ಕಿರು ಅರಣ್ಯವಾಗಿ ಮಾರ್ಪಟ್ಟ ನರಗುಂದ ಅಂಚೆ ಕಛೇರಿ: ಹಚ್ಚ ಹಸಿರಿನಿಂದ ನಳನಳಿಸುತ್ತಿರುವ ಸಸಿಗಳು, ಇತರರಿಗೆ ಮಾದರಿಯಾದ ಸಿಬ್ಬಂದಿ!

ಅಂಚೆ ಕಚೇರಿ ಅಚ್ಚ ಹಸಿರಿನಿಂದ ಕಂಗೊಳಿಸಿಲು ಪ್ರಮುಖ ಕಾರಣ ಮರಿತಿಮ್ಮಪ್ಪ ಕರಿಗಾರ ಎಂಬ ಒಬ್ಬ ಅಂಚೆ ಕಚೇರಿಯ ಸಿಬ್ಬಂದಿ. 2017ರಲ್ಲಿ ಈ ಅಂಚೆ ಕಚೇರಿಗೆ ನಿಯೋಜನೆಗೊಂಡ ಮರಿತಿಮ್ಮಪ್ಪ ಅವರು ಕಚೇರಿಯ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.
ನರಗುಂದ ಅಂಚೆ ಕಚೇರಿಯಲ್ಲಿರುವ ಕಿರು ಅರಣ್ಯದ ಕೃತಕ ಕೊಳಕ್ಕೆ ಶಾಲಾ ಮಕ್ಕಳು ಭೇಟಿ ನೀಡಿದರು.
ನರಗುಂದ ಅಂಚೆ ಕಚೇರಿಯಲ್ಲಿರುವ ಕಿರು ಅರಣ್ಯದ ಕೃತಕ ಕೊಳಕ್ಕೆ ಶಾಲಾ ಮಕ್ಕಳು ಭೇಟಿ ನೀಡಿದರು.

ಗದಗ: ಹಚ್ಚ ಹಸಿರಿನಿಂದ ಕಂಗೊಳಿಸುವ ಆವರಣ, ಅಚ್ಚುಕಟ್ಟಾಗಿ ಹರಡಿಕೊಂಡಿರುವ ವಿಶಾಲ ಮೈದಾನ, ಮುಗಿಲು ಚುಂಬಿಸುವ ರೀತಿ ಬೆಳೆದು ನಿಂತಿರುವ ಮರಗಳು, ದಣಿದು ಬಂದವರಿಗೆ ತಂಗಾಳಿ ನೀಡುವ ಹಲವು ಗಿಡಗಳ ತಾಣ, ನೋಡುಗರ ಕಣ್ಮನ ಸೆಳೆಯುವ ಸುಂದರ ಹೂ ಗಳ ಉದ್ಯಾನ..

ಇಂತಹ ಸೊಬಗಿನ ಸಿರಿ ಹಾಗೂ ಹಚ್ಚ ಹಸಿರನ್ನೇ ಮೈದುಂಬಿಕೊಂಡಿರುವ ಸ್ವಚ್ಛಂದ ಪರಿಸರ ಅನಾವರಣಗೊಂಡಿರುವುದು ನಗರಗುಂದದ ಅಂಚೆ ಕಚೇರಿ ಆವರಣದಲ್ಲಿ. ಪರಿಸರ ಸ್ನೇಹಿಯಾಗಿ ಕಂಗೊಳಿಸುತ್ತಿರುವ ಅಂಚೆ ಕಚೇರಿ ಈಗ ಎಲ್ಲರ ಗಮನ ಸೆಳೆಯುವ ತಾಣವಾಗಿದೆ. ಮಾದರಿ ರೈತರನ್ನು ಬೆರಗುಗೊಳಿಸುವಂತೆ ಇಲ್ಲಿನ ಸಿಬ್ಬಂದಿ ಮರ-ಗಿಡಗಳನ್ನು ಬೆಳೆದಿದ್ದಾರೆ. ನಗು ನಗುತ್ತಾ ಅರಳಿ ನಿಂತಿರುವ ಹೂಗಳ ವನ ನೋಡುವುದೇ ಒಂದು ಸೊಬಗು. ಅಂಚೆ ಕಚೇರಿಗೆ ಹೋಗುವ ಇಕ್ಕೆಲಗಳಲ್ಲಿ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಹಲವು ವಿಧದ ಮರಗಳು, ಸುಂದರ ಗಿಡಗಳು ಬೀಸುವ ತಂಗಾಳಿಗೆ ತೂಗುತ್ತಾ ನಿಂತಿವೆ.

ಇನ್ನು ಅಂಚೆ ಕಚೇರಿ ಆವರಣದಲ್ಲಿ ಕುಳಿತರೆ ಸಿಗುವ ಆನಂದವೇ ಬೇರೆ. ಕಚೇರಿಯ ಬದುಗಳೆಲ್ಲಾ ಹುಲ್ಲಿನ ಹಾಸು ಹೊದ್ದು ಕಂಗೊಳಿಸುತ್ತಾ ಆವರಣದ ಮೆರುಗು ತುಂಬಿವೆ.

ಹೀಗೆ ಹಲವು ವಿಶೇಷತೆಗಳನ್ನು ಹೊಂದಿರುವ ಅಂಚಿ ಕಚೇರಿ ಆವರಣವು ಹಚ್ಚ ಹಸಿರಿನಿಂದ ನವ ವಧುವಿನಂತೆ ಸಿಂಗರಿಸಿಕೊಂಡು ಕಂಗೊಳಿಸುತ್ತಿದೆ. ಇದು ನರಗುಂದ ಪಟ್ಟಣದ ಜನತೆಗೆ ಹೆಮ್ಮೆಯ ವಿಚಾರ. ಅಂಚೆ ಕಚೇರಿ ಸಿಬ್ಬಂದಿಗಳ ಪರಿಸರ ಕಾಳಜಿ ಹಾಗೂ ಪರಿಶ್ರಮ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಅಂಚೆ ಕಚೇರಿ ಅಚ್ಚ ಹಸಿರಿನಿಂದ ಕಂಗೊಳಿಸಿಲು ಪ್ರಮುಖ ಕಾರಣ ಮರಿತಿಮ್ಮಪ್ಪ ಕರಿಗಾರ ಎಂಬ ಒಬ್ಬ ಅಂಚೆ ಸಿಬ್ಬಂದಿಯಾಗಿದ್ದಾರೆ. 2017ರಲ್ಲಿ ಈ ಅಂಚೆ ಕಚೇರಿಗೆ ನಿಯೋಜನೆಗೊಂಡ ಮರಿತಿಮ್ಮಪ್ಪ ಅವರು ಕಚೇರಿಯ ಆವರಣವನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ.

ಕೆಲಸಕ್ಕೆ ಬಂದ ಮೊದಲ ದಿನ ಕಚೇರಿಯ ಆವರಣವು ಪೊದೆ ಹಾಗೂ ಮುಳ್ಳುಗಳಿಂದ ಕೂಡಿತ್ತು. ಬಳಿಕ ಸ್ಥಳವನ್ನು ಸ್ವಚ್ಛಗೊಳಿಸಿ ಗಿಡಿಗಳ ನೆಡಲು ಮೇಲಧಿಕಾರಿ ಹಾಗೂ ಗದಗ ಜಿಲ್ಲಾಡಳಿತ ಮಂಡಳಿಯಿಂದ ಅನುಮತಿ ಸಿಕ್ಕ ಬಳಿಕ ಹಲವಾರು ಜಾತಿಯ ಸಸಿಗಳನ್ನು ನೆಡಲು ಆರಂಭಿಸಿದೆ. ಆ ಗಿಡಗಳು ಬೆಳೆದು ನಿಂತು, ಇದೀಗ ಅಂಚೆ ಕಚೇರಿ ಮಿನಿ ಅರಣ್ಯವಾಗಿ ಮಾರ್ಪಟ್ಟಿದೆ.

ಅಂಚೆ ಕಚೇರಿ
ಅಂಚೆ ಕಚೇರಿ

ಅರಣ್ಯ ಇಲಾಖೆ, ಅಂಚೆ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಸಿಬ್ಬಂದಿ ಸಸಿಗಳನ್ನು ನೆಡಲು ಸಹಾಯ ಮಾಡಿದರು, ಆದರೆ, ಇದಕ್ಕೂ ಮೊದಲು ಮರಿತಿಮ್ಮಪ್ಪ ಅವರೇ ಸ್ವಂತ ಹಣ ಖರ್ಚು ಮಾಡಿ ಸಸಿಗಳನ್ನು ನೆಟ್ಟಿದ್ದರು. ಬಳಿಕ ಸಹೋದ್ಯೋಗಿಗಳು ಕೈಜೋಡಿಸಿ ಕೊಳವನ್ನು ನಿರ್ಮಿಸಿದರು.

ಗದಗ ಜಿಲ್ಲೆಯ ಅಸುಂಡಿ ಮೂಲದವರಾದ ಕರಿಗಾರ ಅವರು, ಗಿಡಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಉಳ್ಳವರಾಗಿದ್ದರು. ಅನೇಕ ಜಾಗೃತಿ ಶಿಬಿರಗಳಲ್ಲೂ ಭಾಗವಹಿಸಿದ್ದಾರೆ.

ಯಾವ ಮರಗಳಲ್ಲಿ ಹೆಚ್ಚು ಆಮ್ಲಜನಕವಿದೆ? ಮಿನಿ ಅರಣ್ಯವನ್ನು ಹೇಗೆ ಮಾಡಬೇಕೆಂಬುಂದನ್ನು ಗ್ರಾಮದ ಹಿರಿಯರು ಮತ್ತು ಮಾರ್ಗದರ್ಶಕರಿಂದ ಕಲಿತಿದ್ದೆ. ಇದೀಗ ಸ್ಥಳೀಯ ನಿವಾಸಿಗಳು ತಮ್ಮ ಬೆಳಿಗ್ಗೆ ಮತ್ತು ಸಂಜೆಯ ನಡಿಗೆಗಾಗಿ ಉದ್ಯಾನವನಗಳ ಬದಲಿಗೆ ಅಂಚೆ ಕಚೇರಿಗೆ ಭೇಟಿ ನೀಡುತ್ತಿದ್ದಾರೆಂದು ಕರಿಗಾರ್ ಅವರು ಹೇಳಿದ್ದಾರೆ. ಇದೀಗ ಕರಿಗಾರ್ ಅವರು ಕೊಪ್ಪಳದ ಅಂಚೆಕಚೇರಿಗೆ ನಿಯೋಜಿತರಾಗಿದ್ದಾರೆ.

ನರಗುಂದ ಅಂಚೆ ಕಚೇರಿಯಲ್ಲಿರುವ ಕಿರು ಅರಣ್ಯದ ಕೃತಕ ಕೊಳಕ್ಕೆ ಶಾಲಾ ಮಕ್ಕಳು ಭೇಟಿ ನೀಡಿದರು.
ಬೆಂಕಿ ಅವಘಡದಲ್ಲಿ ಮಗಳನ್ನು ಕಳೆದುಕೊಂಡು, 600 ವಿದ್ಯಾರ್ಥಿಗಳಿಗೆ ಆಶಾಕಿರಣವಾದ ASI ಲೋಕೇಶಪ್ಪ!

ಈ ನಡುವೆ ಪರಿಸರ ಸ್ನೇಹಿ ಅಂಚೆ ಕಚೇರಿ ಬಗ್ಗೆ ಮಾಹಿತಿ ತಿಳಿದ ಮುಂಡರಗಿ ತಾಲೂಕು ಸರಕಾರಿ ಶಾಲೆಯ ಪ್ರಾಂಶುಪಾಲ ರವಿ ದೇವರೆಡ್ಡಿ ಹಾಗೂ ಪರಿಸರ ಪ್ರೇಮಿಗಳು ಕರಿಗಾರ ಅವರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ.

ದೇವರೆಡ್ಡಿ ಮಾತನಾಡಿ, 'ಕರಿಗಾರ್ ಅವರು ಮರಗಳ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದು, ಹಲವು ತಳಿಗಳನ್ನು ನೆಟ್ಟಿದ್ದಾರೆ. ಅವರನ್ನು ಪ್ರೋತ್ಸಾಹಿಸಿದ ಸಿಬ್ಬಂದಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಹಸಿರು ಜಾಗವನ್ನು ನಿರ್ಮಿಸಲು ಅವರೊಂದಿಗೆ ಕೈಜೋಡಿಸುತ್ತೇವೆಂದು ಹೇಳಿದ್ದಾರೆ.

ನರಗುಂದದ ಶಾಲಾ ಶಿಕ್ಷಕ ಮಹೇಶ ಹಂಗನಕಟ್ಟಿ ಮಾತನಾಡಿ, ಹಲವು ಬಾರಿ ಅಂಚೆ ಕಚೇರಿಗೆ ಭೇಟಿ ನೀಡಿದ್ದೇವೆ. ಇದು ಸಣ್ಣ ಅರಣ್ಯವಾಗಿದೆ. ಇಂದು ಅನೇಕ ಮಕ್ಕಳು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಈ ಪ್ರದೇಶ ಇದೀಗ ಪಟ್ಟಣದ ಜನರಿಗೆ ನೆಚ್ಚಿನ ಪಿಕ್ನಿಕ್ ತಾಣಗಳಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.

ಕರಿಗಾರ ಮಾತನಾಡಿ, 2017ರಲ್ಲಿ ನರಗುಂದಕ್ಕೆ ವರ್ಗಾವಣೆಗೊಂಡಿದ್ದೆ. ಇತರೆ ಸಿಬ್ಬಂದಿ ಜೊತೆ ಮಾತನಾಡಿ, ಸಸಿಗಳನ್ನು ನೆಡಲು ಅರಣ್ಯ ಇಲಾಖೆ ಮತ್ತು ಇತರ ಇಲಾಖೆಯಿಂದ ಅನುಮತಿ ಪಡೆದಿದ್ದೆ. ಮಿನಿ ಅರಣ್ಯಕ್ಕೆ ನೀರುಣಿಸಲು ನೀರಿನ ಹೊಂಡಗಳನ್ನೂ ನಿರ್ಮಿಸಿದೆವು. ಈಗ ನಾನು ಕೊಪ್ಪಳ ಅಂಚೆ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಆದರೂ ಇನ್ನೂ ಅನೇಕ ಜನರು ನನಗೆ ಕರೆ ಮಾಡಿ ನರಗುಂದ ಅಂಚೆ ಕಚೇರಿಯಲ್ಲಿ ನಾನು ತಂದ ಬದಲಾವಣೆಗಳಿಗೆ ಕೃತಜ್ಞತೆ ಮತ್ತು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಮತ್ತು ನನಗೆ ಸಹಾಯ ಮಾಡಿದ ನರಗುಂದ ಮತ್ತು ಗದಗ ಅಂಚೆ ಕಚೇರಿಯ ಎಲ್ಲಾ ಸಿಬ್ಬಂದಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದ್ದಾರೆ.

ನರಗುಂದದ ಶಾಲಾ ಮುಖ್ಯೋಪಾಧ್ಯಾಯ ಎಂ.ಎಸ್.ನಾಯಕ್ ಮಾತನಾಡಿ, 'ಒಬ್ಬ ಮನುಷ್ಯನು ವಾತಾವರಣವನ್ನು ಬದಲಾಯಿಸಬಹುದು ಎಂಬುದಕ್ಕೆ ನರಗುಂದ ಅಂಚೆ ಕಚೇರಿಯೇ ಉದಾಹರಣೆ. ಈ ಅಂಚೆ ಕಚೇರಿ ಇದೀಗ ಇತರ ಅಂಚೆ ಕಚೇರಿಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಮಾದರಿಯಾಗಿದೆ. ಎಲ್ಲ ಸರಕಾರಿ ಕಚೇರಿಗಳು ತಮ್ಮ ಆವರಣವನ್ನು ನರಗುಂದ ಅಂಚೆ ಕಚೇರಿಯಂತೆ ನವೀಕರಿಸಿ, ಹಸಿರಿನಿಂದ ಕಂಗೊಳಿಸುವಂತೆ ಮಾಡಬೇಕು. ಜಿಲ್ಲೆಯಲ್ಲಿ ಈ ವರ್ಷ ಮೊದಲ ಬಾರಿಗೆ ಬಿಸಿಗಾಳಿ ಕಾಣಿಸಿಕೊಂಡಿದೆ. ನಮ್ಮಲ್ಲಿ ಹೆಚ್ಚು ಮರಗಳಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ವಿಶ್ವ ಪರಿಸರ ದಿನ (ಜೂನ್ 5) ದಂತಹ ವಿಶೇಷ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಸಸಿಗಳನ್ನು ನೆಡುವುದರಿಂದ ಯಾವುದೇ ಸಹಾಯಕವಾಗುವುದಿಲ್ಲ. ಇದು ಅಸಮಂಜಸವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಹೆಚ್ಚು ಮರಗಳನ್ನು ನೆಡುವುದು ಮುಖ್ಯ ಮತ್ತು ನರಗುಂದ ಅಂಚೆ ಕಚೇರಿಯಲ್ಲಿ ಕರಿಗಾರ ಅವರ ಪ್ರಯತ್ನಕ್ಕೆ ನಾವು ಧನ್ಯವಾದ ಅರ್ಪಿಸುತ್ತೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com