ವೆಸ್ಟ್ ಇಂಡೀಸ್‌ಗೆ ಜಯ ತಂದ ಟೇಲರ್

Updated on: 

ಕಟಕ್: ಮಧ್ಯಮ ಕ್ರಮಾಂಕದ ಟೇಲರ್ ಅವರ ಉಪಯುಕ್ತ 75 ರನ್‌ಗಳ ನೆರವಿನಿಂದಾಗಿ ವೆಸ್ಟ್ ಇಂಡೀಸ್ ತಂಡ, ಶುಕ್ರವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮಹಿಳಾ ವಿಶ್ವಕಪ್‌ನ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ 2 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ, ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 45.3 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ, ಜಯದ ನಗೆ ಬೀರಿತು.
ಟಾಸ್ ಗೆದ್ದಿದ್ದ ದಕ್ಷಿಣ ಆಫ್ರಿಕಾ, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆರಂಭಿಕರ ಆಟಗಾರ್ತಿ ಚೆಟ್ಟಿ ಹಾಗೂ 3ನೇ ಕ್ರಮಾಂಕದ ಪ್ರೀಜ್ ಇಬ್ಬರೂ 2ನೇ ವಿಕೆಟ್‌ಗೆ 62 ರನ್ ಸೇರಿಸಿತು. ನಂತರ, ಕಪ್ಪ್ ಮತ್ತು ಬ್ರಿಟ್ಸ್ ಜೋಡಿ 4ನೇ ವಿಕೆಟ್‌ಗೆ 40 ರನ್ ಗಳಿಸಿತು. ಈ ಎರಡೂ ಜೋಡಿಗಳು ನೀಡಿದ ಉಪಯುಕ್ತ ಜೊತೆಯಾಟದಿಂದಾಗಿ ದಕ್ಷಿಣ ಆಫ್ರಿಕಾ, 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 230 ರನ್‌ಗಳ ಗೌರವ ಮೊತ್ತ ಗಳಿಸಿತು.
ಕಿವೀಸ್ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ವಿಂಡೀಸ್‌ಗೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 15 ರನ್ ಆಗಿದ್ದಾಗ ಆರಂಭಿಕ ಆಟಗಾರ್ತಿ ಮೆಕ್‌ಲೀನ್ ವಿಕೆಟ್ ಒಪ್ಪಿಸಿದರು. ಆದರೆ, ಮತ್ತೊಬ್ಬ ಆರಂಭಿಕ ಆಟಗಾರ್ತಿ ಕಿಸಿಯಾ ನೈಟ್ ಹಾಗೂ ಮೂರನೇ ಕ್ರಮಾಂಕದ ಟೇಲರ್ ಜೋಡಿ, 126 ರನ್‌ಗಳ ಜೊತೆಯಾಟವಾಡಿ, ವಿಂಡೀಸ್ ಇನಿಂಗ್ಸ್‌ಗೆ ಶಕ್ತಿ ತುಂಬಿತು. ನಂತರ, ಮಧ್ಯಮ ಕ್ರಮಾಂಕದ ಕ್ಯಾಂಪ್‌ಬೆಲ್ (33) ಹಾಗೂ ಡಾಟಿನ್ (24) ಅವರ ಉಪಯುಕ್ತ ಬ್ಯಾಟಿಂಗ್‌ನ ನೆರವಿನಿಂದಾಗಿ ವೆಸ್ಟ್ ಇಂಡೀಸ್, 45.3 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 234 ರನ್ ಪೇರಿಸಿತು.



ಸಂಕ್ಷಿಪ್ತ ಸ್ಕೋರ್


ದಕ್ಷಿಣ ಆಫ್ರಿಕಾ: 230/7 (50 ಓವರ್)
ತ್ರಿಷಾ ಚೆಟ್ಟಿ 45 (74), ಬ್ರಿಟ್ಸ್ 44 (41); ಬೌಲಿಂಗ್: ಸ್ಮಾರ್ಟ್ 43/2, ಟೇಲರ್ 32/1
ವೆಸ್ಟ್ ಇಂಡೀಸ್: 234/8 (45.3 ಓವರ್)
ಟೇಲರ್ 75 (78), ಕ್ಯಾಂಪ್‌ಬೆಲ್ 33 (42)
ಬೌಲಿಂಗ್: 47/3, ಕಪ್ಪ್ 42/2
ಪಂದ್ಯಶ್ರೇಷ್ಠ: ಟೇಲರ್ (ವಿಂಡೀಸ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com