ಒಂದು ಅಪರೂಪದ ರಕ್ತ ಸಂಬಂಧದ ಕಥೆ...

ಬಾಂಬೆ ಬ್ಲಡ್ ಗ್ರೂಪ್ (hh blood group) ಎಲ್ಲಕ್ಕಿಂತ ಅಪರೂಪದ ರಕ್ತದ ಗುಂಪಾಗಿದ್ದು, ಈ ಎನ್‌ಜಿಒ ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ದಾನಿಗಳನ್ನು ತಮ್ಮೊಂದಿಗೆ ನೋಂದಾಯಿಸಿಕೊಂಡಿದೆ.
A blood donor being honoured in Vijayapura
ರಕ್ತದಾನಿಯನ್ನು ಸನ್ಮಾನಿಸುತ್ತಿರುವ ದೃಶ್ಯ
Updated on

ದುರಂತದಿಂದ ಹುಟ್ಟಿದ ಉದಾತ್ತ ಚಿಂತನೆ ಈ ವರದಿಯಲ್ಲಿದೆ.

ವಿಜಯಪುರ ನಿವಾಸಿ ಅತೀಬ್ ಇನಾಮದಾರ ಅವರ ಜೀವನ 2008ರಲ್ಲಿ ತಲೆಕೆಳಗಾದ ವರ್ಷ. ಅವರ ಒಂಬತ್ತು ತಿಂಗಳ ಸೋದರ ಸೊಸೆ ಡೆಂಗ್ಯೂಗೆ ಅಗತ್ಯವಿರುವ ಪ್ಲೇಟ್ಲೆಟ್ ಗಳು ಸಿಗದೇ ಸಾವನ್ನಪ್ಪಿದರು. “ವಿಜಯಪುರದ ಆಸ್ಪತ್ರೆಯವರು ನಮಗೆ ಉತ್ತಮ ಚಿಕಿತ್ಸೆಗಾಗಿ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತೆರಳಲು ಸಲಹೆ ನೀಡಿದ್ದರು. ಆದರೆ ನಮ್ಮ ಪ್ರಯತ್ನಗಳ ಹೊರತಾಗಿಯೂ, ಅಗತ್ಯವಿರುವ ಪ್ಲೇಟ್‌ಲೆಟ್‌ಗಳನ್ನು ವ್ಯವಸ್ಥೆ ಮಾಡಲು ನಾವು ವಿಫಲರಾದೆವು ಮತ್ತು ಒಂಬತ್ತು ದಿನಗಳ ನಂತರ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿತು, ”ಎಂದು 30 ವರ್ಷ ವಯಸ್ಸಿನ ಅತೀಬ್ ತನ್ನ ಸೋದರ ಸೊಸೆಯನ್ನು ಉಳಿಸಿಕೊಳ್ಳಲು ಪ್ಲೇಟ್‌ಲೆಟ್‌ಗಳನ್ನು ವ್ಯವಸ್ಥೆ ಮಾಡಲು ವಿಫಲವಾದ ಅಸಹಾಯಕತೆಯನ್ನು ನೆನೆದು ತಮ್ಮ ಜೀವನದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಆ ಘಟನೆಯು ಅತೀಬ್‌ನನ್ನು ಎಷ್ಟು ಆಳವಾಗಿ ಕಾಡಿತ್ತು ಎಂದರೆ ಅದು ಆತನ ಮತ್ತು ಆತನ ಸ್ನೇಹಿತರನ್ನು ರಕ್ತದಾನಿಗಳ ಗುಂಪನ್ನು ಪ್ರಾರಂಭಿಸಲು ಪ್ರೇರೇಪಿಸಿತು. "ನಾನು, ನನ್ನ ಸೋದರ ಮಾವ ಮತ್ತು ನನ್ನ ಸೋದರ ಸಂಬಂಧಿಗಳು ಮತ್ತು ಸ್ನೇಹಿತರು ಸೇರಿದಂತೆ 15 ಇತರರ ಬೆಂಬಲದೊಂದಿಗೆ 2009 ರಲ್ಲಿ ಆಂದೋಲನವನ್ನು ಪ್ರಾರಂಭಿಸಿದೆವು. ಇದು ವರ್ಷಗಳಿಂದ ಬೆಳೆದು ಈಗ 3,000ಕ್ಕಿಂತ ಹೆಚ್ಚು ದಾನಿಗಳ ಸಂಖ್ಯೆಯನ್ನು ಹೊಂದಿದೆ. ಇಂದು, ರಕ್ತದ ಅಗತ್ಯವಿರುವ ಅಸಂಖ್ಯಾತ ಜನರ ಜೀವಗಳನ್ನು ಉಳಿಸಿದ ತೃಪ್ತಿ ನಮಗಿದೆ,” ಎನ್ನುತ್ತಾರೆ ಅತೀಬ್‌

ಅತೀಬ್ 2013 ರಲ್ಲಿ ಈ ಸಂಘವನ್ನು ಎನ್‌ಜಿಒ ಆಗಿ ನೋಂದಾಯಿಸಿ, ಸುಲ್ತಾನ್ ಸೋಷಿಯಲ್ ಗ್ರೂಪ್ ಮತ್ತು ವೆಲ್‌ಫೇರ್ ಸೊಸೈಟಿ ಎಂದು ಹೆಸರು ನೀಡಿದರು ಮತ್ತು ಈ ಜಾಲವನ್ನು ವಿಸ್ತರಿಸಿದರು. ಆರಂಭದಲ್ಲಿ, NGO ಕೇವಲ ರಕ್ತದಾನದಲ್ಲಿ ತೊಡಗಿಸಿಕೊಳ್ಳದೇ ಬಡವರಿಗೆ ಚಿಕಿತ್ಸೆ ನೀಡಲು ದಾನವನ್ನು ಸಂಗ್ರಹಿಸುತ್ತಿತ್ತು. ಆದರೆ ವರ್ಷಗಳು ಕಳೆದಂತೆ, ಜನರು ಅನೇಕರಿಂದ ಹಣಕಾಸಿನ ನೆರವು ಪಡೆಯುತ್ತಿದ್ದಾರೆ ಆದರೆ ರಕ್ತ ದಾನದ ಕೊರತೆ ಇದೆ ಎಂಬುದನ್ನು ಅರಿತುಕೊಂಡ ಬಳಿಕ ಎನ್‌ಜಿಒ ಹೆಚ್ಚಾಗಿ ರಕ್ತದಾನದ ಮೇಲೆ ತನ್ನ ಚಟುವಟಿಕೆಗಳನ್ನು ಕೇಂದ್ರೀಕರಿಸಿದೆ.

3 ತಿಂಗಳಿಗೆ 1 ಯೂನಿಟ್ ರಕ್ತ ದಾನ ಮಾಡಿ

“ಸಾಮಾಜಿಕ ಮಾಧ್ಯಮದಿಂದಾಗಿ ನಮ್ಮ ಜಾಲ ವಿಸ್ತರಿಸಿತು. ನಾವು ಸುಲಭವಾಗಿ ಹೆಚ್ಚು ದಾನಿಗಳನ್ನು ಸೇರಿಸುತ್ತಿದ್ದದ್ದು ಮಾತ್ರವಲ್ಲ. ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಾಗ್ಗೆ ಕರೆಗಳು ಮತ್ತು ರಕ್ತಕ್ಕಾಗಿ ಬೇಡಿಕೆಯನ್ನು ಪಡೆಯಲಾರಂಭಿಸಿದೆವು. ನಾವು ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮತ್ತು ದೆಹಲಿಯಲ್ಲೂ ಇದೇ ರೀತಿಯ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದೇವೆ, ”ಎಂದು ಅತೀಬ್‌ ಹೇಳುತ್ತಾರೆ. ಸಾಮಾಜಿಕ ಮಾಧ್ಯಮಗಳು ಪ್ರಬಲವಾಗುವುದಕ್ಕೂ ಮೊದಲು ಅತೀಬ್ ಮತ್ತು ಸಂಗಡಿಗರು ದಾನಿಗಳನ್ನು ಫೋನ್ ಮೂಲಕ ಮಾತ್ರ ಸಂಪರ್ಕಿಸುತ್ತಿದ್ದರು ಇದರಿಂದ ಅವರು ತಲುಪುತ್ತಿದ್ದ ಸಂಖ್ಯೆಯೂ ಸೀಮಿತವಾಗಿಯೇ ಇತ್ತು. "ಇದು ನಮ್ಮ ಆತ್ಮದ ತೃಪ್ತಿಗಾಗಿ ಮಾತ್ರ ಮಾಡುವ ಕೆಲಸವಾಗಿದೆ ಮತ್ತು ಯಾವುದೇ ಹಣಕಾಸಿನ ಲಾಭಕ್ಕಾಗಿ ಅಲ್ಲ" ಎಂದು ಅತೀಬ್ ವಿವರಿಸಿದ್ದಾರೆ.

ತಮ್ಮ ಸುಲ್ತಾನ್ ಸೋಷಿಯಲ್ ಗ್ರೂಪ್ ಮತ್ತು ವೆಲ್‌ಫೇರ್ ಸೊಸೈಟಿ ಇಂದು ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಕನಿಷ್ಠ ಹತ್ತಾರು ವಿಭಿನ್ನ ರಕ್ತದಾನಿಗಳ ಗುಂಪುಗಳ ಭಾಗವಾಗಿದೆ ಎಂಬುದನ್ನು ಅತೀಬ್ ಹೆಮ್ಮೆಯಿಂದ ಹೇಳುತ್ತಾರೆ. "ಇದು ವಿವಿಧ ಗುಂಪುಗಳಲ್ಲಿ ರಕ್ತದ ಅಗತ್ಯವಿರುವ ರೋಗಿಗಳ ವಿವರಗಳನ್ನು ಹಂಚಿಕೊಳ್ಳಲು ನಮಗೆ ಸಹಾಯ ಮಾಡಿದೆ. ಮಾಹಿತಿಯನ್ನು ರವಾನಿಸಿದ ಕ್ಷಣದಲ್ಲಿ, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮನ್ನು ಸಂಪರ್ಕಿಸುತ್ತಾರೆ, ”ಎಂದು ಅತೀಬ್ ಹೇಳಿದ್ದಾರೆ.

ಅಪರೂಪದ ರಕ್ತ ಗುಂಪುಗಳು

ಸಾಮಾನ್ಯವಾಗಿರುವ ರಕ್ತದ ಗುಂಪುಗಳಲ್ಲದೆ, ಎಲ್ಲಾ ನೆಗೆಟೀವ್ ರಕ್ತದ ಗುಂಪುಗಳು ಮತ್ತು AB+ ನಂತಹ ಅಪರೂಪದ ರಕ್ತದ ಗುಂಪುಗಳೊಂದಿಗೆ ದಾನಿಗಳ ದಾಖಲೆಯನ್ನು ತಮ್ಮಲ್ಲಿ ಇರಿಸಲಾಗುತ್ತದೆ ಎಂದು ಅತೀಬ್ ಹೇಳುತ್ತಾರೆ. ‘ಬಾಂಬೆ ಬ್ಲಡ್ ಗ್ರೂಪ್ (hh blood group) ಎಲ್ಲಕ್ಕಿಂತ ಅಪರೂಪದ ರಕ್ತದ ಗುಂಪಾಗಿದ್ದು, ಎನ್‌ಜಿಒ ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ದಾನಿಗಳನ್ನು ತಮ್ಮೊಂದಿಗೆ ನೋಂದಾಯಿಸಿಕೊಂಡಿದೆ. ಈ ರಕ್ತದ ಗುಂಪಿಗೆ ಸೇರಿದವರು “ನಮ್ಮಲ್ಲಿ ಕಲಬುರಗಿ ಜಿಲ್ಲೆಯಿಂದ ಐವರು ಮಂದಿ ಇದ್ದಾರೆ. ಒಟ್ಟಾರೆಯಾಗಿ, ಈ ಅಪರೂಪದ ಗುಂಪಿನಲ್ಲಿ ನಾವು 12 ಜನರನ್ನು ಹೊಂದಿದ್ದೇವೆ. ಒಮ್ಮೆ ರಕ್ತದಾನ ಮಾಡಿದರೆ ಕಳೆದುಹೋದ ರಕ್ತ ಕಣಗಳನ್ನು ಮರಳಿ ಪಡೆಯಲು ಸಮಯ ಬೇಕಾಗುವುದರಿಂದ ಕನಿಷ್ಠ ಮೂರು ತಿಂಗಳವರೆಗೆ ಮತ್ತೆ ರಕ್ತದಾನ ಮಾಡಲು ಸಾಧ್ಯವಿಲ್ಲದ ಕಾರಣ ಯಾವುದೇ ದಾನ ಶಿಬಿರಗಳಲ್ಲಿ ರಕ್ತದಾನ ಮಾಡಬೇಡಿ, ರೋಗಿಗೆ ಅಗತ್ಯವಿದ್ದಾಗ ಮಾತ್ರ ರಕ್ತದಾನ ಮಾಡುವಂತೆ ತಿಳಿಸಿದ್ದೇವೆ” ಎಂದು ಅತೀಬ್ ಹೇಳಿದ್ದಾರೆ.

A blood donor being honoured in Vijayapura
ಅಂಗಾಂಗ ದಾನ: ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ

ಜಿಲ್ಲೆಯಲ್ಲಿ ಈ ಗುಂಪು ಉತ್ತಮ ಹೆಸರು ಪಡೆದ ನಂತರ ಕೇವಲ ಆಸ್ಪತ್ರೆಗಳಲ್ಲದೇ ಬಹುತೇಕ ಎಲ್ಲಾ ಬ್ಲಡ್ ಬ್ಯಾಂಕ್‌ಗಳು ರಕ್ತಕ್ಕಾಗಿ ತಮ್ಮ ಬಳಿಗೆ ಬರುತ್ತವೆ ಎನ್ನುತ್ತಾರೆ ಅತೀಬ್. "ರೋಗಿಗೆ ಅದನ್ನು ಭರಿಸಲಾಗದಿದ್ದರೆ, ಮೊತ್ತವನ್ನು ಮನ್ನಾ ಮಾಡಲು ನಾವು ರಕ್ತನಿಧಿಗಳಿಗೆ ವಿನಂತಿಸುತ್ತೇವೆ ಮತ್ತು ನಾವು ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತೇವೆ" ಎನ್ನುತ್ತಾರೆ ಅತೀಬ್.

ಜನರು ಜೀವ ಉಳಿಸಲು ರಕ್ತದಾನ ಮಾಡಲು ಮುಂದೆ ಬರಬೇಕು ಎನ್ನುವ ಅತೀಬ್. “ಮನುಷ್ಯನು ಸಹ ಮಾನವನಿಗೆ ಮಾಡಬಹುದಾದ ಅತ್ಯುತ್ತಮ ದಾನ ಇದು" ಎಂಬುದನ್ನು ನಂಬಿದ್ದಾರೆ. ಪ್ರತಿಯೊಬ್ಬರೂ ವಿವಿಧ ಕಾರಣಗಳಿಗಾಗಿ ರಕ್ತದಾನ ಮಾಡಲು ಸಾಧ್ಯವಿಲ್ಲದ ಕಾರಣ ಕೆಲವೇ ಜನರು ಆ ಕೆಲಸವನ್ನು ಮಾಡಲು ಸಾಧ್ಯವಿದೆ ಎಂಬುದನ್ನು ನಾನು ನಂಬುತ್ತೇನೆ. ಅರ್ಹರು ತಮ್ಮ ಜಾತಿ, ಮತ, ಅಥವಾ ಧರ್ಮವನ್ನು ಲೆಕ್ಕಿಸಬಾರದು. ಅವಕಾಶವನ್ನು ಕಳೆದುಕೊಳ್ಳಬಾರದು. ಅಂತಿಮವಾಗಿ, ಮಾನವೀಯತೆಯು ಪ್ರತಿಯೊಂದು ಧರ್ಮದ ಅಡಿಪಾಯವಾಗಿದೆ, ”ಎಂದು ಅತೀಬ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com