

ಧಾರವಾಡ: ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (NWKSRTC) ಭದ್ರತಾ ವಿಭಾಗದಲ್ಲಿ ಮುಸ್ಲಿಂ ಕಾನ್‌ಸ್ಟೆಬಲ್ ಆಗಿರುವ ಲಾಲ್‌ಸಾಬ್ ರಸಲ್‌ಸಾಬ್ ಬುದಿಹಾಳ್ ಧಾರವಾಡದ ಬಸ್ ಡಿಪೋ ಆವರಣದಲ್ಲಿ ಹನುಮಂತನಿಗೆ ಮೀಸಲಾದ ದೇವಾಲಯವನ್ನು ನಿರ್ಮಿಸಿದ್ದಾರೆ.
ದೇವಾಲಯ ನಿರ್ಮಾಣ ಕಳೆದ ವರ್ಷ ಪೂರ್ಣಗೊಂಡಿದ್ದರೂ, ಇತ್ತೀಚೆಗೆ ಬೆಳಕಿಗೆ ಬಂದಿತು. 60 ವರ್ಷದ ಲಾಲ್‌ಸಾಬ್ ರಸಲ್‌ಸಾಬ್ ಬುದಿಹಾಳ್ ತಮ್ಮ ಸಮುದಾಯದ ಮುಖಂಡರು ಮತ್ತು ನಿಗಮದ ಉನ್ನತ ಅಧಿಕಾರಿಗಳ ವಿರೋಧದ ನಡುವೆಯೂ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡರು.
ಅವರು ಈ ದೇವಾಲಯ ನಿರ್ಮಾಣಕ್ಕೆ ತಮ್ಮ ಸ್ವಂತ ಹಣದಿಂದ ಮತ್ತು ಇಲಾಖೆಯಲ್ಲಿನ ತಮ್ಮ ಸಹೋದ್ಯೋಗಿಗಳ ಸಹಾಯದಿಂದ ದೇವಾಲಯ ನಿರ್ಮಿಸಿದ್ದಾರೆ. ದೇವಾಲಯದ ನಿರ್ಮಾಣದ ಬಗ್ಗೆ ಭದ್ರತಾ ಮತ್ತು ವಿಜಿಲೆನ್ಸ್ ಇಲಾಖೆಗಳಲ್ಲಿನ ನೌಕರರು ಮತ್ತು ಅಧಿಕಾರಿಗಳ ನಡುವೆ ಘರ್ಷಣೆಗಳು ನಡೆದಿವೆ ಎಂದು ಬುದಿಹಾಳ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ದೇವಾಲಯದಲ್ಲಿ ಸ್ಥಾಪಿಸಲು ತರಲಾದ ವಿಗ್ರಹವನ್ನು ಹೊಸ ಡಿಪೋ ಆವರಣದಲ್ಲಿ ಇರಿಸಲಾಗಿತ್ತು. ನಾನು ಹೊಸ ಡಿಪೋದಲ್ಲಿ ಕೆಲಸದಲ್ಲಿದ್ದಾಗ, ವಾಹನ ನಿಲುಗಡೆ ಸ್ಥಳದಲ್ಲಿ ವಿಗ್ರಹ ಬಿದ್ದಿರುವುದನ್ನು ನಾನು ನೋಡಿದೆ. ದೇವರನ್ನು ಕೆಟ್ಟದಾಗಿ ನಡೆಸಿಕೊಂಡ ರೀತಿ ನನಗೆ ನೋವುಂಟು ಮಾಡಿತು. ಹೀಗಾಗಿ ನಾನು ದೇವಾಲಯವನ್ನು ನಿರ್ಮಿಸಲು ನಿರ್ಧರಿಸಿದೆ.
ಅನೇಕ ಜನರು ನನ್ನ ಪ್ರಯತ್ನಗಳನ್ನು ವಿರೋಧಿಸಿದರು, ಆದರೆ ಉದ್ದೇಶ ಮತ್ತು ಸಮರ್ಪಣೆಯ ಮಹತ್ವವು ನನ್ನನ್ನು ಮುಂದೆ ಹೆಜ್ಜೆ ಇಡುವಂತೆ ಪ್ರೇರೇಪಿಸಿತು. ಇದು ಕೇವಲ ದೇವಾಲಯವಲ್ಲ, ಇದು ಸಹೋದರತ್ವ ಮತ್ತು ಇತರ ಧರ್ಮಗಳ ಬಗ್ಗೆ ಇರುವ ಗೌರವದ ಸಂಕೇತವಾಗಿದೆ ಎಂದು ಅವರು ಹೇಳಿದರು.
ಕೆಲವು ಉದ್ಯೋಗಿಗಳು ನಿರ್ಮಾಣದ ಆರಂಭಿಕ ಹಂತದಲ್ಲಿ ಕೈಜೋಡಿಸಿದರು, ಆದರೆ ವಿಜಿಲೆನ್ಸ್ ತಂಡದಿಂದ ಅಮಾನತುಗೊಳಿಸುವ ಬೆದರಿಕೆಯ ನಂತರ ಅವರು ಬೆಂಬಲ ಹಿಂತೆಗೆದುಕೊಂಡರು ಎಂದು ಹೇಳಿದರು. ಲಾಲ್‌ಸಾಬ್ ಎಂದಿಗೂ ಹಿಂದೆ ಸರಿಯಲಿಲ್ಲ.
ಅವರಿಗೆ ಅವರ ಸಮುದಾಯದವರಿಂದಲೇ ಬೆದರಿಕೆಗಳು ಬಂದಿದ್ದವು. ಆದರೆ ದೃಢನಿಶ್ಚಯದ ಬಲ ಮತ್ತು ಹನುಮಂತನ ಆಶೀರ್ವಾದವು ಅವರು ಗುರಿ ತಲುಪಲು ಸಹಾಯ ಮಾಡಿತು ಎಂದು ಉದ್ಯೋಗಿ ಹೇಳಿದ್ದಾರೆ.
NWKRTC ಯ ಅಧಿಕಾರಿಯೊಬ್ಬರು, "ಅವರು ನಿಷ್ಠಾವಂತ ವ್ಯಕ್ತಿ, ಅವರ ವಿರೋಧಿಗಳು ದೇವಾಲಯದ ನಿರ್ಮಾಣವನ್ನು ನಿಲ್ಲಿಸಲು ಕಾರಣವನ್ನು ಕಂಡುಹಿಡಿಯುವಲ್ಲಿ ವಿಫಲರಾದರು. ಒಂದು ಹಂತದ ನಂತರ, ಮುಸ್ಲಿಂ ಸಮುದಾಯದ ಬಹುಪಾಲು ಉದ್ಯೋಗಿಗಳು ಅವರನ್ನು ಬೆಂಬಲಿಸಿದರು ಎಂದು ತಿಳಿಸಿದ್ದಾರೆ.
Advertisement