ನೊಯಿಡಾ: ಭಾರತದ ಹಿರಿಯ ಶೂಟರ್ ಅಭಿನವ್ ಬಿಂದ್ರಾ 2013ನೇ ಸಾಲಿನಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ನಿಯಮಗಳಿಗೆ ಹೊಂದುಕೊಳ್ಳಲು ತಮ್ಮ ಗಮನ ಹರಿಸುವುದಾಗಿ ತಿಳಿಸಿದ್ದಾರೆ. 2013ನೇ ವರ್ಷವನ್ನು ನಾನು ತರಬೇತಿಗಾಗಿ ಮೀಸಲಿಡುತ್ತೇನೆ. ಈ ಕ್ರೀಡೆಯಲ್ಲಿ ನಿಯಮಾವಳಿಗಳು ಬದಲಾದ ಹಿನ್ನಲೆಯಲ್ಲಿ ಇವುಗಳಿಗೆ ಹೊಂದಿಕೊಳ್ಳಲು ಕಾಲಾವಕಾಶದ ಅಗತ್ಯವಿದೆ ಎಂದು 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದ ಬಿಂದ್ರಾ ಅಭಿಪ್ರಾಯಪಟ್ಟಿದ್ದಾರೆ. ಐಎಸ್ಎಸ್ಎಫ್ ಅಳವಡಿಸಿರುವ ಹೊಸ ನಿಯಮವಳಿಯ ಪ್ರಕಾರ ಫೈನಲ್ ಹಂತದಲ್ಲಿ ಪ್ರತಿಯೊಬ್ಬ ಫೈನಲಿಸ್ಟ್ ಕೂಡ ಸೊನ್ನೆ ಅಂಕದೊಂದಿಗೆ ಈ ಸುತ್ತನ್ನು ಆರಂಭಿಸಬೇಕು. ಹಾಗಾಗಿ ಈ ಹಂತದಲ್ಲಿ ಈ ಹಿಂದಿನ ಹಂತದಲ್ಲಿ ಪಡೆದಿರುವ ಅಂಕಗಳು ಪರಿಗಣನೇಗೆ ತೆಗೆದುಕೊಳ್ಳಲಾಗುವುದಿಲ್ಲ. ಕ್ರೀಡೆಯಲ್ಲಿ ನಿಯಮಗಳು ಬದಲಾವಣೆಯಾಗುವುದು ಸಾಮಾನ್ಯ ಹಾಗಾಗಿ ಈ ವರ್ಷವನ್ನು ಹೊಸ ಪದ್ಧತಿಗೆ ಹೊಂದಿಕೊಳ್ಳುವ ಸಲುವಾಗಿ ಮೀಸಲಿಡುತ್ತೇನೆ ಎಂದು ಅವರು ತಿಳಿಸಿದರು. ಐಎಸ್ಎಸ್ಎಫ್ ಹೊಸ ನಿಯಮವಳಿಯನ್ನು ಪರಿಚಯಿಸಿದ್ದು, ಈ ನಿಯಮದ ಪ್ರಕಾರ ಫೈನಲ್ ಹಂತದಲ್ಲಿ ಪ್ರತಿಯೊಬ್ಬ ಫೈನಲಿಸ್ಟ್ ಕೂಡ ಸೊನ್ನೆ ಅಂಕದೊಂದಿಗೆ ಈ ಸುತ್ತನ್ನು ಆರಂಭಿಸಬೇಕು. ಹೀಗಾಗಿ ಈ ಹೊಸ ನಿಯಮಾವಳಿಗೆ ಹೊಂದುಕ್ಕೊಳ್ಳಲು 2013ನೇ ವರ್ಷವನ್ನು ನಾನು ತರಬೇತಿಗಾಗಿ ಮೀಸಲಿಡುತ್ತೇನೆ.