ಡಾರ್ವಿನ್: ಭಾರತ ಹಿರಿಯ ತಂಡ ಕೆರಿಬಿಯನ್ ನಾಡಲ್ಲಿ ತ್ರಿಕೋನ ಏಕದಿನ ಸರಣಿ ಗೆದ್ದರೆ, ಭಾರತ 19 ವರ್ಷದೊಳಗಿನ ಕಿರಿಯರ ತಂಡ ಆಸ್ಟ್ರೇಲಿಯಾದಲ್ಲಿ ತ್ರಿಕೋನ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಶುಕ್ರವಾರ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಆತಿಥೇಯ ಆಸೀಸ್ ತಂಡದ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಸಂಘಟಿತ ಬೌಲಿಂಗ್ ದಾಳಿ ನಡೆಸಿತು. ಭಾರತೀಯ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ಆಸೀಸ್ ಬ್ಯಾಟ್ಸ್ಮನ್ಗಳು ಕೇವಲ 24.4 ಓವರ್ಗಳಲ್ಲಿ 75 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಆಸೀಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂ ಶಾರ್ಟ್ ಹಾಗೂ ಡೇಮಿಯನ್ ಮಾರ್ಟಿಮರ್ ತಂಡಕ್ಕೆ 36ರನ್ಗಳ ಜತೆಯಾಟ ನೀಡಿದರು. ಈ ಜೋಡಿ ಉತ್ತಮ ಆರಂಭವನ್ನೇ ಪಡೆಯಿತಾದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು.
ಈ ವೇಳೆ ಮಿಲಿಂದ್ ಎಸೆತದಲ್ಲಿ ದೀಪಕ್ ಹೂಡಾಗೆ ಕ್ಯಾಚ್ ನೀಡಿದ ಶಾರ್ಟ್ 25 ರನ್ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಬೆನ್ ಮೆಕ್ಡ್ರೆಮೊಟ್ 3 ರನ್ ಗಳಿಸಿ ಮಿಲಿಂದ್ಗೆ ವಿಕೆಟ್ ಒಪ್ಪಿಸಿದರು. ನಂತರ 10 ರನ್ಗಳಿಸಿದ್ದ ಮಾರ್ಟಿಮರ್, ಹೂಡಾ ಎಸೆತದಲ್ಲಿ ಜೋಲ್ಗೆ ಕ್ಯಾಚ್ ನೀಡಿದರು.
ಆಮೇಲೆ ಕ್ರೀಸ್ಗೆ ಬಂದ ಜೇಕ್ ಡೊರಮ್ 13 ರನ್ಗಳಿಸಿ ಹೂಡಾಗೆ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ಆಸೀಸ್ ತಂಡ 58 ರನ್ಗಳಿಗೆ ತನ್ನ 4 ಆರಂಭಿಕ ಬ್ಯಾಟ್ಸ್ಮನ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಂತರ ಬಂದ ಯಾವುದೇ ಬ್ಯಾಟ್ಸ್ಮನ್ಗಳು ಎರಡಂಕ್ಕಿ ದಾಟಲಿಲ್ಲ. ನಾಯಕ ಗ್ರೆಗೋರಿ 2, ವಿಲ್ಲೀಸ್ 1, ವ್ಯಾಲೆಂಟ್ 0, ಕೆಲ್ಲಿ 5, ಅಯರ್ 2, ಫೋಟಿಯಾ 6, ಬೆಲ್ ಅಜೇಯ 0 ರನ್ಗಳಿಸಿದರು.
ಭಾರತದ ಪರ ದೀಪಕ್ ಹೂಡಾ 3, ಮಿಲಿಂದ್, ಕುಲ್ದೀಪ್ ಹಾಗೂ ಲಂಬ್ ತಲಾ 2 ವಿಕೆಟ್ ಪಡೆದರೆ, ಅಮೀರ್ ಗನಿ 1 ವಿಕೆಟ್ ಪಡೆದರು.
ಆಸೀಸ್ ತಂಡ ನೀಡಿದ ಅಲ್ಪ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 15.3 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲವಿನ ದಡ ಸೇರಿತು. ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಂಕುಶ್ ಬೈನ್ಸ್ ಅಜೇಯ 40 ಹಾಗೂ ಸಂಜು ಸ್ಯಾಮ್ಸನ್ ಅಜೇಯ 20 ರನ್ಗಳ ಸಹಾಯದಿಂದ ತಂಡ ಜಯದ ದಡ ಸೇರಿತು.
ಈ ಮೂಲಕ ಭಾರತ ತಂಡ ಸರಣಿಯಲ್ಲಿ ಆಡಿದ 5 ಪಂದ್ಯಗಳಲ್ಲೂ ಜಯ ಸಾಧಿಸಿದ್ದು, ಅಜೇಯವಾಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಪಂದ್ಯದಲ್ಲಿ 3 ವಿಕೆಟ್ ಪಡೆದ ದೀಪಕ್ ಹೂಡಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ 293 ರನ್ ಗಳಿಸಿದ ವಿಜಯ್ ಜೋಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 75 (24.4 ಓವರ್)
ಶಾರ್ಟ್ ಸಿ ಹೂಡಾ ಬಿ ಮಿಲಿಂದ್ 25(27), ಮಾರ್ಟಿಮರ್ ಸಿ ಜೋಲ್ ಬಿ ಹೂಡಾ 10(28), ಮೆಕ್ಡ್ರೆಮೊಟ್ ಸಿ ಖಾನ್ ಬಿ ಮಿಲಿಂದ್ 3(8), ಡೊರನ್ ಸಿ ಐಯ್ಯರ್ ಬಿ ಹೂಡಾ 13(18), ಗ್ರೆಗೋರಿ ಬಿ ಲಂಬ್ 2(13), ವಿಲ್ಲೀಸ್ ಸಿ ಹೆರ್ವಾಡ್ಕರ್ ಬಿ ಲಂಬ್ 1(7), ವ್ಯಾಲೆಂಟ್ ಸಿ ಖಾನ್ ಬಿ ಹೂಡಾ 0(3), ಕೆಲ್ಲಿ ಬಿ ಕುಲ್ದೀಪ್ 5(18), ಅಯರ್ ಸಿ ಬೈನ್ಸ್ ಬಿ ಕುಲ್ದೀಪ್ 2(17), ಫೋಟಿಯಾ ಎಲ್ಬಿಡಬ್ಲ್ಯೂ ಬಿ ಗನಿ 6(11), ಬೆಲ್ ಅಜೇಯ 0(1), ಇತರೆ 8
ವಿಕೆಟ್ ಪತನ: 1-36, 2-42, 3-45, 4-58, 5-59, 6-60, 7-61, 8-68, 9-73, 10-75
ಬೌಲಿಂಗ್: ಲಂಬ್ 6-1-28-2, ಮಿಲಿಂದ್ 6-1-19-2, ಹೂಡಾ 10-0-22-3, ಕುಲ್ದೀಪ್ 2-1-4-2, ಗನಿ 0.4-0-2-1
ಭಾರತ 76/2 (15.3 ಓವರ್)
ಬೈನ್ಸ್ ಅಜೇಯ 40(52), ಹೆರ್ವಾಡ್ಕರ್ ಸಿ ಕೆಲ್ಲಿ ಬಿ ಬೆಲ್ 0(2), ಜೋಲ್ ಸಿ ವ್ಯಾಲೆಂಟ್ ಬಿ ಅಯರ್ 9(18), ಸ್ಯಾಮ್ಸನ್ ಅಜೇಯ 20(22), ಇತರೆ 7
ವಿಕೆಟ್ ಪತನ: 1-11, 2-21
ಬೌಲಿಂಗ್: ಫೋಟಿಯಾ 5-0-31-0, ಬೆಲ್ 4-0-15-1, ಅಯರ್ 4-0-25-1, ವ್ಯಾಲೆಂಟ್ 2.3-0-4-0