ನವದೆಹಲಿ: ಎಂಟು ಬಾರಿ ವಿಶ್ವ ಚಾಂಪಿಯನ್ ಆಗಿರುವ ಭಾರತದ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ ವೆಲ್ಶ್ ಓಪನ್ ಪ್ರೊ ಸ್ನೂಕರ್ ಸೀರೀಸ್ಗೆ ಆಯ್ಕೆಯಾಗುವ ಮೂಲಕ, ಈ ಪಂದ್ಯಾವಳಿಗೆ ಆಯ್ಕೆಯಾದ ಭಾರತದ ಎರಡನೇ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಬಾರಿ ರೋಚಕತೆಯಿಂದ ಕೂಡಿದ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಪೀಟರ್ ಎಬ್ಡನ್ ಅವರನ್ನು ಮಣಿಸುವ ಮೂಲಕ ಪಂಕಜ್ ವೆಲ್ಶ್ ಓಪನ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಎರಡು ಬಾರಿ ಏಷ್ಯಾ ಚಾಂಪಿಯನ್ ಆಗಿದ್ದ ಯಾಸಿನ್ ಮರ್ಚೆಂಟ್ ಅವರು ಈ ಪಂದ್ಯಾವಳಿಗೆ ಆಯ್ಕೆಯಾಗಿದ್ದರು.