ಬಡೆನ್-ಬಡೆನ್: ಇತ್ತೀಚೆಗೆ ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿಯಲ್ಲಿ ಮೂರನೇ ಸ್ಥಾನಗಳಿಸಿದ ವಿಶ್ವನಾಥನ್ ಆನಂದ್, ಈಗ ಇಲ್ಲಿ ನಡೆಯಲಿರುವ ಗ್ರೆಂಕ್ ಚೆಸ್ ಚಾಂಪಿಯನ್ಷಿಪ್ನಲ್ಲಿ ಗೆಲ್ಲುವ ಫೆವರೆಟ್ ಎಂದು ಪರಿಗಣಿಸಲಾಗಿದೆ. ಆನಂದ್ ಈ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್ನ ಮೈಕಲ್ ಆ್ಯಡಮ್ಸ್ ಅವರನ್ನು ಎದುರಿಸಲಿದ್ದಾರೆ.
ಆರು ಆಟಗಾರರ ಭಾಗವಹಿಸುವ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಇಟಲಿಯ ಫ್ಯಾಬಿಯಾನೊ ಕರೌನಾ ಎರಡನೇ ಶ್ರೇಯಾಂಕ ಪಡೆದಿದ್ದು, ವಿಶ್ವ ಚಾಂಪಿಯನ್ ಆನಂದ್ಗೆ ಪೈಪೋಟಿ ನೀಡುವ ಸಾಧ್ಯತೆಗಳಿವೆ.