ದುಬೈ: ವಿಂಡೀಸ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಅಸಭ್ಯ ವರ್ತನೆಗಾಗಿ ಆಸೀಸ್ನ ವೇಗಿ ಫಾಕ್ನರ್ ಅವರಿಗೆ ಐಸಿಸಿ ದಂಡ ವಿಧಿಸಿದೆ.
ಮೂರನೇ ಏಕದಿನ ಪಂದ್ಯದ ವೇಳೆ ಕೆರಿಬಿಯನ್ನ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಜತೆ ಮಾತಿನ ಚಕಮಕಿ ಮೂಲಕ ಸಂಘರ್ಷಕ್ಕಿಳಿದ ಹಿನ್ನಲೆಯಲ್ಲಿ, ವೇಗಿ ಫಾಲ್ಕನರ್ಗೆ ಪಂದ್ಯದ ಸಂಭಾವನೆಯ ಶೇ.10ರಷ್ಟು ದಂಡ ವಿಧಿಸಿದೆ. ಮೂರನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿದ್ದರು.