ಶಾಲೆ ಅಂದರೆ ಹೀಗಿರಬೇಕು: ಹೈಟೆಕ್‌ ಸ್ಪರ್ಶದೊಂದಿಗೆ ಮಾದರಿಯಾದ ಸರ್ಕಾರಿ ಸ್ಕೂಲ್!

ಮೊದಲು ಹತ್ತರಲ್ಲಿ ಹನ್ನೊಂದು ಅನ್ನುವಂತೆ ಇತ್ತು ಶಿವಮೊಗ್ಗದ ಈ ಸರ್ಕಾರಿ ಶಾಲೆ. ಆದರೀಗ ಶಾಲೆಯ ಖದರೇ ಬದಲಾಗಿದೆ. ಬಂದವರೆಲ್ಲಾ, ಶಾಲೆ ಅಂದರೆ ಹೀಗಿರಬೇಕು ಎನ್ನುವ ರೀತಿಯಲ್ಲಿ ಬದಲಾಗಿದೆ.
ಸರ್ಕಾರಿ ಶಾಲೆ.
ಸರ್ಕಾರಿ ಶಾಲೆ.
Updated on

ಶಿವಮೊಗ್ಗದ ಈ ಶಾಲೆಯ ಮುಂದೆ ನಿಂತರ ಹೀಗನಿಸುತ್ತದೆ. ದೂರದಿಂದ ನೋಡಿದರೆ ಇದ್ಯಾವುದೋ ಖಾಸಗಿ ಶಾಲೆಯ ಅನಿಸಿಬಿಟ್ಟರೆ ಆಶ್ಚರ್ಯ ಪಡಬೇಕಿಲ್ಲ. ಹತ್ತಿರ ಹೋದರೆ, ಅರೆ, ಸರ್ಕಾರಿ ಸ್ಕೂಲ್‌ ಹೀಗುಂಟ? ಅಂತ ಚಕಿತಗೊಳಿಸುವಷ್ಟು ಚೆನ್ನಾಗಿದೆ ಈ ಶಾಲೆ.

ಮೊದಲು ಹತ್ತರಲ್ಲಿ ಹನ್ನೊಂದು ಅನ್ನುವಂತೆ ಇತ್ತು ಶಿವಮೊಗ್ಗದ ಈ ಸರ್ಕಾರಿ ಶಾಲೆ. ಆದರೀಗ ಶಾಲೆಯ ಖದರೇ ಬದಲಾಗಿದೆ. ಬಂದವರೆಲ್ಲಾ, ಶಾಲೆ ಅಂದರೆ ಹೀಗಿರಬೇಕು ಎನ್ನುವ ರೀತಿಯಲ್ಲಿ ಬದಲಾಗಿದೆ.

ಕಲಿಕಾ ಉಪಕರಣಗಳು, ಮೂಲಸೌಕರ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಕಾಂಪೌಂಡ್, ದಕ್ಷ ಶಿಕ್ಷಕರು, ಇಂಗ್ಲಿಷ್ ಮಾಧ್ಯಮದಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಆರಂಭದಲ್ಲಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು. ಆದರೆ, ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ ಬೆನ್ನಲ್ಲೇ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

ಈ ಸರ್ಕಾರಿ ಶಾಲೆ ಇರುವುದು ಶಿವಮೊಗ್ಗದ ಕೆ.ಆರ್.ಪುರಂನಲ್ಲಿ. 89 ವರ್ಷದ ಹಳೆಯ ಶಾಲೆಯಲ್ಲಿ 2017ರಲ್ಲಿ ಕೇವಲ 7 ಮಂದಿ ವಿದ್ಯಾರ್ಥಿಗಳು ಮಾತ್ರ ವ್ಯಾಸಾಂಗ ಮಾಡುತ್ತಿದ್ದರು. ಶಾಲೆ ಮುಚ್ಚುವ ಹಂತಕ್ಕೆ ತಲುಪಿತ್ತು. ಆದರೆ, ಶಿಕ್ಷಕರು, ಸ್ಥಳೀಯರು, ಬ್ಲಾಕ್ ಶಿಕ್ಷಣಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಸಾಮೂಹಿಕ ಪ್ರಯತ್ನದಿಂದ ಶಾಲೆಗೆ ಈಗ ಹೊಸ ಕಾಯಕಲ್ಪ ಸಿಕ್ಕಿದೆ.

ಸರ್ಕಾರಿ ಶಾಲೆ.
ಶಿವಮೊಗ್ಗ: ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆ ಉಳಿಸಿದ ಗ್ರಾಮಸ್ಥರು!

ಶಾಲೆಯ ಸಹಾಯಕ ಶಿಕ್ಷಕ ಬಿ ರಾಮಾಚಾರಿ ಅವರು ಮಾತನಾಡಿ, 2018 ರಲ್ಲಿ ಶಾಲೆಗೆ ನಿಯೋಜಿಸಿದಾಗ, ಕೇವಲ ಏಳು ವಿದ್ಯಾರ್ಥಿಗಳು ಇದ್ದರು. ಶಾಲೆ ಗೋದಾಮಿನಂತೆ ಕಾಣುತ್ತಿತ್ತು. ಕಾನೂನುಬಾಹಿರ ಚಟುವಟಿಕೆ ನಡೆಯುವ ಸ್ಥಳದಂತೆ ಕಾಣುತ್ತಿದ್ದು. ರಾತ್ರಿಯಾಗುತ್ತಿದ್ದಂತೆಯೇ ಕೆಲವು ಮಾದಕ ವ್ಯಸನ ಮತ್ತು ಜೂಜಿನಲ್ಲಿ ಅಡ್ಡೆಯಾಗಿಸಿಕೊಂಡಿದ್ದರು.

ಶಾಲೆಯ ವೈಭವದ ದಿನಗಳನ್ನು ನೆನೆದರೆ, ಪುನಃಸ್ಥಾಪನೆ ಅತ್ಯಂತ ಮುಖ್ಯವಾಗಿತ್ತು. ಬ್ರಿಟಿಷರ ಕಾಲದಲ್ಲಿ ಸ್ಥಾಪನೆಯಾದ ಶಾಲೆಯನ್ನು ಉಳಿಸುವ ಸವಾಲನ್ನು ನಾನು ವೈಯಕ್ತಿಕವಾಗಿ ತೆಗೆದುಕೊಂಡೆ. ಕೆಲವು ಸ್ಥಳೀಯರ ಸಹಾಯ ಕೇಳಿದೆ. ‘ಸರ್ಕಾರಿ ಶಾಲೆ ಉಳಿಸಿ’ ಎಂಬ ಚಳುವಳಿ ಆರಂಭಿಸಿದೆವು,

ಅದಕ್ಕಾಗಿ ಸಾಕಷ್ಟು ಕರಪತ್ರಗಳನ್ನು ಮುದ್ರಿಸಿ ಜನರಿಗೆ ಹಂಚಿದೆವು, ನಂತರ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವಂತೆ ಮನವರಿಕೆ ಮಾಡಿದೆವು. ಮೊದಲಿಗೆ ಇದು ಕಷ್ಟಕರವಾಗಿತ್ತು, ಸಾಕಷ್ಟು ಮಂದು ನಿರುತ್ಸಾಹ ತೋರಿದರು. ಶಾಲೆಯ ಅಭಿವೃದ್ಧಿಗೆ ಹಣವಿಲ್ಲರಲಿಲ್ಲ. ಆದರೂ ನಮ್ಮ ಹೋರಾಟ ಮುಂದುವರೆಯಿತು. ಈ ಹಂತದಲ್ಲಿ ಆಗಿನ ಕಾರ್ಪೊರೇಟರ್ ಸುನಿತಾ ಅಣ್ಣಪ್ಪ ಕೂಡ ನಮ್ಮೊಂದಿಗೆ ಕೈಜೋಡಿಸಿ ಪುನಶ್ಚೇತನ ಕಾರ್ಯಕ್ಕೆ ಹಣ ಪಡೆಯಲು ಸಹಾಯ ಮಾಡಿದರು.

ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಸದಸ್ಯರು ಕೂಡ ‘ಸರ್ಕಾರಿ ಶಾಲೆ ಉಳಿಸಿ’ ಆಂದೋಲನವನ್ನು ಪ್ರಚಾರ ಮಾಡಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಕುರಿತು ಮನವರಿಕೆ ಮಾಡುವ ಕೆಲಸ ಮಾಡಿದರು.

ಸರ್ಕಾರಿ ಶಾಲೆ.
ಸರ್ಕಾರದ ನೆರವಿಲ್ಲದೆಯೇ ಮಾದರಿ ಸರ್ಕಾರಿ ಶಾಲೆ ನಿರ್ಮಿಸಿದ ಕೊಡಗಿನ ಗ್ರಾಮಸ್ಥರು!

ಕಲಿಕಾ ಉಪಕರಣಗಳು, ಗಟ್ಟಿಮುಟ್ಟಾದ ಮೂಲಸೌಕರ್ಯ, ಶುದ್ಧ ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಕಾಂಪೌಂಡ್, ದಕ್ಷ ಶಿಕ್ಷಕರು, ಇಂಗ್ಲಿಷ್ ಮಾಧ್ಯಮದಂತಹ ಮೂಲಭೂತ ಸೌಕರ್ಯಗಳ ಕೊರತೆಯನ್ನು ಮುಂದಿಟ್ಟುಕೊಂಡು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು.

2018ರಲ್ಲಿ ಕಾರ್ಪೊರೇಟರ್ ಹೊರತುಪಡಿಸಿ ಸ್ಥಳೀಯ ರಾಜಕಾರಣಿಗಳು, ಆಗಿನ ಶಾಸಕ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇನ್ನಿತರರು ಹೆಚ್ಚಿನ ಅನುದಾನ ತಂದು ಶಾಲೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಅಭಿವೃದ್ಧಿಪಡಿಸಿದರು. ಈ ಎಲ್ಲಾ ಪ್ರಯತ್ನಗಳು ಫಲ ನೀಡಿತು.

ಸುಮಾರು ಒಂಬತ್ತು ದಶಕಗಳಷ್ಟು ಹಳೆಯದಾದ ಶಾಲೆಯು ಇದೀಗ ಸ್ಮಾರ್ಟ್ ತರಗತಿಗಳು, ಸಿಸಿಟಿವಿ, ಡಿಜಿಟಲ್ ಲೈಬ್ರರಿ ಮತ್ತು ಇತರ ಆಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದೀಗ ಹೈಟೆಕ್ ಸರ್ಕಾರಿ ಶಾಲೆಯಾಗಿ ಹೊರಹೊಮ್ಮಿದೆ, ಇದೀಗ ಶಾಲೆಯಲ್ಲಿ 275 ವಿದ್ಯಾರ್ಥಿಗಳಿದ್ದಾರೆ. ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ 11 ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ. 2023 ರಲ್ಲಿ PM ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾಗೆ ನಮ್ಮ ಶಾಲೆಯನ್ನು ಆಯ್ಕೆ ಮಾಡಲಾಯಿತು.

ಗುಣಮಟ್ಟದ ಶಿಕ್ಷಣ ಮತ್ತು ಸುಧಾರಿತ ಸೌಕರ್ಯಗಳಿಂದಾಗಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಏರಿಕೆಯಾಗಿದೆ. 2025-26ರ ವೇಳೆ 500 ವಿದ್ಯಾರ್ಥಿಗಳ ಪ್ರವೇಶವನ್ನು ತಲುಪುವ ಗುರಿಯಿದೆ ಎಂದು ಹೇಳಿದ್ದಾರೆ.

ಶಾಲೆ ಮುಖ್ಯೋಪಾಧ್ಯಾಯಿನಿ ಸಿ ದಾನೇಶ್ವರಿ ಮಾತನಾಡಿ, ಶಾಲೆಯನ್ನು 1935ರಲ್ಲಿ ನಿರ್ಮಿಸಲಾಗಿತ್ತು. ಹತ್ತು ವರ್ಷಗಳ ಹಿಂದೆ ಶಾಲೆಯು 700 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿತ್ತು. ಆದರೆ, ಸೌಲಭ್ಯಗಳು ಮತ್ತು ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ಈ ಸಂಖ್ಯೆ ಕುಸಿತಕ್ಕೆ ಕಾರಣವಾಯಿತು.

ಆಟೊರಿಕ್ಷಾ ಚಾಲಕರು, ದಿನಗೂಲಿ ಕಾರ್ಮಿಕರು ಹಾಗೂ ಇತರರ ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಇಂದು, ಶಾಲೆಯು 1 ರಿಂದ 6 ನೇ ತರಗತಿಯವರೆಗೆ ಇಂಗ್ಲಿಷ್ ಶಿಕ್ಷಣವನ್ನು ನೀಡುತ್ತಿದೆ. ಮುಂದಿನ ವರ್ಷದಿಂದ 7ನೇ ತರಗತಿಗೂ ಪರಿಚಯಿಸಲಾಗುವುದು, ಮಕ್ಕಳಿಗೆ ಯೋಗ ಮತ್ತು ಕರಾಟೆ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com