ಕಿಂಗ್ಸ್ಟನ್: ಇಲ್ಲಿ ಆರಂಭವಾದ ಕ್ಯಾಂಪೆರ್ಡೌನ್ ಕ್ಲಾಸಿಕ್ ಸ್ಫರ್ಧೆಯಲ್ಲಿ ಭಾಗವಹಿಸುವ ಮೂಲಕ 2013ರ ಋತು ಆರಂಭಿಸಿರುವ ಸ್ಪ್ರಿಂಟಿಂಗ್ ಸ್ಟಾರ್ ಉಸೇನ್ ಬೋಲ್ಟ್, 400 ಮೀ. ಓಟದಲ್ಲಿ ಗೆಲ್ಲುವ ಮೂಲಕ ಈ ವರ್ಷದಲ್ಲಿ ಶುಭಾರಂಭ ಮಾಡಿದ್ದಾರೆ. ನಾನು ಮೊದಲು ಒತ್ತಡಕ್ಕೆ ಸಿಲುಕಿದ್ದೆ. ನಾನು ಇಲ್ಲಿ ಗೆಲ್ಲುವ ಗುರಿಯನ್ನು ಹೊಂದಿದ್ದು, ಅಂತಿಮವಾಗಿ ಯೊವುದೇ ಗಾಯದ ಸಮಸ್ಯೆಯನ್ನು ಎದುರಿಸದೇ ಜಯಗಳಿಸಿದ್ದೇನೆ ಎಂದು ಬೋಲ್ಟ್ ತಿಳಿಸಿದರು. ಲಂಡನ್ ಒಲಿಂಪಿಕ್ಸ್ನಲ್ಲಿ 200ಮೀ.ನಲ್ಲಿ ಕಂಚಿನ ಪದಕ ವಿಜೇತ ಯೋಹಾನ್ ಬ್ಲೇಕ್ ಕೂಡ ಈ ಸ್ಫರ್ಧೆಯಲ್ಲಿ ಭಾಗವಹಿಸುವ ಮೂಲಕ ವರ್ಷ ಆರಂಭಿಸಿದ್ದು, ಈ ಸ್ಫರ್ಧೆಯಲ್ಲಿ ಸೋಲನುಭವಿಸಿದ್ದಾರೆ.