ತೆಂಗಿನ ಮರವನ್ನು ತಲೆಕೆಳಗಾಗಿ ಏರುವ ಸ್ಪೈಡರ್ ಮ್ಯಾನ್, ಗದಗದ ಈಶ್ವರ ಜಿಡಗಣ್ಣವರ್

ಯುವಕನೊಬ್ಬ ಕೇವಲ ಒಂದೇ ನಿಮಿಷದಲ್ಲಿ ತೆಂಗಿನ ಮರವನ್ನು ತಲೆಕೆಳಗಾಗಿ ಏರುತ್ತಾನೆ. ಈ ಸಾಹಸ ಅವರಿಗೆ ‘ಸ್ಪೈಡರ್ ಮ್ಯಾನ್’ ಎಂಬ ಬಿರುದನ್ನು ತಂದುಕೊಟ್ಟಿದೆ.
ತೆಂಗಿನ ಮರ ಏರುತ್ತಿರುವ ಈಶ್ವರ್
ತೆಂಗಿನ ಮರ ಏರುತ್ತಿರುವ ಈಶ್ವರ್

ಗದಗ: ಯುವಕನೊಬ್ಬ ಕೇವಲ ಒಂದೇ ನಿಮಿಷದಲ್ಲಿ ತೆಂಗಿನ ಮರವನ್ನು ತಲೆಕೆಳಗಾಗಿ ಏರುತ್ತಾನೆ. ಈ ಸಾಹಸ ಅವರಿಗೆ ‘ಸ್ಪೈಡರ್ ಮ್ಯಾನ್’ ಎಂಬ ಬಿರುದನ್ನು ತಂದುಕೊಟ್ಟಿದೆ.

ಶಿರಹಟ್ಟಿಯ ಈಶ್ವರ ಜಿಡಗಣ್ಣವರ್ (22) ಬಾಲ್ಯದಿಂದಲೂ ಕಟ್ಟಡಗಳನ್ನು ಏರುತ್ತಿದ್ದಾರೆ. ಅವರು ಈಗ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರುವ ಗುರಿಯನ್ನು ಹೊಂದಿದ್ದಾರೆ.

ಅನೇಕ ಪರ್ವತಾರೋಹಿಗಳು ಸಾಮಾನ್ಯ ಭಂಗಿಯಲ್ಲಿ 40-50 ಅಡಿ ಎತ್ತರದ ತೆಂಗಿನ ಮರಗಳನ್ನು ಏರಲು ಹೆಣಗಾಡುತ್ತಿರುವಾಗ, ಈಶ್ವರ್ ತನ್ನ ಅಸಾಮಾನ್ಯ ಶೈಲಿಯಿಂದ ಎಲ್ಲರನ್ನೂ ಆಶ್ಚರ್ಯ ಚಕಿತಗೊಳಿಸಿದ್ದಾರೆ. ತೆಂಗಿನ ಮರ ಹತ್ತುವ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮರವನ್ನು ನೋಡಿದಾಗ ಈಶ್ವರನ ಮನಸ್ಸಿನಲ್ಲಿ ತಲೆಕೆಳಗಾಗಿ ಹತ್ತುವ ಆಲೋಚನೆ ಬಂದಿತಂತೆ ಹೀಗಾಗಿ ಅವರು ತಲೆ ಕೆಳಗೆ ಮಾಡಿ ಮರ ಏರುವುದನ್ನು ಚಿತ್ರೀಕರಿಸಿದ್ದಾರೆ.

ತೆಂಗಿನ ಮರ ಏರುತ್ತಿರುವ ಈಶ್ವರ್
ಗದಗ: ವೃತ್ತಿಯಲ್ಲಿ ಸರ್ಜನ್, ಹೃದಯದಿಂದ ರೈತ ಡಾ. ಜಿ.ಬಿ.ಬಿದಿನ್ಹಾಳ್!

ಮೊದಲ ಬಾರಿ ಒಮ್ಮೆ ಪ್ರಯತ್ನಿಸಿ 15 ಅಡಿಯವರೆಗೂ ಹತ್ತಿ ಕೆಳಗೆ ಬಂದರು. ಎರಡು ವರ್ಷ ಅಭ್ಯಾಸ ಮಾಡಿ ಕೊನೆಗೆ 50 ಅಡಿ ಎತ್ತರದ ತೆಂಗಿನ ಮರ ಏರಲು ಆರಂಭಿಸಿದರು. ತೆಂಗಿನ ಮರದ ಮೇಲ್ಮೈ ಸರಳ ಮತ್ತು ಇಳಿಜಾರು ಇರುವುದರಿಂದ ಯಾವುದೇ ರೀತಿಯಲ್ಲಿಯೂ ಸುಲಭದ ಕೆಲಸವಲ್ಲ. ಯಾವುದೇ ಉಪಕರಣ ಅಥವಾ ಹಗ್ಗಗಳಿಲ್ಲದೆ ಜನರು ಏರಲು ಭಯಪಡುತ್ತಾರೆ. ಆದರೆ ಈಶ್ವರ್ ಯಾವತ್ತೂ ಹಗ್ಗ ಬಳಸಿಲ್ಲ ಮತ್ತು ಒಮ್ಮೆಯೂ ಜಾರಿ ಬಿದ್ದಿಲ್ಲ. ಈಗ ಗಿನ್ನೆಸ್ ಪುಸ್ತಕ ಸೇರಲು 100 ಅಡಿ ಎತ್ತರದ ತೆಂಗಿನ ಮರ ಏರಲು ಬಯಸಿದ್ದಾರೆ.

ಈಶ್ವರ್ ಹ್ಯಾಂಡ್ ಗ್ಲೌಸ್ ಹಾಕಿಕೊಳ್ಳುವುದಿಲ್ಲ ಮತ್ತು ಬರಿಗೈಯಲ್ಲಿ ಏರುತ್ತಾರೆ. ಪ್ರಾಣಕ್ಕೆ ಅಪಾಯ ತಂದುಕೊಳ್ಳದಂತೆ ಗೆಳೆಯರು ನೀಡಿದ ಸಲಹೆಯನ್ನು ತಿರಸ್ಕರಿಸಿದ್ದಾರೆ. ಚಿತ್ರದುರ್ಗದ ಕೋತಿ ರಾಮನಂತೆ ಹೆಸರು ಗಳಿಸಲು ಬಯಸಿರುವುದಾಗಿ ಈಶ್ವರ್ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ತೆಂಗಿನ ಮರಗಳನ್ನು ಹತ್ತಲು ಪ್ರಯತ್ನಿಸುತ್ತಿದ್ದಾರೆ ಮತ್ತು ಈಗ ಅವರು ಪರಿಣತರಾಗಿದ್ದಾರೆ. ಈಶ್ವರ್ ಕಟ್ಟಡಗಳನ್ನು ಹತ್ತಲು ಮತ್ತು ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಅನಾಯಾಸವಾಗಿ ನೆಗೆಯುತ್ತಾರೆ, ನಾವು ಅವರನ್ನು ಸ್ಪೈಡರ್ಮ್ಯಾನ್ ಎಂದು ಕರೆಯುತ್ತೇವೆ. ಅವರು ಈಗ ನಮ್ಮ ಊರಿನಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಸಿದ್ಧರಾಗಿದ್ದಾರೆ.

- ಈಶ್ವರ್ ಗೆಳೆಯರ ಮಾತು

ತೆಂಗಿನ ಮರಗಳನ್ನು ತಲೆಕೆಳಗಾಗಿ ಹತ್ತುವುದರಲ್ಲಿ ಹೆಸರು ಮಾಡಬೇಕು ಎಂದು ಈಶ್ವರ್ ಹೇಳಿದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಇತರ ದಾಖಲೆ ಪುಸ್ತಕಗಳಲ್ಲಿ ನನ್ನ ಹೆಸರನ್ನು ನೋಡಲು ನಾನು ಬಯಸುತ್ತೇನೆ. ನಾನು 100 ಅಡಿ ಎತ್ತರದ ತೆಂಗಿನ ಮರವನ್ನು ಏರಲು ಯೋಜಿಸುತ್ತಿರುವುದರಿಂದ ನಾನು ಹೆಚ್ಚು ಅಭ್ಯಾಸ ಮಾಡಬೇಕಾಗಿದೆ ಮತ್ತು ಅದಕ್ಕೆ ಸಾಕಷ್ಟು ಅಭ್ಯಾಸದ ಅಗತ್ಯವಿದೆ. ನನ್ನ ವೀಡಿಯೊಗಳನ್ನು ವೀಕ್ಷಿಸಿದ ಮತ್ತು ನನ್ನನ್ನು ಆಶೀರ್ವದಿಸಿದ ಎಲ್ಲರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.

ತೆಂಗಿನ ಮರ ಏರುತ್ತಿರುವ ಈಶ್ವರ್
ತೆಂಗಿನ ಗರಿ ಸ್ಟ್ರಾ: ಇದರ ಸಂಶೋಧಕ ಸಾಜಿ ವರ್ಗೀಸ್ ರ ಯಶೋಗಾಥೆ ಓದಿ...

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com