ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌: ಆತ್ಮವಿಶ್ವಾಸ, ಅವಕಾಶಗಳು ಹೆಚ್ಚಳ!

ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವಾರು ಸರ್ಕಾರಿ ಮತ್ತು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ, ಒಂದು ಹೊಸ ಉಪಕ್ರಮ ಇಂಗ್ಲೀಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಸಹಾಯ ಮಾಡಿದೆ.
ಶಾಲೆಗಳಲ್ಲಿ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮದ ಚಿತ್ರ
ಶಾಲೆಗಳಲ್ಲಿ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮದ ಚಿತ್ರExpress

ಉಡುಪಿ: ಇಂಗ್ಲಿಷ್ ಕೇವಲ ಒಂದು ಭಾಷೆಯೇ ಹೊರತು ಬುದ್ಧಿವಂತಿಕೆಯ ಅಳತೆಗೋಲು ಅಲ್ಲ ಎಂಬುದು ನಿಜವಾದರೂ, ಭಾಷೆಯನ್ನು ತಿಳಿದುಕೊಳ್ಳುವುದರಿಂದ ಅವಕಾಶಗಳ ಬಾಗಿಲುಗಳೇ ತೆರೆದುಕೊಳ್ಳುತ್ತವೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಹಲವಾರು ಸರ್ಕಾರಿ ಮತ್ತು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ, ಒಂದು ಹೊಸ ಉಪಕ್ರಮ ಇಂಗ್ಲೀಷ್ ಭಾಷೆಯನ್ನು ನಿರರ್ಗಳವಾಗಿ ಮಾತನಾಡಲು ಸಹಾಯ ಮಾಡಿದೆ.

ಬ್ರಹ್ಮಾವರ, ಬಂಟ್ವಾಳ, ಸುಳ್ಯ ಮತ್ತು ಭಟ್ಕಳದ 291 ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳು ಮತ್ತು ಬ್ರಹ್ಮಾವರದ ಎಂಟು ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಸ್ಪೋಕನ್‌ ಇಂಗ್ಲಿಷ್‌ ತರಗತಿಗಳು ಮತ್ತು ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮ ಈ ಹಿಂದೆ ಇಂಗ್ಲೀಷ್ ನಲ್ಲಿ ಸಂಭಾಷಿಸಲು ಆಗುತ್ತಿದ್ದ ಹಿನ್ನಡೆಯ ಕೊರತೆಯನ್ನು ಮೆಟ್ಟಿ ನಿಂತಿವೆ.

ಈ ಉಪಕ್ರಮದ ರೂವಾರಿ ಬ್ರಹ್ಮಾವರದ ಬ್ಲಾಕ್ ಸಂಪನ್ಮೂಲ ವ್ಯಕ್ತಿ 43 ವರ್ಷದ ಉದಯ್ ಕೋಟಾ. ಕಾರ್ಯಕ್ರಮದ ಮಾರ್ಗದರ್ಶಕರಾಗಿರುವ ಕೋಟಾ ಅವರು ಈ ಉಪಕ್ರಮವನ್ನು ಯಶಸ್ವಿಗೊಳಿಸಲು ನಿಖರವಾದ ಪ್ರಯತ್ನಗಳನ್ನು ಮಾಡಿದ್ದಾರೆ. ಅವರು 2021 ರಲ್ಲಿ ಬ್ರಹ್ಮಾವರ ಬ್ಲಾಕ್‌ನಲ್ಲಿ ಆಸಕ್ತ ಸರ್ಕಾರಿ ಮತ್ತು ಅನುದಾನಿತ ಶಾಲಾ ಶಿಕ್ಷಕರನ್ನು ಸಂಪರ್ಕಿಸಿದರು. ನಂತರ ಆಸಕ್ತಿ ತೋರಿದ 25 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಶೀಘ್ರದಲ್ಲೇ, ಆ 25 ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳು ಮತ್ತು ಇಂಗ್ಲಿಷ್ ಫೆಸ್ಟ್ ಉಪಕ್ರಮವನ್ನು ಪ್ರಾಯೋಗಿಕ ಆಧಾರದ ಮೇಲೆ ಪರಿಚಯಿಸಲಾಯಿತು.

ಈ ಸಾಹಸಗಾಥೆ ಅಲ್ಲಿಗೆ ನಿಲ್ಲಲಿಲ್ಲ ಮತ್ತಷ್ಟು ಶಾಲೆಗಳಿಗೆ ವಿಸ್ತರಿಸಿತು. 2022-23 ಶೈಕ್ಷಣಿಕ ವರ್ಷದಲ್ಲಿ ಈ ಚಟುವಟಿಕೆ ನಡೆಸುವ ಶಾಲೆಗಳ ಸಂಖ್ಯೆ 45 ಕ್ಕೆ ಏರಿದೆ. ಈ ಶೈಕ್ಷಣಿಕ ವರ್ಷದಲ್ಲಿ (2023-24) 291 ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳು ಮತ್ತು ಎಂಟು ಸರ್ಕಾರಿ ಪ್ರೌಢಶಾಲೆಗಳು ಈ ಉಪಕ್ರಮವನ್ನು ಪರಿಚಯಿಸಿವೆ. ಆರಂಭದಲ್ಲಿ ಬ್ರಹ್ಮಾವರ ಬ್ಲಾಕ್‌ನಲ್ಲಿರುವ ಶಾಲೆಗಳಿಗೆ ಮಾತ್ರ ಈ ಬಗ್ಗೆ ಯೋಚಿಸಿದ್ದೆ. ಆದರೆ ಇತರ ಜಿಲ್ಲೆಗಳ ಶಿಕ್ಷಕರ ಬೇಡಿಕೆಯು ಅವರನ್ನು ಅಲ್ಲಿನ ಶಾಲೆಗಳಿಗೆ ಈ ಉಪಕ್ರಮವನ್ನು ತೆಗೆದುಕೊಳ್ಳಲು ಪ್ರೇರೇಪಿಸಿತು ಎಂದು ಕೋಟಾ ದಿ ನ್ಯೂ ಸಂಡೆ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ದಕ್ಷಿಣ ಕನ್ನಡದಲ್ಲಿ ಬಂಟ್ವಾಳ ಮತ್ತು ಸುಳ್ಯ ತಾಲೂಕಿನ ಶಾಲಾ ಶಿಕ್ಷಕರಿಗೆ ಕೋಟಾ ಅವರಿಂದ ತರಬೇತಿ ನೀಡಲಾಗಿದೆ. ಉತ್ತರ ಕನ್ನಡ, ಭಟ್ಕಳ ತಾಲೂಕಿನ ಶಾಲೆಗಳಲ್ಲಿ ಶಿಕ್ಷಕರು ಇವರಿಂದ ತರಬೇತಿ ಪಡೆದಿದ್ದಾರೆ. ಅಲ್ಲಿನ ಶಾಲೆಗಳಲ್ಲಿಯೂ ಈ ಉಪಕ್ರಮವನ್ನು ಯಶಸ್ವಿಯಾಗಿ ಪರಿಚಯಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಶಾಲೆಗಳ ಶಿಕ್ಷಕರು ಕೂಡ ಈ ಯೋಜನೆಯನ್ನು ಕಾರ್ಯಗತಗೊಳಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದು, ಅವರಿಗೂ ಓರಿಯಂಟೇಶನ್ ಕಾರ್ಯಕ್ರಮ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಶಿಕ್ಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಪೋಷಕರ ಸಹಕಾರವೂ ಸಿಕ್ಕಿದೆ.

- ಉದಯ್ ಕೋಟಾ

ಈ ಉಪಕ್ರಮದ ಬಗ್ಗೆ ವಿವರಿಸಿದ ಕೋಟಾ, ಶಾಲೆಗಳಲ್ಲಿ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಔಪಚಾರಿಕವಾಗಿ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಶಾಲಾ ಕಾರ್ಯಕ್ರಮವನ್ನು ಇಂಗ್ಲಿಷ್‌ನಲ್ಲಿ ನಡೆಸುವಂತೆ ಶಿಕ್ಷಕರಿಗೆ ತಿಳಿಸಲಾಗಿದೆ. ಪಾಲಕರ-ಶಿಕ್ಷಕರ ಸಭೆಗಳನ್ನು ಸಹ ಇಂಗ್ಲಿಷ್‌ನಲ್ಲಿ ನಡೆಸಲಾಗುತ್ತದೆ. ವಿವಿಧ ಶಾಲಾ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್ ಮಾತನಾಡುತ್ತಾರೆ. ವಾರಕ್ಕೊಮ್ಮೆ, 'ಇಂಗ್ಲಿಷ್ ದಿನ' ಆಚರಿಸಲಾಗುತ್ತದೆ. ವಿಜ್ಞಾನದ ಪ್ರಯೋಗಗಳನ್ನು ಇಂಗ್ಲಿಷ್ ಭಾಷೆಯಲ್ಲಿ ವಿವರಿಸಲಾಗಿದೆ. ಸ್ಥಳೀಯ ಸಾಧಕರನ್ನು ಇಂಗ್ಲಿಷ್‌ನಲ್ಲಿ ಸಂದರ್ಶಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲಾಗುತ್ತದೆ.

ಮೆಂಟರ್ ಉದಯ್ ಕೋಟಾ
ಮೆಂಟರ್ ಉದಯ್ ಕೋಟಾ

ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ ಮತ್ತು ಇಂಗ್ಲಿಷ್‌ನಲ್ಲಿ ನೋಟ್ ಮಾಡಿಕೊಳ್ಳುತ್ತಾರೆ. ಶಾಲೆಗಳ ಕಾರ್ಯಕ್ರಮಗಳ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತಾರೆ, ಇದರಲ್ಲಿ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಭಾಷಣ ಮಾಡಲು ಕೇಳುತ್ತಾರೆ. ವರ್ಷಕ್ಕೊಮ್ಮೆ ನಡೆಸುವ ಪ್ರದರ್ಶನದಲ್ಲಿ ಇಂಗ್ಲಿಷ್ ಬೋಧನೆ ಮತ್ತು ಕಲಿಕಾ ಸಾಮಗ್ರಿಗಳನ್ನು ಪ್ರದರ್ಶಿಸಲಾಗುತ್ತದೆ. ನಂತರ ಶಾಲೆಗಳು ಶೈಕ್ಷಣಿಕ ವರ್ಷದ ಕೊನೆಯಲ್ಲಿ 'ಸ್ಪೋಕನ್ ಇಂಗ್ಲಿಷ್ ಫೆಸ್ಟ್' ಅನ್ನು ಆಚರಿಸುತ್ತವೆ. ಈ ಎಲ್ಲಾ ಚಟುವಟಿಕೆಗಳ ಮೂಲಕ, ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲಿ ಮಾತನಾಡುವ ಭಯವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಸಂಪೂರ್ಣ ಆತ್ಮವಿಶ್ವಾಸವನ್ನು ತೋರಿಸುತ್ತಿದ್ದಾರೆ.

ಶಾಲೆಗಳಲ್ಲಿ ಇಂಗ್ಲೀಷ್ ಫೆಸ್ಟ್ ಕಾರ್ಯಕ್ರಮದ ಚಿತ್ರ
ಶಿರೋಳ ಅಥವಾ ಗದಗಿನ ಯೋಗಗ್ರಾಮದ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ!

ಶೈಕ್ಷಣಿಕ ವರ್ಷದುದ್ದಕ್ಕೂ ಅವರು ಈ ಉಪಕ್ರಮವನ್ನು ಹೇಗೆ ಕಾರ್ಯಗತಗೊಳಿಸುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದ ಕೋಟಾ, ಪ್ರತಿ ಶಿಕ್ಷಣ ಬ್ಲಾಕ್‌ಗೆ ಪ್ರತ್ಯೇಕ ವಾಟ್ಸಾಪ್ ಗುಂಪುಗಳನ್ನು ರಚಿಸಿದ್ದಾರೆ ಮತ್ತು ಅಲ್ಲಿ ಶಿಕ್ಷಕರಿಗೆ ನವೀನ ಕಲಿಕೆಯ ಕಲ್ಪನೆಗಳನ್ನು ಒದಗಿಸಲಾಗಿದೆ. ನಂತರ ಪ್ರತಿ ಭಾನುವಾರ ‘ಶಿಕ್ಷಕರ ಸಂವಾದ ಕಾರ್ಯಕ್ರಮ’ ನಡೆಸಲಾಗುವುದು, ಇದರಲ್ಲಿ, ವಿದ್ಯಾರ್ಥಿಗಳು ಸುಲಭವಾಗಿ ಇಂಗ್ಲಿಷ್ ಕಲಿಯಲು ಅನುವು ಮಾಡಿಕೊಡುವ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದು ಹೇಗೆ ಎಂಬುದನ್ನು ಎಲ್ಲಾ ಶಿಕ್ಷಕರು ಕಲಿಯುವಂತೆ ಮಾಡಲಾಗುತ್ತದೆ. ಮಾತೃಭಾಷೆ ಕನ್ನಡದ ಬಗ್ಗೆ ಗಟ್ಟಿಯಾದ ನಂಟು ಹೊಂದಿರುವ ವಿದ್ಯಾರ್ಥಿಗಳು ಇಂಗ್ಲಿಷ್‌ನಲ್ಲೂ ಸಂವಹನ ಕೌಶಲ್ಯವನ್ನು ಸುಲಭವಾಗಿ ಕಲಿಯುತ್ತಿದ್ದಾರೆ ಎಂದು ಕೋಟಾ ಹೇಳುತ್ತಾರೆ. ಒಟ್ಟಾರೆಯಾಗಿ, ಈ ಪ್ರದೇಶದ ವಿವಿಧ ಶಾಲೆಗಳಲ್ಲಿ 20,755 ವಿದ್ಯಾರ್ಥಿಗಳು ಈ ಉಪಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ.

ಬ್ರಹ್ಮಾವರದಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಆರಂಭಿಸಿದ ಕಾರ್ಯಕ್ರಮ, ಪಕ್ಕದ ತಾಲ್ಲೂಕುಗಳು ಮತ್ತು ಜಿಲ್ಲೆಗಳಿಗೂ ಹರಡುತ್ತಿರುವುದಕ್ಕೆ ಸಂತೋಷವಾಗಿದೆ ಎಂದು ಕೋಟಾ ಹೇಳುತ್ತಾರೆ. ಇತ್ತೀಚೆಗೆ ಹೊನ್ನಾವರ ಬ್ಲಾಕ್‌ನ ಸುಮಾರು 50 ಶಾಲೆಗಳ ಶಿಕ್ಷಕರು ಈ ಉಪಕ್ರಮವನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ ಮತ್ತು ಶಿಕ್ಷಕರಿಗೆ ಓರಿಯಂಟೇಶನ್ ಕಾರ್ಯಕ್ರಮವನ್ನು ಈಗಾಗಲೇ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com