ಮುಂಬೈ: ಸೂಪರ್ ಸಿಕ್ಸ್ ಹಂತದ ದಿನದ ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತನ್ನ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಶ್ರೀಲಂಕಾ ವಿರುದ್ಧ ಸೋಲನುಭವಿಸಿದ ನಂತರ ಜಯದ ಹಾದಿಗೆ ಮರಳಿರುವ ಇಂಗ್ಲೆಂಡ್ ತಂಡ ವಿಜಯದ ಹಾದಿಯನ್ನು ಮುಂದುವರಿಸಿಕೊಂಡು ಹೋಗಲು ಎದುರು ನೋಡುತ್ತಿದೆ.
ಇನ್ನೊಂದೆಡೆ ಇದುವರೆಗೂ ಪಂದ್ಯಾವಳಿಯಲ್ಲಿ ಅಜೇಯವಾಗಿ ಉಳಿದಿರುವ ಆಸ್ಟ್ರೇಲಿಯಾ ಸಹ ವಿಜಯದ ಕಾತರದಲ್ಲಿದೆ. ಹೀಗಾಗಿ ಮಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಗುರುವಾರ ನಡೆಯಲಿರುವ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆಗಳಿವೆ.
ಮೂರು ಬಾರಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ಲೀಗ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಭಾರತದ ವಿರುದ್ಧ ಜಯ ಸಾಧಿಸುವ ಮೂಲಕ ಸೂಪರ್ ಸಿಕ್ಸ್ ಹಂತ ಪ್ರವೇಶಿಸಿದೆ. ಆದರೆ, ಲಂಕಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಮಾತ್ರ ಸೋಲನುಭವಿಸಿದೆ.
ನಾಯಕಿ ಚಾರ್ಲ್ಲೋಟ್ಟೆ ಎಡ್ವರ್ಡ್ಸ್ ಮತ್ತು ಆರಂಭಿಕ ಆಟಗಾರ್ತಿ ಡ್ಯಾನೇಯಲ್ಲೇ ವ್ಯಾಟ್ ಅವರು ಇಂಗ್ಲೆಂಡ್ ಬ್ಯಾಟಿಂಗ್ನ ಆಧಾರ ಸ್ತಂಭವಾಗಿದ್ದಾರೆ.
ಇನ್ನು ಆಸೀಸ್ಗೆ ಬ್ಯಾಟಿಂಗ್ನಲ್ಲಿ ಮೆಗ್ ಲೆನ್ನಿಂಗ್ ಮತ್ತು ಜೆಸ್ ಕೆಮರೂನ್ ಆಶ್ರಯವಾಗಲಿದ್ದು, ಶರರ್ಸ್ ಮೇಗನಾ ಸ್ಕಟ್ ಮತ್ತು ಎಲೆಸ್ಸೇ ಪೆರ್ರಿ ಅವರು ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ತಂಡಕ್ಕೆ ನೆರವಾಗುವ ಸಾಧ್ಯತೆಗಳಿವೆ.