ಉಡುಪಿ: ಪರಿಸರ ಸಂರಕ್ಷಣೆಗೆ ದಿವ್ಯಾಂಗರ ಕೊಡುಗೆ! ಶಾಲಾ-ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ಜಾಗೃತಿ

'ಶಾಲಾ-ಕಾಲೇಜುಗಳನ್ನು ಸಂಪರ್ಕಿಸಿ, ಕ್ಯಾಂಪಸ್‌ಗಳಲ್ಲಿ ಸಸಿ ನೆಡುವ ಈ ಕಾರ್ಯಕ್ರಮ ನಮಗೆ ಹೆಚ್ಚಿನ ಉತ್ಸಾಹ ಹಾಗೂ ಜವಾಬ್ದಾರಿಯ ಪ್ರಜ್ಞೆಯನ್ನು ನೀಡುತ್ತದೆ. ಆಗಸ್ಟ್ ಮೊದಲ ವಾರ ಅಥವಾ ಎರಡನೇ ವಾರದ ಅಂತ್ಯದ ವೇಳೆಗೆ, ಎಲ್ಲಾ 1,000 ಸಸಿ ನೆಡುವುದನ್ನು ಪೂರ್ಣಗೊಳಿಸುತ್ತೇವೆ'- ದಿವ್ಯಾಂಗ ಜಗದೀಶ್ ಭಟ್
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಉಡುಪಿ: ದೃಢಸಂಕಲ್ಪ ಮತ್ತು ಸಮುದಾಯದ ಮನೋಭಾವದಿಂದ ಉಡುಪಿಯಲ್ಲಿ ದಿವ್ಯಾಂಗರ ಗುಂಪೊಂದು ಜಿಲ್ಲೆಯಲ್ಲಿ 1,000 ಸಸಿಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿದೆ. ಉಡುಪಿಯ ಎನ್‌ಜಿಒ ಪೀಸ್ ಫೌಂಡೇಶನ್, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿರುವ ಈ ಕಾರ್ಯಕ್ರಮ ದಿವ್ಯಾಂಗರ ಸಾಮರ್ಥ್ಯ ಪ್ರದರ್ಶಿಸುವ ಜೊತೆಗೆ ನಗರ ಪ್ರದೇಶಗಳಲ್ಲಿ ಅರಣ್ಯೀಕರಣಕ್ಕೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ.

ಈ ತಂಡವು ಜಿಲ್ಲೆಯಾದ್ಯಂತ ಸಂಚರಿಸಲಿದೆ. ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಿಗೆ ಆಗಮಿಸಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಸಿಗಳನ್ನು ನೆಡಲಿದೆ.

ಪರಿಸರದ ಮೇಲೆ ಗಮನಾರ್ಹ ಪರಿಣಾಮ ಬೀರಲು ದೈಹಿಕ ಮಿತಿಗಳು ಅಡ್ಡಿಯಾಗುವುದಿಲ್ಲ ಎಂದು ಸಾಬೀತುಪಡಿಸಲು ನಮ್ಮಂತಹ ಜನರು ಬಯಸುತ್ತಾರೆ ಎಂದು ಕಾರ್ಯಕ್ರಮದ ಭಾಗವಾಗಿರುವ ದಿವ್ಯಾಂಗ ವ್ಯಕ್ತಿ ಜಗದೀಶ್ ಭಟ್ ದಿ ನ್ಯೂ ಸಂಡೆ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ದಿನನಿತ್ಯದ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂಬುದು ಸತ್ಯ. ಆದರೆ, ಮುಂದಿನ ಉತ್ತಮ ಪರಿಸರಕ್ಕಾಗಿ ನಮಗೆ ಆಕಾಂಕ್ಷೆಗಳಿಲ್ಲ ಎಂದು ಇದರ ಅರ್ಥವಲ್ಲ. ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳನ್ನು ಸಂಪರ್ಕಿಸಿ, ಕ್ಯಾಂಪಸ್‌ಗಳಲ್ಲಿ ಸಸಿ ನೆಡುವ ಈ ಕಾರ್ಯಕ್ರಮ ನಮಗೆ ಹೆಚ್ಚಿನ ಉತ್ಸಾಹ ಹಾಗೂ ಜವಾಬ್ದಾರಿಯ ಪ್ರಜ್ಞೆಯನ್ನು ನೀಡುತ್ತದೆ. ಆಗಸ್ಟ್ ಮೊದಲ ವಾರ ಅಥವಾ ಎರಡನೇ ವಾರದ ಅಂತ್ಯದ ವೇಳೆಗೆ, ಎಲ್ಲಾ 1,000 ಸಸಿ ನೆಡುವುದನ್ನು ಪೂರ್ಣಗೊಳಿಸುತ್ತೇವೆ ಎಂದು ಅವರು ತಿಳಿಸಿದರು.

ದಿವ್ಯಾಂಗರಿಂದ ಸಸಿ ನೆಡುವ ಕಾರ್ಯಕ್ರಮ
ದಿವ್ಯಾಂಗರಿಂದ ಸಸಿ ನೆಡುವ ಕಾರ್ಯಕ್ರಮ

ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಮಾತನಾಡಿ ಶಾಲಾ- ಕಾಲೇಜುಗಳು ಮತ್ತಿತರ ಸಂಸ್ಥೆಗಳಲ್ಲಿ ಇಂತಹ ಕಾರ್ಯಕ್ರಮ ಯುವ ಪೀಳಿಗೆಗೆ ಅರಣ್ಯೀಕರಣ ಅಭಿಯಾನ ಕೈಗೊಳ್ಳಲು ಉತ್ತಮ ಸಂದೇಶ ಹರಡುತ್ತದೆ. ದಿವ್ಯಾಂಗರಲ್ಲಿ ನೈತಿಕತೆ ಹೆಚ್ಚಿಸಲು ಪೀಸ್ ಫೌಂಡೇಶನ್ ಈ ಪ್ರದೇಶದಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದು ಅವರು ಹೇಳಿದರು.

ಸಾಂದರ್ಭಿಕ ಚಿತ್ರ
400 ವರ್ಷ ಬಾಳಿಕೆ ಬರುವ ಪರಿಸರ ಸ್ನೇಹಿ ಬೆಂಚ್: ಪ್ಲಾಸ್ಟಿಕ್ ಬಾಟಲಿ ಬಳಸಿ ಆಸನಗಳ ನಿರ್ಮಿಸುವ CODP ಸಂಸ್ಥೆ!

ಪೀಸ್ ಫೌಂಡೇಶನ್ 2017 ರಲ್ಲಿ ಸ್ಥಾಪಿತವಾದ ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ. ಇದನ್ನು ಫಿಸಿಯಾಟ್ರಿಸ್ಟ್ ಡಾ. ಸೋನಿಯಾ ನಡೆಸುತ್ತಿದ್ದಾರೆ. ಪೀಸ್ ಫೌಂಡೇಶನ್‌ ತಂಡ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕಾಗಿ ದಿವ್ಯಾಂಗರಿಗಾಗಿ ಶಾಲೆಗಳು ಮತ್ತು ಕಾಲೇಜುಗಳನ್ನು ಸಂಪರ್ಕಿಸುತ್ತದೆ. ಇದು ದೈಹಿಕ ಸಾಮರ್ಥ್ಯವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ನಮ್ಮ ಪರಿಸರದ ಸುಧಾರಣೆಗೆ ಕೊಡುಗೆ ನೀಡಬಹುದು ಎಂದು ತೋರಿಸುತ್ತದೆ. ಇಂದು ಅವರು ಕೇವಲ ಸಸಿಗಳನ್ನು ನೆಡುತ್ತಿಲ್ಲ, ಉತ್ತಮ ನಾಳೆಯ ಭರವಸೆಯನ್ನು ನೆಡುತ್ತಿದ್ದಾರೆ ಎಂದು ಸೋನಿಯಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com