

ಪರ್ತ್: ಜಾರ್ಜ್ ಬೇಯ್ಲಿ (ಅಜೇಯ 125) ಸ್ಫೋಟಕ ಬ್ಯಾಟಿಂಗ್ ಹಾಗೂ ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿ ನೆರವಿನೊಂದಿಗೆ ಆತಿಥೇಯ ಆಸ್ಟ್ರೇಲಿಯಾ ತಂಡ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಎಕದಿನ ಪಂದ್ಯದಲ್ಲಿ 54ರನ್ಗಳ ಗೆಲುವು ದಾಖಲಿಸಿದೆ.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್ಗಳಿಸಿತು. 110 ಎಸೆತಗಳನ್ನು ಎದುರಿಸಿದ ಜಾರ್ಜ್ ಬೇಯ್ಲಿ ಮೊತ್ತದಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿದ್ದವು. ಪಂದ್ಯದಲ್ಲಿ ಬೇಯ್ಲಿಗೆ ತಕ್ಕ ಸಾಥ್ ನೀಡಿದ ಫಾಲ್ಕನೇರ್ (39) ಶತಕದ ಜತೆಯಾಟ ನೀಡಿದರು. ಈ ಇಬ್ಬರ ಜತೆಯಾಟದಲ್ಲಿ 7ನೇ ವಿಕೆಟ್ಗೆ 100 ರನ್ ಪೇರಿಸಿತು.
ಆಗ 198ರನ್ ಗಳಿಸಿದ್ದ ಆಸೀಸ್ ಚೇತರಿಕೆ ಕಾಣುತ್ತಿದ್ದಂತೆಯೆ ಫಾಲ್ಕನೇರ್ ವಿಂಡೀಸ್ನ ಡಾರೆನ್ ಸಾಮಿ ಎಸೆತದಲ್ಲಿ ಪೊವೆಲ್ಗೆ ಕ್ಯಾಚ್ ನೀಡಿದರು. ನಂತರ ಬಂದ ಜಾನ್ಸನ್ ಅವರು ಬೇಯ್ಲಿ ಅವರೊಂದಿಗೆ 16 ರನ್ ಗಳಿಸಿ ಅಜೇಯರಾಗುಳಿದರು.
ನಂತರ ಕಾಂಗರೂಗಳು ನೀಡಿದ ಗುರಿಯನ್ನು ಬೆನ್ನಟ್ಟಿದ ಕೆರಿಬಿಯನ್ ತಂಡ ಮಿಚ್ಚೆಲ್ ಸ್ಟಾರ್ಕ್ ದಾಳಿಗೆ ಪರದಾಡಿತು. ಹೀಗಾಗಿ 38.1 ಓವರ್ನಲ್ಲಿ ತನ್ನೆಲ್ಲ ವಿಕೆಟ್ ಕಲೆದುಕೊಂಡ ವಿಂಡೀಸ್, ಕೇವಲ 212 ಗಳಿಸಿ ಪಂದ್ಯದಲ್ಲಿ ಕೈಚೆಲ್ಲಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 266/7 (50 ಓವರ್)
ಬೇಯ್ಲಿ ಅಜೇಯ 125 (110)
ಫಾಲ್ಕನೇರ್ 39 (67)
ಬೌಲಿಂಗ್: ಸಾಮಿ 48/3, ನಾರಾಯಣ್ 34/1
ವಿಂಡೀಸ್ 212/10 (38.1 ಓವರ್)
ಪಾವೆಲ್ 83 (90)
ಡಾರೆನ್ ಬ್ರಾವೊ (45)
ಬೌಲಿಂಗ್: ಸ್ಟಾರ್ಕ್ 32/5, ಮ್ಯಾಕ್ಸ್ವೆಲ್ 63/4
ಪಂದ್ಯಶ್ರೇಷ್ಠ: ಜಾರ್ಜ್ ಬೇಯ್ಲಿ