ಹರ್ಷ ತಂದ ವರ್ಷಾ ಕಾರ್ಯ: ರಸ್ತೆ ಗುಂಡಿಗಳನ್ನು ಸ್ವಂತ ಖರ್ಚಿನಿಂದ ಮುಚ್ಚಿಸಿದ ಮಹಿಳಾ ಪಿಎಸ್ಐ!

ಮಂಡ್ಯದ ಹೊಳಲು ವೃತ್ತದ ಬಳಿ ವಾಹನ ಸವಾರರ ದಿನನಿತ್ಯದ ಬವಣೆ ಕಂಡ ವರ್ಷಾ ಅವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಸಮುದಾಯದ ಬಗ್ಗೆ ಅಸಾಧಾರಣ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಹಾಳಾದ ರಸ್ತೆಯ ದುರಸ್ತಿಗೆ ಖುದ್ದಾಗಿ ಹಣ ಒದಗಿಸುತ್ತಾರೆ ಮತ್ತು ಸ್ವತಃ ಮೇಲ್ವಿಚಾರಣೆ ಮಾಡುತ್ತಾರೆ.
ಹಾಳಾದ ರಸ್ತೆಯ ದುರಸ್ತಿ ಕಾರ್ಯವನ್ನು ಪರಿಶೀಲಿಸುತ್ತಿರುವ ಪಿಎಸ್ ಐ ವರ್ಷಾ ಬಿ ವಿ
ಹಾಳಾದ ರಸ್ತೆಯ ದುರಸ್ತಿ ಕಾರ್ಯವನ್ನು ಪರಿಶೀಲಿಸುತ್ತಿರುವ ಪಿಎಸ್ ಐ ವರ್ಷಾ ಬಿ ವಿ
Updated on

ಮೈಸೂರು: ಸರ್ಕಾರಿ ಸೇವೆ ಎಂದರೆ ದೇವರ ಸೇವೆ ಎಂಬ ಮಾತಿದೆ, ಆದರೆ ಅದನ್ನು ತಮ್ಮ ನಿತ್ಯ ಸೇವೆಯಲ್ಲಿ ಪಾಲಿಸುವವರು ವಿರಳ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ವರ್ಷಾ ಬಿ.ವಿ ಅದನ್ನು ಅಕ್ಷರಶಃ ಪಾಲಿಸುತ್ತಿದ್ದಾರೆ. ತಾವು ಸೇವೆ ಸಲ್ಲಿಸುತ್ತಿರುವ ಪ್ರದೇಶದಲ್ಲಿ ರಸ್ತೆಗಳಲ್ಲಿ ಹೊಂಡ-ಗುಂಡಿಗಳ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ.

ಮಂಡ್ಯದ ಹೊಳಲು ವೃತ್ತದ ಬಳಿ ವಾಹನ ಸವಾರರ ದಿನನಿತ್ಯದ ಬವಣೆಯನ್ನು ಕಂಡ ವರ್ಷಾ ಅವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದು, ಸಮುದಾಯದ ಬಗ್ಗೆ ಅಸಾಧಾರಣ ಬದ್ಧತೆಯನ್ನು ಪ್ರದರ್ಶಿಸುವ ಮೂಲಕ ಹಾಳಾದ ರಸ್ತೆಯ ದುರಸ್ತಿಗೆ ಖುದ್ದಾಗಿ ಹಣ ಒದಗಿಸುತ್ತಾರೆ ಮತ್ತು ಸ್ವತಃ ಮೇಲ್ವಿಚಾರಣೆ ಮಾಡುತ್ತಾರೆ.

ರಸ್ತೆಗಳಲ್ಲಿ ಹೊಂಡ ಗುಂಡಿಗಳಿದ್ದರೆ ವಾಹನ ಸವಾರರಿಗೆ ಸಂಚಾರಕ್ಕೆ ಬಹಳ ಕಷ್ಟವಾಗುತ್ತದೆ. ತಾವು ಸೇವೆ ಸಲ್ಲಿಸುವ ಪ್ರದೇಶದಲ್ಲಿ ಪ್ರತಿನಿತ್ಯ ಅದೇ ಮಾರ್ಗದಲ್ಲಿ ಸಂಚರಿಸುವ ವರ್ಷಾ ಜನರ ಬವಣೆಯನ್ನು ಕಂಡು ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದರು.

ಟಿಪ್ಪರ್ ನ್ನು ಬಾಡಿಗೆಗೆ ಪಡೆದು ಅದರಲ್ಲಿ ಮಣ್ಣು ಸಾಗಿಸಿ ಒಂದು ದಿನ ಕಾರ್ಮಿಕರನ್ನು ಕರೆಸಿ ಗುಂಡಿಗಳನ್ನು ಮಣ್ಣಿನಿಂದ ತುಂಬಿಸಲು ವ್ಯವಸ್ಥೆ ಮಾಡಿದರು, ಇದರಿಂದ ಈ ರಸ್ತೆಯಲ್ಲಿ ಹೋಗುವ ಪ್ರಯಾಣಿಕರು ಇಂದು ಭಯವಿಲ್ಲದೆ ಸಂಚರಿಸುವಂತಾಗಿದೆ.

ಸ್ವಂತ ಹಣದಿಂದ ಖರ್ಚು ಮಾಡಿರುವ ಅಧಿಕಾರಿ ವರ್ಷಾ: ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಲು ಸಾಕಷ್ಟು ವೆಚ್ಚ ತಗುಲಿತ್ತು. ಇದನ್ನು ಅವರ ಸ್ವಂತ ಹಣದಲ್ಲಿ ಭರಿಸಿದ್ದಾರೆ. ಸುತ್ತಮುತ್ತಲಿನ ನಿವಾಸಿಗಳು ಖುಷಿಯಾಗಿದ್ದಾರೆ.

ಪಿಎಸ್ ಐ ವರ್ಷಾ ಬಿ ವಿ
ಪಿಎಸ್ ಐ ವರ್ಷಾ ಬಿ ವಿ

ಈ ಬಗ್ಗೆ ವರ್ಷಾ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿ, ಹೊಂಡ ಗುಂಡಿಗಳಿಂದ ಪ್ರತಿದಿನ ವಾಹನ ಸವಾರರು ಬಳಲುತ್ತಿರುವುದನ್ನು ನಾನು ನೋಡಿಕೊಂಡು ಇರಲು ಸಾಧ್ಯವಾಗಲಿಲ್ಲ. ಸಾರ್ವಜನಿಕ ಸೇವಕಿಯಾಗಿ, ನಾನು ಕ್ರಮ ಕೈಗೊಳ್ಳುವುದು ಮತ್ತು ಪರಿಸ್ಥಿತಿಯನ್ನು ಸುಧಾರಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದೆ ಎಂದರು.

ವರ್ಷಾ ಅವರ ಈ ಕೆಲಸ ಹಲವರಿಗೆ ಸ್ಫೂರ್ತಿಯಾಗಿದೆ. ವರ್ಷಾ ಅವರು ತಮ್ಮ ಸಮಾಜ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ನನ್ನ ಕೆಲಸವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ. ಆಸುಪಾಸಿನಲ್ಲಿ ಇಂತಹ ಗುಂಡಿಗಳು ಹೆಚ್ಚಾಗಿದ್ದು, ನನ್ನಿಂದ ಸಾಧ್ಯವಾಗುವ ಮಟ್ಟಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಹಾಳಾದ ರಸ್ತೆಯ ದುರಸ್ತಿ ಕಾರ್ಯವನ್ನು ಪರಿಶೀಲಿಸುತ್ತಿರುವ ಪಿಎಸ್ ಐ ವರ್ಷಾ ಬಿ ವಿ
ಭಾವುಕತೆಗೆ ಸಾಕ್ಷಿಯಾದ ಕ್ಷಣ: ತಂದೆಯಿಂದಲೇ ಅಧಿಕಾರ ವಹಿಸಿಕೊಂಡ ಮಹಿಳಾ ಎಸ್‌ಐ!

ರಸ್ತೆಯ ದುಸ್ಥಿತಿ ಎಷ್ಟು ಹದಗೆಟ್ಟಿತ್ತು ಎಂದು ಸಮೀಪದಲ್ಲೇ ಅಂಗಡಿ ಇಟ್ಟುಕೊಂಡಿರುವ ಮಧು ನೆನಪಿಸಿಕೊಳ್ಳುತ್ತಾರೆ. ರಸ್ತೆ ಹೊಂಡ ಬಿದ್ದು ಹಳ್ಳದಂತಾಗಿತ್ತು. ಕಳೆದ ವಾರ ಸುರಿದ ಭಾರಿ ಮಳೆಗೆ ಅದು ಸಣ್ಣ ಕೊಳದಂತೆ ಕಾಣುತ್ತಿತ್ತು. ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಈ ಮಾರ್ಗದಲ್ಲಿ ಸಂಚರಿಸಲು ಪರದಾಡುವಂತಾಗಿತ್ತು. ಪೊಲೀಸ್ ಅಧಿಕಾರಿ ವರ್ಷಾ ಅವರ ಈ ಕಾರ್ಯದಿಂದ ಇಂದು ಬಹಳ ಸಹಾಯವಾಗಿದೆ ಎಂದರು.

ವರ್ಷಾ ಮಂಡ್ಯ ಜನತೆಯ ಗಮನ ಸೆಳೆದಿದ್ದು ಇದೇ ಮೊದಲಲ್ಲ. ಎರಡು ವರ್ಷಗಳ ಹಿಂದೆ, ವರ್ಷಾ ಅವರು, ಅದೇ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಮ್ಮ ತಂದೆ ಬಿಎಸ್ ವೆಂಕಟೇಶ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು. ಅವರ ತಂದೆಗೆ ಬೇರೆಡೆಗೆ ವರ್ಗಾವಣೆ ಆಗಿತ್ತು.

ಇದು ಕೇವಲ ಪ್ರಾರಂಭ. ನಾನು ಇತರ ಸಮಸ್ಯಾತ್ಮಕ ಪ್ರದೇಶಗಳನ್ನು ಗುರುತಿಸಿದ್ದೇನೆ, ಅವುಗಳನ್ನು ಪರಿಹರಿಸಲು ನಾನು ಬದ್ಧನಾಗಿದ್ದೇನೆ ಎನ್ನುತ್ತಾರೆ ವರ್ಷಾ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com