ಇಂಗ್ಲೆಂಡ್‌ಗೆ ಸುಲಭ ಜಯ

ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ತವಕದಲ್ಲಿರುವ ಆಂಗ್ಲ ಮಹಿಳಾ ಕ್ರಿಕೆಟ್ ತಂಡ, ಈ ಬಾರಿಯ ಮಹಿಳಾ ವಿಶ್ವಕಪ್‌ನ...
ಇಂಗ್ಲೆಂಡ್‌ಗೆ ಸುಲಭ ಜಯ
Updated on: 

ಕಟಕ್: ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ತವಕದಲ್ಲಿರುವ ಆಂಗ್ಲ ಮಹಿಳಾ ಕ್ರಿಕೆಟ್ ತಂಡ, ಈ ಬಾರಿಯ ಮಹಿಳಾ ವಿಶ್ವಕಪ್‌ನ ಫೈನಲ್ ತಲುಪಿದೆ. ಭಾನುವಾರ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 7 ವಿಕೆಟ್‌ಗಳ ಅಂತರದಿಂದ ಆಂಗ್ಲರ ಪಡೆ ಅಂತಿಮ ಹಂತಕ್ಕೆ ಲಗ್ಗೆಯಿಟ್ಟಿತು.
ಮೊದಲು ಬ್ಯಾಟ್ ಮಾಡಿದ್ದ ದಕ್ಷಿಣ ಆಫ್ರಿಕಾ 29.3 ಓವರ್‌ಗಳಲ್ಲಿ 77 ರನ್‌ಗಳಿಗೆ ಆಲೌಟ್ ಆಯಿತು. ಈ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಕೇವಲ 9.3 ಓವರ್‌ಗಳಲ್ಲಿ 81 ರನ್ ಗಳಿಸಿ, ಫೈನಲ್‌ಗೆ ದಾಂಗುಡಿಯಿಟ್ಟರು.
ಶ್ರಬ್‌ಸೋಲ್ ಆಕ್ರಮಣ: ಟಾಸ್ ಗೆದ್ದಿದ್ದ ಇಂಗ್ಲೆಂಡ್, ಮೊದಲು ದಕ್ಷಿಣ ಆಫ್ರಿಕಾವನ್ನು ಬ್ಯಾಟಿಂಗ್‌ಗೆ ಇಳಿಸಿತು. ಆದರೆ, ಇಂಗ್ಲೆಂಡ್ ತಂಡದ ಮಧ್ಯಮ ವೇಗಿ ಶ್ರಬ್‌ಸೋಲ್ ಅವರ ಬೌಲಿಂಗ್ ಹರಿಣಗಳ ದಿಕ್ಕು ತಪ್ಪಿಸಿತು. ಆರಂಭಿಕರಾದ ಪೊಟ್ಜಿಟರ್ ಹಾಗೂ ತ್ರಿಷಾ ಚೆಟ್ಟಿ ಅವರುಗಳನ್ನು ತಂಡದ ಮೊತ್ತ ಕೇವಲ 5 ರನ್ ಆಗಿದ್ದಾಗ ಪೆವಿಲಿಯನ್‌ಗೆ ಅಟ್ಟಿದ ಶ್ರಬ್‌ಸೋಲ್, ಆನಂತರ, ಪೆರೇಜ್, ಕಪ್ಪ್, ಬ್ರಿಟ್ಸ್ ಅವರುಗಳನ್ನೂ ಕೆಡವಿದರು. ಶ್ರಬ್‌ಸೋಲ್ ಅವರ ದಾಳಿಗೆ ಕೈ ಜೋಡಿಸಿದ ಇತರ ಆಂಗ್ಲ ಬೌಲರ್‌ಗಳು ದಕ್ಷಿಣ ಆಫ್ರಿಕಾದ ಎಲ್ಲಾ ಬ್ಯಾಟರ್‌ಗಳನ್ನೂ ಒಬ್ಬರ ಹಿಂದೊಬ್ಬರಂತೆ ಪೆವಿಲಯನ್‌ಗೆ ಅಟ್ಟುವಲ್ಲಿ ಯಶಸ್ವಿಯಾದರು.
ಸುಲಿದ ಬಾಳೆಹಣ್ಣು: ಹರಿಣಗಳ ತಂಡ ನೀಡಿದ್ದ ಸುಲಭ ಮೊತ್ತವನ್ನು ಹಿಂದಿಕ್ಕಲು ಇಂಗ್ಲೆಂಡ್ ತಂಡಕ್ಕೆ ಕಷ್ಟವೇನೂ ಆಗಲಿಲ್ಲ.
ಆರಂಭದ ನಾಲ್ಕು ಬ್ಯಾಟರ್ ಬೇಗಬೇಗನೇ ವಿಕೆಟ್ ಒಪ್ಪಿಸಿ ಹೊರನಡೆದರು. ಆದರೆ, ಐದನೇ ಕ್ರಮಾಂಕದ ಬ್ಯಾಟರ್ ಗ್ರೀನ್‌ವೇ ಹಾಗೂ ಆರನೇ ಕ್ರಮಾಂಕದ ಬ್ರಿಂಡಲ್ ಅವರ 55 ರನ್‌ಗಳ ಜೊತೆಯಾಟ, ತಂಡವನ್ನು ಗೆಲುವಿನ ದಡ ಮುಟ್ಟಿಸಿತು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ: 77/10 (29.3 ಓ.)
ಡಿ ವ್ಯಾನ್ 17 (32), ಫ್ರಿಟ್ಸ್ 17 (32)
ಬೌಲಿಂಗ್: ಶ್ರಬೋಲ್ 17/5, ವ್ಯಾಟ್ 7/3
ಇಂಗ್ಲೆಂಡ್: 81/3 (9.3 ಓವರ್)
ಬ್ರಿಂಡಲ್ ಅಜೇಯ 28,
ಗ್ರೀನ್‌ವೇ 25
 ಬೌಲಿಂಗ್: ಟ್ರಯಾನ್ 14/2, ಕಪ್ಪ್ 18/1
ಪಂದ್ಯಶ್ರೇಷ್ಠ: ಶ್ರಬ್‌ಸೋಲ್ (ಇಂಗ್ಲೆಂಡ್)


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com