ಬಡೆನ್-ಬಡೆನ್: ತಮ್ಮ ಡ್ರಾ ಫಲಿತಾಂಶವನ್ನು ಮುಂದುವರೆಸಿರುವ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್, ಇಲ್ಲಿ ನಡೆಯುತ್ತಿರುವ ಗ್ರೆಂಕ್ ಕ್ಲಾಸಿಕ್ ಚೆಸ್ ಚಾಂಪಿಯನ್ಷಿಪ್ನಲ್ಲಿನ ಎರಡನೇ ಸುತ್ತಿನಲ್ಲಿ ಇಟಲಿಯ ಫ್ಯಾಬಿಯಾನೋ ಕರ್ವಾನಾ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ.
ಪಂದ್ಯಾವಳಿಯಲ್ಲಿ ಕರ್ವಾನಾ ವಿರುದ್ಧ ಮೊದಲ ಬಾರಿಗೆ ಬಿಳಿ ಕಾಯಿಯನ್ನು ಪಡೆದ ಆನಂದ್, ನಿರೀಕ್ಷಿತ ಮಟ್ಟದಲ್ಲಿ ಯಶ ಕಾಣದೆ ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಿದರು.
ಎರಡು ಪಂದ್ಯಗಳಲ್ಲಿ ಡ್ರಾ ಸಾಧಿಸುವ ಮೂಲಕ ಒಂದು ಅಂಕಗಳನ್ನು ಗಳಿಸಿರುವ ವಿಶ್ವ ಚಾಂಪಿಯನ್, ಪಂದ್ಯಾವಳಿಯ ಅಂಕ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇನ್ನು ಮೊದಲ ಪಂದ್ಯದಲ್ಲಿ ಜಯ ಗಳಿಸಿದ್ದ ಕರ್ವಾನಾ 1.5 ಅಂಕಗಳನ್ನು ಗಳಿಸಿ, ಅಗ್ರಸ್ಥಾನದಲ್ಲಿದ್ದಾರೆ.