ಮೆಲ್ಬರ್ನ್: ಕ್ರಿಕೆಟ್ ಆಸ್ಟ್ರೇಲಿಯಾ ತಮ್ಮ ರಾಷ್ಟ್ರೀಯ ತಂಡದಲ್ಲಿ ರೊಟೇಷನ್ ಪದ್ಧತಿಯನ್ನು ಅಳವಡಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದ್ದು, ಆಸ್ಟ್ರೇಲಿಯಾದ ಸ್ಪಿನ್ ದೈತ್ಯ ಶೇನ್ವಾರ್ನ್ ಈ ಪದ್ಧತಿಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ರೊಟೇಷನ್ ಪದ್ಧತಿಯನ್ನು ಅಳವಡಿಸಿಕೊಂಡಿರುವುದಕ್ಕಾಗಿ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧ ಕಿಡಿಕಾರಿರುವ ವಾರ್ನ್, ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಪ್ರಣಾಳಿಕೆಯ ಎರಡನೇ ಭಾಗವಾಗಿ ಭವಿಷ್ಯದ ಆಸ್ಟ್ರೇಲಿಯಾ ಸೀಮಿತ ಓವರ್ಗಳ ಸರಣಿಗಳಲ್ಲಿ ಕೆಲ ಬದಲಾವಣೆ ತರುವಂತೆ ಸಲಹೆ ನೀಡಿದ್ದಾರೆ. ತನ್ನ ಧ್ಯೇಯ ಘೋಷದಲ್ಲಿ ತಿಳಿಸಿರುವಂತೆ 'ಫ್ಯಾನ್ ಫರ್ಸ್ಟ್, ಬಿ ದ ಬೆಸ್ಟ್-ಇನ್ಕ್ರೀಸ್ ಪಾರ್ಟಿಸಿಪೇಶನ್, ಪ್ರೊವೈಡ್ ಲೀಡರ್ಶಿಪ್ ಅಂಡ್ ಗ್ರೊ ದ ಗೇಮ್'ಎಂಬ ತತ್ವವನ್ನು ಪಾಲಿಸುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲವಾಗಿದೆ ಎಂದು ವಾರ್ನ್ ಅಭಿಪ್ರಾಯಪಟ್ಟಿದ್ದಾರೆ.