

ಬರಹ: ಡಾ ಜಗದೀಶ್ ಬಿದರಕೊಪ್ಪ, ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಒಬ್ಬ ಮಹಾನ್ ತತ್ವಜ್ಞಾನಿ ಆದರ್ಶ ಶಿಕ್ಷಕ, ರಾಜನೀತಿ, ತತ್ವ ಶಾಸ್ತ್ರಜ್ಞ, ಹಾಗೆಯೇ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಪ್ಟೆಂಬರ್ 5 ರಂದು ತಮಿಳುನಾಡಿನಲ್ಲಿ ಜನಿಸಿದ ಇವರ ಜನ್ಮದಿನವನ್ನು 1962 ರಿಂದಲೂ ಭಾರತದಲ್ಲಿ ನಿರಂತರವಾಗಿ ಶಿಕ್ಷಣ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ರಾಧಾಕೃಷ್ಣನ್ ರಾಷ್ಟ್ರಪತಿ ಯಾದಾಗ ಇವರ ಹುಟ್ಟುಹಬ್ಬವನ್ನು ಆಚರಿಸಲು ವಿದ್ಯಾರ್ಥಿಗಳು ಮುಂದಾಗಿದ್ದಾಗ, ನನ್ನ ಹುಟ್ಟು ಹಬ್ಬದ ಬದಲು ಸಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ಹೆಚ್ಚು ಸಂತೋಷ ಆಗುತ್ತದೆ ಎಂದಿದ್ದರು. ಮುಂದುವರೆದಂತೆ ಪೂರ್ವ ಮತ್ತು ಪಶ್ಚಿಮ ತತ್ವಶಾಸ್ತ್ರಗಳ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸಿದ ಇವರು ಭಾರತೀಯ ಸಂಸ್ಕೃತಿಗೆ ಜಾಗತಿಕ ಮುನ್ನಡೆ ತಂದುಕೊಟ್ಟವರು. ಭಾರತೀಯ ತತ್ವಶಾಸ್ತ್ರವನ್ನು ವಿಶ್ವಕ್ಕೆ ಪರಿಚಯಿಸಿ, ಮನುಷ್ಯನ ಬದುಕಿಗೆ ಆಧ್ಯಾತ್ಮಿಕ ಮೌಲ್ಯಗಳು ಅತ್ಯವಶ್ಯಕ ಎಂದು ಪ್ರತಿಪಾದಿಸಿದರು. ಹಿಂದೂ ಧರ್ಮದ ಸತ್ಯವನ್ನು ಪಾಶ್ಚಾತ್ಯ ಜಗತ್ತಿಗೆ ಸರಳವಾಗಿ ಅರ್ಥ ಮಾಡಿಸುವಲ್ಲಿ ಇವರ ಪಾತ್ರ ದೊಡ್ಡದಿದೆ.
ಶಿಕ್ಷಕ ವೃತ್ತಿಯನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತಿದ್ದ ಇವರು ಶಿಕ್ಷಣವೆಂದರೆ ಕೇವಲ ಮಾಹಿತಿಯ ಸಂಗ್ರವಲ್ಲ ಭೌತಿಕ ಶಕ್ತಿಯನ್ನು ವಿಕಸನ ಗೊಳಿಸುವದೊಂದಿಗೆ ಮನುಷ್ಯನ ಹೃದಯ ಮತ್ತು ಭಾವನೆಗಳ ಮೇಲೆ ಪ್ರಭಾವ ಬೀರಬೇಕು ಈ ಪ್ರಭಾವದಿಂದ ವಿದ್ಯಾರ್ಥಿಗಳಲ್ಲಿ ದಯೆ ಮತ್ತು ಅನುಕಂಪ ಎಂಬ ಭಾವನೆಗಳು ಹುಟ್ಟಿಕೊಳ್ಳುತ್ತವೆ. ವಿದ್ಯಾರ್ಥಿಗಳಲ್ಲಿ ನೈತಿಕತೆ ಮತ್ತು ಜವಾಬ್ದಾರಿಯನ್ನು ಬೆಳೆಸುವ ಶಿಕ್ಷಣ ಅಗತ್ಯ ಎಂದು ಪ್ರತಿಪಾದಿಸಿದರು. ತನಿಖಾ ಮನೋಭಾವ ಸೃಜನ ಶೀಲತೆ, ಮುಂತಾದ ವಿಚಾರಣಾ ಗುಣವನ್ನು ಶಿಕ್ಷಣ ವಿದ್ಯಾರ್ಥಿಗಳಲ್ಲಿ ಬೆಳೆಸುವಂತಿರಬೇಕು ಶಿಕ್ಷಣದಿಂದ ವಿದ್ಯಾರ್ಥಿಗಳಲ್ಲಿ ಕಲ್ಪನಾ ಶಕ್ತಿ ಕರಕುಶಲತೆ ಬೆಳೆಯಬೇಕು, ತಂತ್ರಜ್ಞಾನ ಮತ್ತು ವಿಜ್ಞಾನದ ವಿದ್ಯಾರ್ಥಿಗಳು ತಮ್ಮನ್ನು ತಾವು ಅರ್ಪಿಸುವುದನ್ನು ಹೇಳಿಕೊಡುವಂತಿರಬೇಕು. ನಮ್ಮನ್ನು ನಾವು ನಿಯಂತ್ರಿಸಿ ಕೊಳ್ಳುವ ತರಬೇತಿಯನ್ನು ಶಿಕ್ಷಣವು ನಮಗೆ ಕೊಡಬೇಕು ಅವಸರದ ನಿರ್ಣಯಗಳಿಂದ ನಾವು ದಾರಿ ತುಳಿಯಬಾರದು ಎಲ್ಲವನ್ನು ಕೂಲಂಕುಶವಾಗಿ ವಿಚಾರಿಸಿ ಬೇಕು. ಇದಕ್ಕೆಲ್ಲ ತಾಳ್ಮೆ ಅವಶ್ಯ ಸ್ವಯಂ ನಿಯಂತ್ರಣ ಅವಶ್ಯ ಅಂತ ಸ್ವಯಂ ನಿಯಂತ್ರಣವನ್ನು ಜನರಲ್ಲಿ ತುಂಬುವುದೇ ಶಿಕ್ಷಣದ ಒಂದು ಪ್ರಮುಖ ಗುರಿಯಾಗಬೇಕು ಹೊಸ ವಿಚಾರಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಉದಾರ ಗುಣವನ್ನು ಯುವ ವಿದ್ಯಾರ್ಥಿಗಳಲ್ಲಿ ಬಳಸುವ ಶಿಕ್ಷಣದ ಮುಖ್ಯ ಗುರಿಯಾಗಬೇಕು ನಿತ್ಯ ನಮ್ರತೆ ಹಾಗೂ ಸಹಾನುಭೂತಿ ಅಂತಹ ಗುಣಗಳನ್ನು ಬೆಳೆಸುವುದು ಶಿಕ್ಷಣದ ಕರ್ತವ್ಯ ಕೇವಲ ಜ್ಞಾನ ನೀಡಿದರೆ ಸಾಲದು ಹೃದಯ ಮನೋಭಾವನೆ ಬೆಳೆಸುವ. ಆತ್ಮಕ್ಕೆ ಶಿಸ್ತು ತರುವ ಕೆಲಸ ಶಿಕ್ಷಣದಿಂದ ಆಗಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.
ರಾಧಾಕೃಷ್ಣನ್ ಅವರು ಯುವಕರನ್ನು ಉದ್ದೇಶಿಸಿ, ದೇಶದ ಅತ್ಯ ಅಮೂಲ್ಯ ಶಕ್ತಿ ಮತ್ತು ಭವಿಷ್ಯದ ಶಿಲ್ಪಿಗಳು ಎಂದು ಬಲವಾಗಿ ನಂಬಿದ್ದರು ಅಕ್ಟೋಬರ್ 26 1953 ರಂದು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರು ನೀಡಿದ ಪ್ರಸಿದ್ಧ ಘಟಕೋಸ್ತವ ಭಾಷಣ ಯುವಕರಿಗೆ ಒಂದು ಕರೆ ಯುವ ಜನಾಂಗದ ಜವಾಬ್ದಾರಿಗಳ ಕುರಿತು ಅವರ ಆಳವಾದ ಚಿಂತನೆಗಳನ್ನು ಬಿಂಬಿ ಸುತ್ತದೆ. ಯುವಕರಲ್ಲಿ ಕೇವಲ ಭೌತಿಕ ಜ್ಞಾನವಿದ್ದರೆ ಸಾಲದು ಉನ್ನತ ಚರಿತ್ರೆ ಇರಬೇಕು, ದೇಶದ ಪ್ರಗತಿ ಕೇವಲ ಫ್ಯಾಕ್ಟರಿ ಅಣೆಕಟ್ಟುಗಳಿಂದಲ್ಲ ಆಗುವುದಿಲ್ಲ, ಯುವಕರ ಪ್ರಾಮಾಣಿಕತೆಯಿಂದ ಸಾಧ್ಯ ಎಂದು ಬಲವಾಗಿ ಪ್ರತಿಪಾದಿಸಿದರು ಕಠಿಣ ಸಂದರ್ಭಗಳಲ್ಲಿ ಎದುರಿಸಲು ಯುವಕರು ದೃಢತೆ ಮತ್ತು ಆತ್ಮ ಸಂಯಮವನ್ನು ಬೆಳೆಸಿಕೊಳ್ಳಬೇಕು ಎಂದು ಸಂದೇಶ ನೀಡಿದರು
ಆದರ್ಶ ಶಿಕ್ಷಕರಾಗಿದ್ದ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರು ಬೋಧನಾಶೈಲಿ ನಿರ್ಗಳತೆ ವಿಷಯದ ಮೇಲಿನ ಪ್ರಭುತ್ವ ವಿದ್ಯಾರ್ಥಿಗಳನ್ನು ಬಹುಬೇಗ ಆಕರ್ಷಿಸಿತು ತಮ್ಮ ಪ್ರಾಧ್ಯಾಪಕತ್ವದ ಘನತೆಯನ್ನು ಬಿಟ್ಟು ಅವರು ಯುವಕರಂತೆ ಹಾಸ್ಯ ವಿನೋದಗಳಲ್ಲಿ ತೊಡಗುತ್ತಿದ್ದರು. ಶಿಕ್ಷಕನೊಬ್ಬನ ಗೌರವವು ಬೋಧನೆ ಜೊತೆಗೆ ವ್ಯಕ್ತಿತ್ವದ ಸೌಜನ್ಯ ಸ್ನೇಹ ಚಿಂತೆ ಎಲ್ಲರ ಗಮನವನ್ನು ಸೆಳಯುತ್ತದೆ. ಒಂದು ಸಂದರ್ಭದಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕಗೊಂಡಾಗ ಮೈಸೂರಿನಿಂದ ಹೊರಟ ದಿನ ಅವರಿಗೆ ಕೊಟ್ಟಂತಹ ವೈಭವದ ಬಿಳ್ಕೊಡುಗೆ ಯಾವ ಚಕ್ರವರ್ತಿಗೂ ದೊರೆತಿರಲಾರದು ಅಂದಿನ ವಾತಾವರಣದಲ್ಲಿ ವೈಭವಕ್ಕಿಂತ ಹೆಚ್ಚಾಗಿ ಹೃದಯದಿಂದ ನೇರವಾಗಿ ಪ್ರೀತಿ ಹೊರಹೊಂದಿದೆ. ಗುರು ಪ್ರೇಮ ವಿದ್ಯಾರ್ಥಿಗಳೆಲ್ಲರೂ ಭಕ್ತಿ ಪ್ರೇಮದ ಚಲುಮೆ ಉಕ್ಕಿಬಂದು ಡಾ. ರಾಧಾಕೃಷ್ಣನ್ ಅವರನ್ನು ಮಹಾರಾಜ ಕಾಲೇಜಿನಿಂದ ರೈಲು ನಿಲ್ದಾಣಕ್ಕೆ ಕರೆದೊಯ್ಯುವಾಗ ಸಾರೋಟಿಗೆ ಕುದುರೆಯನ್ನು ಕಟ್ಟಿದ್ದಿಲ್ಲ ಸ್ವತಃ ವಿದ್ಯಾರ್ಥಿಗಳು ಹೇಳಿದೊಯ್ದಿದ್ದರು. ರಾಧಾಕೃಷ್ಣನ್ ಅವರಿಗಾಗಿ ಕಾದಿರಿಸಿದ್ದ ರೈಲ್ವೆ ಕಾಂಪಾಟ್ಮೆಂಟನ ಒಳಗೆ ದಿಂಬು ಹಾಗೂ ರತ್ನಗಂಬಳಿಯನ್ನು ಹಾಸಿ ಮಲಗುವ ಸೀಟು ಮತ್ತು ನೆಲವನ್ನು ಹೂವಿನಿಂದ ದೇವಸ್ಥಾನದಲ್ಲಿ ಭಕ್ತರು ಅಲಂಕರಿಸಿದಂತೆ ಮಾಡಿದ್ದರು. ಡಾ ಸರ್ವಪಲ್ಲಿ ರಾಧಾಕೃಷ್ಣ ಅವರಿಗೆ ಜಯವಾಗಲಿ ಎಂಬ ಕೂಗು ರೈಲ್ವೆ ಸ್ಟೇಷನ್ ನಲ್ಲಿತ್ತು ಆ ದಿನ ಭಾವದ್ವೇಕದಿಂದ ಅದೆಷ್ಟು ಜನ ಅತ್ತಿದ್ದು ಉಂಟು, ವಿದ್ಯಾರ್ಥಿಗಳೇ ತೋರಿದ ವಿಶ್ವಾಸ ಅವರ ಕಣ್ಣಿನಲ್ಲಿ ಸಹ ನೀರು. ತಂದಿತ್ತು, ಎಲ್ಲಾ ಸಂಗತಿಗಳನ್ನು ಗಮನಿಸಿದರೆ ಅವರಂತ ಆದರ್ಶ ಶಿಕ್ಷಕರೆಂದು ಗೊತ್ತಾಗುತ್ತದೆ. ಶಿಕ್ಷಕರು ಸಮಾಜಕ್ಕೆ ನೀಡುವ ಅಮೂಲ್ಯ ಕೊಡುಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ ಎಂದು ರಾಧಾಕೃಷ್ಣನ್ ಅವರು ಸದಾ ಸ್ಮರಿಸುತ್ತಾರೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ರಾಜಕೀಯ ದೃಷ್ಟಿಕೋನವು ಆದರ್ಶವಾದ ಆಧ್ಯಾತ್ಮಿಕತೆ ಮಾನವತವಾದ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಮೇಲೆ ಆಧಾರವಾಗಿತ್ತು ಅವರು ಸಕ್ರಿಯ ಪಕ್ಷ ರಾಜಕೀಯಕ್ಕಿಂತ ಬೌದ್ಧಿಕ ಮತ್ತು ನೈತಿಕ ನಾಯಕತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರು. ರಾಜಕಾರಣದಲ್ಲಿ ನೈತಿಕ ಮೌಲ್ಯಗಳಿಗೆ ಇರಬೇಕು ಎಂದು ಅವರು ನಂಬಿದ್ದರು ರಾಷ್ಟ್ರಗಳ ನಡುವೆ ಸವಾರ್ಯತೆ ಮತ್ತು ಶಾಂತಿಯುತ ಸಹ ಬಾಳ್ವೆಯನ್ನು ಬೆಂಬಲಿಸಿದ್ದರು ರಾಜಕೀಯ ಸಂಸ್ಕೃತಿಯನ್ನು ಗೌರವಿಸುತ್ತದೆ ಎಲ್ಲಾ ಧರ್ಮಗಳ ಸಮಾನತೆಯನ್ನು ಸರ್ವ ಧರ್ಮ ಸಮಭಾವ ಎಂಬ ಅಂಶವನ್ನು ಪ್ರತಿಪಾದಿಸಿದರು ಪ್ರಜಾಪ್ರಭುತ್ವ ಯಶಸ್ವಿಯಾಗಲು ಪ್ರಜೆಗಳ ಶಿಕ್ಷಣ ಮತ್ತು ಬೌದ್ಧಿಕವಾಗಿ ಬೆಳೆಯಬೇಕು ಎಂದು ಅಭಿಪ್ರಾಯ ಪಟ್ಟಿದ್ದರು. ರಾಧಾಕೃಷ್ಣನ್ ಅವರು ಹಿಂದೂ ಧರ್ಮ ಮತ್ತು ವೇದಾಂತವನ್ನು ಅತಿ ಹೆಚ್ಚು ಆಧ್ಯಾತ್ಮಿಕ ಮತ್ತು ಅಮೂರ್ತ ನೆಲೆಯಲ್ಲಿ ವ್ಯಾಖ್ಯಾನಿಸಿದ್ದರು ಧರ್ಮದ ಆಚರಣೆ ಹಾಗೂ ಸಾಮಾಜಿಕ ವಾಸ್ತವತೆಗಳನ್ನ ಕಡೆಗಣಿಸಿದೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯವನ್ನು ಟೀಕಿಸಿದ್ದಾರೆ ಸ್ವತಂತ್ರ ಹೋರಾಟದ ಮುಂಚಿಮಣಿಯಲ್ಲಿ ಇದ್ದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರು ಬೌದ್ಧಿಕ ಹೆಮ್ಮೆಯ ಪ್ರತೀಕವಾಗಿ ಉನ್ನತ ರಾಜಕೀಯ ಸ್ಥಾನಗಳನ್ನು ಅಲಂಕರಿಸಿದ್ದು ಇತಿಹಾಸವಾಗಿದೆ ಭಾರತೀಯ ಸಂಪ್ರದಾಯವನ್ನು ಸಮರ್ಥಿಸುವ ಪುರದಲ್ಲಿ ಪಶ್ಚಿಮದ ತತ್ವಶಾಸ್ತ್ರ ನೆರಳಿನಲ್ಲಿಯೇ ಪ್ರಾಚೀನ ಭಾರತೀಯ ಗ್ರಂಥಗಳನ್ನು ಸಮರ್ಥಿಸಲು ಯತ್ನಿಸಿದರೆ ಎಂದು ವಿಮರ್ಶಿಸಲಾಗಿದೆ. ಭಾರತದ ಪರಂಪರೆಯ ಹಿರಿಮೆಗಳನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಜಗತ್ತಿಗೆ ವಿಶ್ಲೇಷಿಸಿ ವಿವರಿಸಿದ್ದ ಇವರು ಪೌರತ್ಯ ತತ್ವಜ್ಞಾನವನ್ನು ಪಾಶ್ಚಾತ್ಯ ಜಗತ್ತಿಗೆ ತಿಳಿಸಿಕೊಟ್ಟವರಲ್ಲಿ ರಾಧಾಕೃಷ್ಣನ್ ಅಗ್ರಗಣ್ಯರು ಹಾಗೂ.ಅವರೊಬ್ಬ ಆದರ್ಶ ಗುರು ಆಗಿದ್ದರು.ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಕೊಡುಗೆಯನ್ನು ಗಮನಿಸಿ ಅವರ ಹುಟ್ಟುಹಬ್ಬವನ್ನು ಭಾರತ ಶಿಕ್ಷಕರ ದಿನಾಚರಣೆಯ ಎಂದು ಆಚರಿಸುತ್ತಾ ಬಂದಿದೆ. ಇಂಥ ಉನ್ನತ ವಿಚಾರಧಾರೆಯನ್ನ ಹೊಂದಿದ್ದ ಮಹಾನ್ ವ್ಯಕ್ತಿ ಒಬ್ಬ ಶಿಕ್ಷಕನಾಗಿ ವೃತ್ತಿಯನ್ನು ಆರಂಭಿಸಿ ಅಧ್ಯಾಪನವನ್ನು ನಿರ್ವಂಚನೆಯಿಂದ ಮಾಡುತ್ತಾ ರಾಷ್ಟ್ರಪತಿ ಅಂತಹ ಉನ್ನತ ಹುದ್ದೆಯನ್ನು ಸಹ ಅಲಂಕರಿಸಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮಹಾನ್ ವ್ಯಕ್ತಿತ್ವದಿಂದ ಶಿಕ್ಷಕ ಕುಲದವರು ಹಾಗೂ ಸಮಾಜದ ಇನ್ನಿತರರು ಕಲಿಯುವಂತಹದು ಬಹಳಷ್ಟು ಇದೆ. ಇಂಥ ವ್ಯಕ್ತಿಯ ಜನ್ಮದಿನವಾದ ಸಪ್ಟಂಬರ್ 5 ಅನ್ನು ರಾಷ್ಟ್ರೀಯ ಶಿಕ್ಷಕ ದಿನಾಚರಣೆ ಆಗಿ ಆಚರಿಸುವುದು ನಮ್ಮೆಲ್ಲ ಶಿಕ್ಷಕರಿಗೆ ಒಂದು ಹೆಮ್ಮೆಯ ವಿಚಾರವೇ ಸರಿ.
- ಡಾ ಜಗದೀಶ್ ಬಿದರಕೊಪ್ಪ
ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕರು
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಶಿವಮೊಗ್ಗ
ಫೋನ್: 9844853324