ಎಚ್‌ಐಎಲ್: ಸೆಮೀಸ್, ಫೈನಲ್ ಟಿಕೆಟ್ ಖಾಲಿ

Updated on: 

ನವದೆಹಲಿ: ಚೊಚ್ಚಲ ಹಾಕಿ ಇಂಡಿಯಾ ಲೀಗ್ ಪಂದ್ಯಾವಳಿಗೆ ಪ್ರೇಕ್ಷಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಈ ಪಂದ್ಯಾವಳಿಯ ಸೆಮೀಸ್ ಹಾಗೂ ಫೈನಲ್ ಪಂದ್ಯಗಳ ಟಿಕೆಟ್ ಈಗಾಗಲೆ ಸಂಪೂರ್ಣ ಮಾರಾಟವಾಗಿದ್ದು, ಪಂದ್ಯಾವಳಿಯ ಯಶಸ್ಸಿಗೆ ಉದಾಹರಣೆಯಾಗಿದೆ. ಪಂದ್ಯಾವಳಿಯ ಸೆಮಿ ಫೈನಲ್ ಪಂದ್ಯಗಳನ್ನು ಫೆ.9 ರಂದು ಹಾಗೂ ಫೈನಲ್ ಪಂದ್ಯವನ್ನು ಫೆ.10 ರಂದು ರಾಂಚಿಯಲ್ಲಿ ಆಯೋಜಿಸಲಾಗಿದ್ದು, ಈ ಪಂದ್ಯಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿದೆ ಎಂದು ಪಂದ್ಯಾವಳಿಯ ಆಯೋಜಕರು ತಿಳಿಸಿದ್ದಾರೆ.
ಈ ಪಂದ್ಯಗಳನ್ನು ದ ಆಸ್ಟ್ರೋಟರ್ಫ್ ಹಾಕಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದ್ದು, ಇದು ರಾಂಚಿ ರೈನೋಸ್ ತಂಡದ ತವರಿನ ಅಂಗಣವಾಗಿದೆ. ಈ ಕ್ರೀಡಾಂಗಣ 5000 ಪ್ರೇಕ್ಷಕರ ಸಾಮರ್ಥ್ಯವನ್ನು ಹೊಂದಿದ್ದು, ಇಲ್ಲಿನ ಸ್ಥಳಿಯರು ಹಾಕಿ ಕ್ರೀಡೆ ಬಗ್ಗೆ ಹೆಚ್ಚು ಅಭಿಮಾನ ಹೊಂದಿರುವ ಹಿನ್ನಲೆಯಲ್ಲಿ ಈ ಪಂದ್ಯಗಳ ಟಿಕೆಟ್‌ಗೆ ಭಾರಿ ಬೇಡಿಕೆಉಂಟಾಯಿತು ಎಂದು ಆಯೋಜಕರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com