ದಾಖಲೆ ಸರಿಗಟ್ಟಿದ ಸಚಿನ್

Updated on: 

ಮುಂಬೈ: ಇತರೆ ಭಾರತ ವಿರುದ್ಧದ ಇರಾನಿ ಕಪ್ ಪಂದ್ಯದ ಮೂರನೇ ದಿನವಾದ ಶುಕ್ರವಾರ ಶತಕ ಗಳಿಸುವ ಮೂಲಕ, ಸಚಿನ್ ತೆಂಡೂಲ್ಕರ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ್ದ ಗವಾಸ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು.
ಗವಾಸ್ಕರ್ ಅವರು 1971ರಿಂದ 1997ರ ಅವಧಿಯಲ್ಲಿ ಒಟ್ಟು 81 ಶತಕಗಳನ್ನು ದಾಖಲಿಸಿದ್ದಾರೆ. ಅವುಗಳಲ್ಲಿ 34 ಟೆಸ್ಟ್ ಶತಕಗಳೂ ಸೇರಿವೆ.
ಅವರ ದಾಖಲೆಯನ್ನು ಸರಿಗಟ್ಟಿರುವ ಸಚಿನ್ ಅವರ ಖಾತೆಯಲ್ಲಿ ಇದೀಗ, 51 ಟೆಸ್ಟ್ ಶತಕ, 18 ರಣಜಿ ಶತಕ, 2 ಇರಾನಿ ಕಪ್ ಶತಕ, 3 ದುಲೀಪ್ ಕಪ್ ಶತಕಗಳು, 1 ಯಾರ್ಕ್‌ಶೈರ್‌ನಲ್ಲಿ ಗಳಿಸಿದ ಶತಕ ಹಾಗೂ ಇತರೆ 6 ವಿವಿಧ ಪಂದ್ಯಗಳಲ್ಲಿ ಶತಕ ಸೇರಿವೆ.
ಇನಿಂಗ್ಸ್‌ನ 92.2 ನೇ ಓವರ್‌ನಲ್ಲಿ ಶ್ರೀಶಾಂತ್ ಎಸೆತದಲ್ಲಿ ಸಿಂಗಲ್ ರನ್ ತೆಗೆದ ತೆಂಡೂಲ್ಕರ್ 81ನೇ ಶತಕ ದಾಖಲಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com