ವಿಶ್ವಕಪ್‌ನಿಂದ ಭಾರತ ಔಟ್

ಮಹಿಳಾ ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ಮಿಥಾಲಿ ಪಡೆಗೆ ಸೋಲು...
ವಿಶ್ವಕಪ್‌ನಿಂದ ಭಾರತ ಔಟ್
Updated on: 

ಮುಂಬೈ: ಶ್ರೀಲಂಕಾ ವಿರುದ್ಧದ  ಮಹಿಳಾ ವಿಶ್ವಕಪ್ ನಿರ್ಣಾಯಕ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ 50 ಓವರ್‌ಗಳಲ್ಲಿ 282 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಭಾರತ, 42.2 ಓವರ್‌ಗಳಲ್ಲಿ 144 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ 138 ರನ್ ಅಂತರದಲ್ಲಿ ಲಂಕಾ ಜಯ ಸಾಧಿಸಿತು.
ಈ ಸೋಲಿನ ಮೂಲಕ ಭಾರತ, ಈ ಬಾರಿಯ ಮಹಿಳಾ ವಿಶ್ವಕಪ್‌ನಿಂದ ಹೊರ ನಡೆದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಲಂಕಾ, ಕೇವಲ 4 ರನ್ ಮೊತ್ತಕ್ಕೇ ಆರಂಭಿಕ ಆಟಗಾರ್ತಿ ಜಯಂಗಾನಿ ಅವರನ್ನು ಕಳೆದುಕೊಂಡಿತು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ್ತಿ ಯಶೋದಾ ಮೆಂಡಿಸ್ ಹಾಗೂ ಮೂರನೇ ಕ್ರಮಾಂಕದ ರಾಸಂಗಿಕಾ ಜೋಡಿ, 2ನೇ ವಿಕೆಟ್‌ಗೆ 117 ರನ್ ಸೇರಿಸಿತು. ಶತಕದ ಈ ಜೊತೆಯಾಟದಲ್ಲಿ ಇಬ್ಬರೂ ಶತಕಾರ್ಧ ಪೂರೈಸಿದರು.
25ನೇ ಓವರ್‌ನಲ್ಲಿ ಮೆಂಡಿಸ್ ಅವರು ವಿಕೆಟ್ ಒಪ್ಪಿಸಿ ಹೊರನಡೆದಾಗ, ಕ್ರೀಸ್‌ಗೆ ಬಂದಿದ್ದು ಶಶಿಕಲಾ ಸಿರಿವರ್ಧನೆ. ಈ ಜೋಡಿ, 3ನೇ ವಿಕೆಟ್‌ಗೆ 47 ರನ್ ಸೇರಿಸಿತು. 40ನೇ ಓವರ್‌ನಲ್ಲಿ ರಾಸಂಗಿಕಾ ಅವರ ವಿಕೆಟ್ ಉರುಳುವ ಮೂಲಕ ಈ ಜೋಡಿ ಬೇರ್ಪಟ್ಟಿತು.
ಆಗ, ಕ್ರೀಸ್‌ಗೆ ಬಂದಿದ್ದು ಕೌಸಲ್ಯ. ಶಶಿಕಲಾ ಅವರೊಂದಿಗೆ ಸೇರಿದ ಇವರು, 4ನೇ ವಿಕೆಟ್‌ಗೆ 58 ರನ್ ಸೇರಿಸಿತು. 47ನೇ ಓವರ್‌ನಲ್ಲಿ ಸಿರಿವರ್ಧನೆ ವಿಕೆಟ್ ಬೀಳುವ ಮೂಲಕ, ಈ ಜೋಡಿ ಆಟಕ್ಕೆ ತೆರೆಬಿತ್ತು.
ಆನಂತರ, ಬಂದ ವೀರಕ್ಕೊಡಿ, ಕೌಸಲ್ಯ ಅವರಿಗೆ ಹೆಚ್ಚು ಸಾಥ್ ನೀಡಲಿಲ್ಲ. ಕೇವಲ 5 ರನ್ ಗಳಿಸಿದ ಅವರು ವಿಕೆಟ್ ಒಪ್ಪಿಸಿ, ಹೊರನಡೆದರು. ಇನಿಂಗ್ಸ್‌ನ ಅಂತಿಮ ಹಂತದಲ್ಲಿ ಕೌಸಲ್ಯ ಅವರಿಗೆ ಜೊತೆಯಾದ ಸೇನೆವಿತರಣಾ ಅವರು, 26 ರನ್‌ಗಳ ಜೊತೆಯಾಟವಾಡಿದರು. ಅಂತಿಮವಾಗಿ, ಲಂಕಾ 282 ರನ್‌ಗಳ ಮೊತ್ತ ಸಂಪಾದಿಸಿತು. ಸೇನಾವಿತರಣ (5) ಹಾಗೂ ಕೌಸಲ್ಯ (56) ಅಜೇಯರಾಗಿ ಉಳಿದರು.

ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ: 282/5 (50 ಓವರ್)
ರಾಸಂಗಿಕಾ 84 (109), ಸಿರಿವರ್ಧನೆ 59 (67)
ಬೌಲಿಂಗ್: ಗೋಸ್ವಾಮಿ 63/3,
ಅಮಿತಾ ಶರ್ಮಾ 41/1
ಭಾರತ: 144/10 (42.2 ಓ.)
ರೀಮಾ ಮಲ್ಹೋತ್ರಾ 38 (51)
ಗೋಸ್ವಾಮಿ 22 (32)
ಬೌಲಿಂಗ್: ಸೇನೆವಿತರಣ 10/2
ಸಿರಿವರ್ಧನೆ 20/2

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com