸಂಘಟಕರಿಂದ ಅವರು ಪಡೆಯುವುದು ವಸತಿ ಮತ್ತು ಆಹಾರ ಮಾತ್ರ. ಸ್ಥಳಕ್ಕೆ ಪ್ರಯಾಣಿಸುವ ವೆಚ್ಚವನ್ನು ಸಹ ಆಟಗಾರರು ಭರಿಸುತ್ತಾರೆ”ಎಂದು ಅವರು ಹೇಳಿದರು.

ಅವರ ಅಗಾಧ ಉತ್ಸಾಹದ ಹೊರತಾಗಿಯೂ, ಆಟಗಾರರು ಯಾವುದೇ ಆರ್ಥಿಕ ನೆರವು ಅಥವಾ ಮನ್ನಣೆ ಪಡೆಯುವುದಿಲ್ಲ. ಅವರ ಸಂಘವು ಸರ್ಕಾರದಿಂದ ಅಥವಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ಗುರುತಿಸಲ್ಪಟ್ಟಿಲ್ಲ. ಇದರಿಂದಾಗಿ, ನಮಗೆ ಯಾವುದೇ ಹಣಕಾಸಿನ ನೆರವು ಅಥವಾ ಇತರ ಪ್ರಯೋಜನ ಸಿಗಲ್ಲ. ನಾವು ಕ್ರಿಕೆಟ್ ಆಡುವುದು ನಮ್ಮ ಉತ್ಸಾಹದಿಂದ ಮಾತ್ರ. ಒಬ್ಬ ವ್ಯಕ್ತಿಯು ತನ್ನ ಜೇಬಿನಿಂದ ಹಣವನ್ನು ಖರ್ಚು ಮಾಡಿ ಅಥವಾ ಪ್ರಾಯೋಜಕರ ಸಹಾಯವನ್ನು ಪಡೆದು ಎಷ್ಟು ದಿನ ಆಟವನ್ನು ಮುಂದುವರಿಸಬಹುದು ಎಂದು ಮಹೇಶ್ ಪ್ರಶ್ನಿಸುತ್ತಾರೆ.

ವಿಶ್ವದಾದ್ಯಂತ ದಿವ್ಯಾಂಗ ಕ್ರಿಕೆಟ್ ಆಟಗಾರರು ಬಳಸುವ ವೃತ್ತಿಪರ ಗಾಲಿಕುರ್ಚಿ ಖರೀದಿಸಲು ಆಟಗಾರರು ಅಗತ್ಯವಾದ ಹಣವನ್ನು ಹೊಂದಿಲ್ಲ. ಅಂಗವಿಕಲರಿಗೆ ಸರ್ಕಾರದಿಂದ ನೀಡುವ ಸಾಮಾನ್ಯ ಗಾಲಿಕುರ್ಚಿಗಳನ್ನು ಬಳಸುತ್ತೇವೆ. ಆದರೆ ಅವರು ನಿಧಾನ ಚಲನೆಗೆ ವಿನ್ಯಾಸಗೊಳಿಸಿರುವುದರಿಂದ ಅವುಗಳನ್ನು ನಡೆಸಲು ಕಷ್ಟವಾಗುತ್ತದೆ. ವೃತ್ತಿಪರವಾಗಿ ವಿನ್ಯಾಸಗೊಳಿಸಿದ ಗಾಲಿಕುರ್ಚಿಗಳನ್ನು ಉತ್ತಮ ತಂತ್ರಕ್ಕಾಗಿ ತಯಾರಿಸಲಾಗುತ್ತದೆ, ಆದರೆ ದುಬಾರಿಯಾಗಿದೆ. ಬೆಂಗಳೂರು ಮೂಲದ ಎನ್‌ಜಿಒ ‘ಮಿತ್ರ’ ಅವರಿಗೆ ಪಂದ್ಯಾವಳಿಗಳಲ್ಲಿ ವೃತ್ತಿಪರ ಗಾಲಿಕುರ್ಚಿಗಳನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು.

ಆಟಗಾರರಿಗೆ ವೃತ್ತಿಪರ ಗಾಲಿಕುರ್ಚಿಗಳನ್ನು ನೀಡಲು ಸಾಧ್ಯವಾಗದ ಕಾರಣ ಸರ್ಕಾರ ಒದಗಿಸಬೇಕು. ಕ್ರೀಡಾ ಇಲಾಖೆಯು ನಮಗೆ ಕ್ರಿಕೆಟ್ ಕಿಟ್ ಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. ಆದರೆ ಈ ಆಟಗಾರರಿಗೆ ಗಾಲಿಕುರ್ಚಿ ಅಥವಾ ಕ್ರಿಕೆಟ್ ಕಿಟ್ ನೀಡಲು ಯಾವುದೇ ಯೋಜನೆ ಅಥವಾ ವಿಶೇಷ ಅನುದಾನ ಇಲ್ಲದಿರುವುದರಿಂದ ಅಸಹಾಯಕರಾಗಿದ್ದೇವೆ ಎನ್ನುತ್ತಾರೆ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಅಧಿಕಾರಿಗಳು.

ಇದರಿಂದ ಹಿಂಜರಿಯದ ಮಹೇಶ್ ನಮಗೆ ಇಷ್ಟಪಡುವ ಕ್ರೀಡೆ ಆಡುವುದನ್ನು ನಾವು ಮುಂದುವರಿಸುತ್ತೇವೆ, “ನಮಗೆ ತೃಪ್ತಿಯ ಭಾವನೆ ಮತ್ತು ನಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಸಿಗುತ್ತದೆ. ನಾವು ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತೇವೆ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com