ರಾಂಚಿ: ಭಾರತ ತಂಡದ ಲಕ್ಕಿ ನಾಯಕ ಎಂದೇ ಖ್ಯಾತರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ಭಾನುವಾರ 32ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಈ ಸಂದರ್ಭದಲ್ಲಿ ಧೋನಿ ಕುಟುಂಬ, ಸ್ನೇಹಿತರು ಹಾಗೂ ಅಭಿಮಾನಿ ಬಳಗ ಅವರಿಗೆ ಶುಭಾಷಯ ಕೋರಿದ್ದಾರೆ. ಧೋನಿ ಅವರು ಇನ್ನು ಸಾಕಷ್ಟು ಪಂದ್ಯಾವಳಿಗಳನ್ನು ಗೆಲ್ಲಲಿ ಎಂದು ಹರಿಸಿದ್ದಾರೆ.
ಧೋನಿ ಅಭಿಮಾನಿಗಳು ಮತ್ತು ಸ್ನೇಹಿತರು ಅವರ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಮೂಲಕ ಇತರರಿಗೆ ಹಂಚಿದ್ದಾರೆ. ಕ್ರಿಕೆಟ್ನಲ್ಲಿ ಧೋನಿಗೆ ಇನ್ನಷ್ಟು ಯಶಸ್ಸು ದೊರಕಲಿ ಎಂದು ಅವರೆಲ್ಲ ಹರಿಸಿದ್ದಾರೆ.
'ಧೋನಿ ಕುಟುಂಬದ ಸದಸ್ಯರು ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ' ಅವರ ಮಾಜಿ ತರಬೇತುದಾರ ಚಂಚಲ್ ಭಟ್ಟಾಚಾರ್ಯ ಹೇಳಿದ್ದಾರೆ.
ಭಟ್ಟಾಚಾರ್ಯ ಸಹ ಧೋನಿ ಅವರಿಗೆ ಹುಟ್ಟುಹಬದ ಸಂದರ್ಭದಲ್ಲಿ ಶುಭಾಷಯ ತಿಳಿಸಿದ್ದಾರೆ. ಧೋನಿ ಕ್ರಿಕೆಟ್ನಲ್ಲಿ ಬೆಳೆಯಲು ನೆರವಾದ ಸೆಂಟ್ರಲ್ ಕೋಲ್ಫೀಲ್ಡ್ಸ್ ಲಿಮಿಟೆಡ್ ಅಧಿಕಾರಿ ದೇವಲ್ ಸಾಹಾಯ ಅವರು ಸಹ ಧೋನಿಗೆ ಶುಭಾಷಯ ಕೋರಿದ್ದಾರೆ.
ಧೋನಿ ಗೌರವಪೂರ್ವಕವಾಗಿ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ನಾನು ಹಾಡಲಿದ್ದೇನೆ ಎಂದು ಧೋನಿ ಮತ್ತು ಅವರ ತಂಡದ ಹೊಗಳಿ ಎರಡು ಗೀತೆಗಳನ್ನು ರಚಿಸಿರುವ ಉದಯೋನ್ಮುಖ ಗಾಯಕ ಡಿಯೋ ಪಾಠಕ್ ತಿಳಿಸಿದ್ದಾರೆ.