ನಟನೆಯತ್ತ ಶ್ರೀಶಾಂತ್ ಚಿತ್ತ

Updated on: 

ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐನಿಂದ ಅಮಾನತುಗೊಂಡಿರುವ ಕೇರಳ ಎಕ್ಸ್‌ಪ್ರೆಸ್ ಖ್ಯಾತಿಯ ಎಸ್.ಶ್ರೀಶಾಂತ್ ಈಗ ಮಲೆಯಾಳಂನ ಚಲನಚಿತ್ರ ಒಂದರಲ್ಲಿ ನಟಿಸಲಿದ್ದಾರೆ.
   ಶ್ರೀಶಾಂತ್ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಶಾಂತ್, ನಾನು ಚಲನಚಿತ್ರದಲ್ಲಿ ಅಭಿನಯಿಸಲು ಬಹಳ ದಿನಗಳಿಂದ ಕಾತುರನಾಗಿ ಕಾಯುತ್ತಿದ್ದೆ. ಈಗ ಅದು ಈಡೇರಲಿದ್ದು ಈ ಚಿತ್ರದ ಚಿತ್ರಿಕರಣ ಕೆಲವೆ ದಿನಗಳಲ್ಲಿ ಆರಂಭವಾಗಲಿದೆ.       ಈ ಚಿತ್ರದಲ್ಲಿ ನಾನು ಚಾಲೆಂಜಿಗ್ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸುವುದು ಕ್ರಿಕೆಟ್ ಆಡಿದಷ್ಟು ಸುಲಭವಲ್ಲ ಎಂದು ಶ್ರೀಶಾಂತ್ ತಿಳಿಸಿದರು. ಈ ಚಿತ್ರವನ್ನು ಬಾಲಚಂದ್ರ ಕುಮಾರ್ ನಿರ್ದೇಶಿಸಲಿದ್ದಾರೆ. ಈ ಮೊದಲು ಶ್ರೀಶಾಂತ್ ಹೆಸರಾಂತ ಸಾಹಿತ್ಯಕಾರ ಕೈತಪರಮ್ ದಾಮೊದರನ್ ನಂಬೂದರಿ ಅವರ ಚಿತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದರು. ಸ್ಪಾಟ್ ಫಿಕ್ಸಿಂಗ್ ಹಗರಣ ಹೊರಬಂದ ಹಿನ್ನೆಲೆಯಲ್ಲಿ ಈ ದೃಶ್ಯವನ್ನು ಕಿತ್ತುಹಾಕಲಾಗಿತ್ತು.

ಉಮಾಪತಿ ನಿಧನ ಬೆಂಗಳೂರು: ಬೆಂಗಳೂರಿನ ಮಾಜಿ ಫುಟ್ಬಾಲ್ ಆಟಗಾರ ಉಮಾಪತಿಯವರು ಬುಧವಾರ ಬೆಳಗ್ಗೆ 10.30ರ ವೇಳೆ ಬಾಣಸವಾಡಿಯ ಎಮ್.ಎಸ್ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. 78 ವರ್ಷದ ಉಮಾಪತಿ ಪತ್ನಿ ಸೇರಿದಂತೆ ಇಬ್ಬರು ಮಗ ಹಾಗೂ ಒರ್ವ ಮಗಳನ್ನು ಅಗಲಿದ್ದಾರೆ. ಉಮಾಪತಿಯವರು 1960ರಲ್ಲಿ ಎಚ್‌ಎಎಲ್ ಗ್ರೀನ್ ಫುಟ್ಬಾಲ್ ಕ್ಲಬ್ ಪರ ಆಡಿದ್ದರು. ನಂತರ ಅವರು ಮುಸ್ಲಿಂ ಹಿರೋಸ್ ತಂಡವನ್ನು ಪ್ರತಿನಿಧಿಸಿದ್ದರು. ಯಂಗ್ ಬ್ಲ್ಯೂಸ್ ತಂಡದ ಗೌರವಾನ್ವಿತ ಕಾರ್ಯದರ್ಶಿಯಾಗಿದ್ದ ಇವರು, 1960ರಲ್ಲಿ ಮೈಸೂರಿನಲ್ಲಿ ಬಿಡಿಎಫ್‌ಎ ಇಲೆವೆನ್ ತಂಡವನ್ನು ಪ್ರತಿನಿಧಿಸಿದ್ದರು. ಉಮಾಪತಿಯವರ ಅಂತಿಮ ಸಂಸ್ಕಾರವನ್ನು ಗುರವಾರ ಸಂಜೆ 4 ಗಂಟೆಗೆ ಹೆಬ್ಬಾಳ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com