ಕಾರ್ಗಿಲ್ ಹೀರೋನಿಂದ ಗೌರವಾನ್ವಿತ ಪ್ರೊಫೆಸರ್: ವಿಂಗ್ ಕಮಾಂಡರ್ ಪಿ.ಬಿ ಶೆಟ್ಟಿ ಪಯಣ!

ಐಎಎಫ್‌ನಲ್ಲಿ ಅವರ ಅಧಿಕಾರಾವಧಿಯಲ್ಲಿ, ಸುಮಾರು ನಾಲ್ಕು ತಿಂಗಳ ಕಾಲ ಕಾರ್ಗಿಲ್ ಮಿಷನ್‌ನಲ್ಲಿ ಭಾಗಿಯಾಗಿದ್ದರು. ಅವರು ವಿಮಾನ ರಚನೆಗಳು, ಏರೋ ಇಂಜಿನ್‌ಗಳು ಮತ್ತು ರಿಮೋಟ್ ಪೈಲಟ್ ವಾಹನಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳ ಭಾಗವಾಗಿದ್ದರು.
ಪಿ.ಬಿ.ಶೆಟ್ಟಿ
ಪಿ.ಬಿ.ಶೆಟ್ಟಿ
Updated on

ಬೆಂಗಳೂರು: ವಾಯುಪಡೆ ದಿನದಂದು ಜನಿಸಿದ ವಿಂಗ್ ಕಮಾಂಡರ್ ಪಿಬಿ ಶೆಟ್ಟಿ 1983ರ ಫೆಬ್ರವರಿಯಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) ಸೇರಿಕೊಂಡರು ಮತ್ತು 20 ವರ್ಷಗಳ ಕಾಲ ಸೇವೆ ಸಲ್ಲಿಸಿದರು.

ಐಎಎಫ್‌ನಲ್ಲಿ ಅವರ ಅಧಿಕಾರಾವಧಿಯಲ್ಲಿ, ಸುಮಾರು ನಾಲ್ಕು ತಿಂಗಳ ಕಾಲ ಕಾರ್ಗಿಲ್ ಮಿಷನ್‌ನಲ್ಲಿ ಭಾಗಿಯಾಗಿದ್ದರು. ಅವರು ವಿಮಾನ ರಚನೆಗಳು, ಏರೋ ಇಂಜಿನ್‌ಗಳು ಮತ್ತು ರಿಮೋಟ್ ಪೈಲಟ್ ವಾಹನಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳ ಭಾಗವಾಗಿದ್ದರು. ಪಿ ಬಿ ಶೆಟ್ಟಿ ನಿವೃತ್ತಿಯ ನಂತರ ಹಲವು ವರ್ಷಗಳಿಂದ ಶೆಟ್ಟಿ ಅವರು ಬೋಧನೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಅವರು ಹಂಟರ್, ಮಿಗ್ -21, ಮಿಗ್ -23, ಮತ್ತು ಮಿಗ್ -27 ನಂತಹ ಯುದ್ಧ ವಿಮಾನಗಳಿಗೆ ನಿರ್ವಹಣಾ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು ಮತ್ತು ರಿಮೋಟ್ ಪೈಲಟ್ ವಾಹನ ಲಕ್ಷ್ಯ ಗೆ ಗಣನೀಯ ಕೊಡುಗೆ ನೀಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ವಿಂಗ್ ಕಮಾಂಡರ್ ಪಿಬಿ ಶೆಟ್ಟಿ ತಮ್ಮ IAF ಅನುಭವವನ್ನು ಹಂಚಿಕೊಂಡಿದ್ದಾರೆ. 1999 ರಲ್ಲಿ ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಂದಿಗೆ ವಿಹಾರಕ್ಕೆ ಹೋಗುವಾಗ, ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿರುವ ವಾಯುಪಡೆಯ ನಿಲ್ದಾಣಕ್ಕೆ 12 ಗಂಟೆಗಳ ಒಳಗೆ ಧಾವಿಸುವಂತೆ ತಮ್ಮ ಕಮಾಂಡಿಂಗ್ ಅಧಿಕಾರಿಯಿಂದ ಕರೆ ಬಂದಿತು. ಕಲೈಕುಂಡದಿಂದ, ಅವರು ಮತ್ತು ಅವರ ತಂಡದ ಸದಸ್ಯರನ್ನು ಪಶ್ಚಿಮ ಗಡಿಯ ಸಮೀಪ ಹರಿಯಾಣದ ಅಂಬಾಲಾದಲ್ಲಿರುವ ವಾಯುಪಡೆಯ ನಿಲ್ದಾಣಕ್ಕೆ ತ್ವರಿತವಾಗಿ ಸ್ಥಳಾಂತರಿಸಲಾಯಿತು.

ಅಂಬಾಲಾ ಏರ್ ಬೇಸ್ ನಿಂದ ಕಾರ್ಯ ನಿರ್ವಹಿಸುತ್ತಿದ್ದ ಅವರು ಕಾರ್ಗಿಲ್ ಮಿಷನ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಮ್ಮ ಕಾರ್ಯಗಳಲ್ಲಿ 30mm ADEN ಗನ್‌ಗಳನ್ನು ನಿಯೋಜಿಸುವುದು, 68mm ರಾಕೆಟ್ ಸ್ಪೋಟಕಗಳನ್ನು ಉಡಾಯಿಸುವುದು ಮತ್ತು ವಿಚಕ್ಷಣ ಮತ್ತು ಗುರಿ ಗುರುತಿಸುವಿಕೆಗಾಗಿ ಹಂಟರ್ ವಿಮಾನವನ್ನು ಬಳಸಿಕೊಂಡು 1000-ಪೌಂಡ್ ಬಾಂಬುಗಳನ್ನು ರಿಲೀಸ್ ಮಾಡುವುದು ಸೇರಿದಂತೆ ಹಲವು ಸಾಹಸಮಯ ಕೆಲಸಗಳಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ.

ಲೇಸರ್ ಬಾಂಬ್‌ಗಳೊಂದಿಗೆ ಮಿರಾಜ್ ಫೈಟರ್ ಜೆಟ್‌ಗಳ ನಿಯೋಜನೆಯು ಅಂತಿಮವಾಗಿ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಹಂಟರ್ ವಿಮಾನಗಳ ಬಳಕೆಯನ್ನು ಸ್ಥಗಿತಗೊಳಿಸಿತು. ಕಾರ್ಗಿಲ್ ಯುದ್ಧದ ನೆನಪುಗಳು, ಮಾಡಿದ ತ್ಯಾಗಗಳು ಮತ್ತು ವಿಜಯದ ನಿರಂತರ ನಡೆದ ಅನ್ವೇಷಣೆ ಅವರ ಮನಸ್ಸಿನಲ್ಲಿ ಇನ್ನೂ ಆಳವಾಗಿ ಉಳಿದಿದೆ. ಅವರು ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಬಿಇ (ಮೆಕ್ಯಾನಿಕಲ್ ಇಂಜಿನಿಯರಿಂಗ್), ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಇ ಮತ್ತು ಪುಣೆಯ ಡಿಫೆನ್ಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನಲ್ಲಿ ಎರಡನೇ ಎಂಇ ಮಾಡಿದರು. ಅವರು 2008 ರಲ್ಲಿ ವಿಟಿಯುನಿಂದ ಪಿಎಚ್‌ಡಿ ಪಡೆದರು.

ಇಂಜಿನಿಯರ್‌ಗಳ ಸಂಸ್ಥೆಯ ಫೆಲೋ ಮತ್ತು ಇಂಡಿಯನ್ ಸೊಸೈಟಿ ಆಫ್ ಟೆಕ್ನಿಕಲ್ ಎಜುಕೇಶನ್‌ನ ಆಜೀವ ಸದಸ್ಯರಾಗಿರುವ ಶೆಟ್ಟಿ ಅವರು 2003 ರಲ್ಲಿ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (NMIT) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಕ್ಕೆ ಪ್ರಾಧ್ಯಾಪಕರಾಗಿ ಸೇರಿಕೊಂಡರು. ಅವರು NMITಯಲ್ಲಿ HPT-32 ಯುದ್ಧ ವಿಮಾನ ಮತ್ತು Mig-21 R-11 ಜೆಟ್ ಎಂಜಿನ್ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, IAF ನಿಂದ ಅಂತಹ ಉಪಕರಣಗಳನ್ನು ಪಡೆದ ಕರ್ನಾಟಕದ ಏಕೈಕ ಕಾಲೇಜು ಇದಾಗಿದೆ. ಶೆಟ್ಟಿ ಅವರು ಏರ್ ಫೋರ್ಸ್ ತಾಂತ್ರಿಕ ಕಾಲೇಜಿನಲ್ಲಿ ಬಿಟೆಕ್ ತರಗತಿಗಳಿಗೆ ಪಾಠ ಮಾಡುತ್ತಾರೆ. 12 ವರ್ಷಗಳ ಕಾಲ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ, ಥರ್ಮಲ್ ಮತ್ತು ವಿನ್ಯಾಸದಲ್ಲಿ MTech ಕಾರ್ಯಕ್ರಮಗಳನ್ನು ಪರಿಚಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com