ಆರ್ಥಿಕ ನೆರವು ನಿರೀಕ್ಷೆಯಲ್ಲಿ ಓಟಗಾರ ರಾಮ್ ಸೈನಿ

Updated on: 

ಪುಣೆ: ಪುಣೆಯಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದ ಓಟಗಾರ ರತಿ ರಾಮ್ ಸೈನಿ ಅವರು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು, ಯಾರಾದರೂ ಸಹಾಯ ಹಸ್ತ ಚಾಚುತ್ತಾರಾ ಎಂದು ಎದುರು ನೋಡುತ್ತಿದ್ದಾರೆ.
  ಭವಿಷ್ಯದಲ್ಲಿ ತಮ್ಮ ವೃತ್ತಿಗೆ ಸಂಬಂಧಿಸಿದ ಖರ್ಚು ಮತ್ತು ಕುಟುಂಬದ ಆರು ಸದಸ್ಯರ ವೆಚ್ಚ ಭರಿಸಲು ಸೈನಿಗೆ ಅರ್ಥಿಕ ನೆರವಿನ ಅಗತ್ಯವಿದೆಯಂತೆ. ರಾಜಸ್ಥಾನದ ಅಳ್ವಾರ್ ಜಿಲ್ಲೆಯ ಪುಟ್ಟ ಗ್ರಾಮವೊಂದರ ಬಡ ರೈತನ ಪುತ್ರರಾಗಿರುವ ಸೈನಿ ಸದ್ಯಕ್ಕೆ ರೇಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರೇಲ್ವೆ ಇಲಾಖೆ ನೀಡುತ್ತಿರುವ ರು. 20,000 ಬರುತ್ತಿರುವ ಸಂಬಳ ಅವರ ವೆಚ್ಚಕ್ಕೆ ಸಾಕಾಗುತ್ತಿಲ್ಲವಂತೆ. ಸೈನಿ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 10,000 ಮೀಟರ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. 33 ವರ್ಷದ ಓಟಗಾರ 2006ರಿಂದ ಲಖ್ನೌದ ಉತ್ತರ ವಲಯ ರೇಲ್ವೆ ಇಲಾಖೆಯಲ್ಲಿ ವಿದ್ಯುತ್ ವಿಭಾಗದ ತಂತ್ರಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ನಾನು ನಾಲ್ಕು ಪುತ್ರಿಯರನ್ನು ಹೊಂದಿದ್ದೇನೆ. ನನ್ನ ಪತ್ನಿ ಮನೆಗೆಲಸ ನೋಡಿಕೊಳ್ಳುತ್ತಿದ್ದಾರೆ. ನನಗೆ ಒಂದು ಅಚ್ಚುಕಟ್ಟಾದ ನಿವಾಸವೂ ಇಲ್ಲ. ಮಣ್ಣಿನ ಮನೆಯಲ್ಲಿ ನಾವು ವಾಸಿಸುತ್ತಿದ್ದೇವೆ. ಕೇವಲ ರು. 20,000 ಹಣದಲ್ಲಿ ಮನೆ ನಡೆಸುವುದು ಕಷ್ಟವಾಗಿದೆ' ಎಂದು ಸಂದರ್ಶನವೊಂದರಲ್ಲಿ ಸೈನಿ ಹೇಳಿಕೊಂಡಿದ್ದಾರೆ.
   'ನನ್ನ ವೃತ್ತಿಗೆ ಸಂಬಂಧಿಸಿದ ತರಬೇತಿ ಕಡೆಗೂ ನಾನು ಗಮನಹರಿಸಬೇಕು. ನನ್ನ ಓಟದ ಬೂಟುಗಳನ್ನೂ ನಾನು ಖರೀದಿಸಬೇಕು. ಬೂಟುಗಳಿಗೆ ನಾನು ರು. 8,000ದಿಂದ ರು. 9,000 ಹಣ ನೀಡಬೇಕಾಗಿದೆ. ಇದು ನನಗೆ ಕಠಿಣವಾಗಿ ಪರಿಣಮಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com