ಬೆಂಗಳೂರು: ಭಾನುವಾರ ನಡೆದ ಕೆಎಸ್‌ಎಫ್‌ಎ ಮಹಾಸಭೆಯಲ್ಲಿ ಮೂರು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಭಾರತೀಯ ಫುಟ್ಬಾಲ್ ಕ್ಷೇತ್ರಕ್ಕೆ ಕಾಲಿಡುತ್ತಿರುವ ಜೆಎಸ್‌ಡಬ್ಲ್ಯೂ ಫುಟ್ಬಾಲ್ ತಂಡದ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಯಿತು.
ಹೊಸ ತಂಡದ ಹೆಸರು 'ಬೆಂಗಳೂರು ಫುಟ್ಬಾಲ್ ಕ್ಲಬ್' (ಬೆಂಗಳೂರು ಎಫ್‌ಸಿ) ಎಂದು ನಾಮಕರಣ ಮಾಡಲಾಗಿದ್ದು, ಈ ತಂಡದ ತವರು ಕ್ರೀಡಾಂಗಣ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣ ಹಾಗೂ ತವರೂರು ಬೆಂಗಳೂರು ಆಗಿರಲಿದೆ. ಕೆಎಸ್‌ಎಫ್‌ಸಿಯ ತಾತ್ವಿಕ ಒಪ್ಪಿಗೆಯಿಂದಾಗಿ, ಜೆಎಸ್‌ಡಬ್ಲ್ಯೂ ಇದೀಗ ಸೂಪರ್ ಡಿವಿಷನ್‌ಗೆ ಕಾಲಿಡಲು ಅನುಮತಿ ಸಿಕ್ಕಂತಾಗಿದೆ.