

'ಪ್ಲೇ ಬಾಯ್'ನಂಥ ಮ್ಯಾಗಝಿನ್ಗೆ ಮಾಡೆಲ್ಗಳು ಪೂರ್ತಿ ಬೆತ್ತಲೆ ಇಲ್ಲವೇ ಟೂ ಪೀಸ್ ರೂಪದರ್ಶಿಯಾಗುವುದು ಸಾಮಾನ್ಯ. ಆದರೆ, ಪುರುಷರು ಅದೇ ರೀತಿಯಾದರೆ?
ಆದರೇನು ಬಂತು... ಗೇ ಮ್ಯಾಗಝಿನ್ವೊಂದಕ್ಕೆ ಲೂಯಿಸ್ ಸ್ಮಿತ್ ಅಂಥ ಪೋಸ್ ಕೊಟ್ಟಿದ್ದಾರೆ. ಅದೂ ಸೊಂಟಕ್ಕೆ ಸಣ್ಣ ಸ್ವಿಮ್ಸೂಟ್ ಧರಿಸಿಕೊಂಡು! ಇಷ್ಟೇ ಹೇಳಿದರೆ ಗೊತ್ತಾಗಲಿಕ್ಕಿಲ್ಲ, ಲೂಯಿಸ್ ಯಾರು ಅಂತ. ಲೂಯಿಸ್ ಸ್ಮಿತ್ ಒಬ್ಬ ಖ್ಯಾತ ಜಿಮ್ನಾಸ್ಟ್. ಇನ್ನೂ ಹೆಚ್ಚಿಗೆ ಹೇಳಬೇಕೆಂದರೆ, ಸ್ಮಿತ್ 2012ರ ಲಂಡನ್ ಒಲಿಂಪಿಕ್ನಲ್ಲಿ ಬೆಳ್ಳಿ ಮತ್ತು ಕಂಚು ಪದಕ ಗೆದ್ದಿದ್ದರು. ಜಿಮ್ನಾಸಿಯಂ ಅಂಗಣದಲ್ಲಿ 'ಸ್ಟ್ರಿಕ್ಟ್ಲೀ ಕೋಮ್ ಡ್ಯಾನ್ಸಿಂಗ್' ಮೂಲಕ ಸಾವಿರಾರು ಅಭಿಮಾನಗಳನ್ನು ಗಳಿಸಿದ್ದರು. ಈಗ ಗೇ ಟೈಮ್ ಮ್ಯಾಗಝಿನ್ನ ಕವರ್ ಪೇಜ್ನಲ್ಲಿ ತಮ್ಮ ಅಂಗಸೌಷ್ಟವನ್ನು ತೆರೆದಿಟ್ಟಿದ್ದಾರೆ. ಆ ಮೂಲಕ ಮತ್ತಷ್ಟು ಅಭಿಮಾನಿಗಳು ಅವರಿಗೊಲಿಯಬಹುದು! ಜಿಮ್ನಾಸ್ಟ್ ಶರೀರವನ್ನು ನೋಡುವುದೇ ಅಂದ. ಬಿಲ್ಲಿನಂತೆ ಬಾಗುವ ಅವರ ಕಲೆಗಾರಿಕೆಗೆ ಅವರ ದೇಹವೇ ಸೋಪಾನ. ಜಿಮ್ನಾಸಿಯಂ ಆಟಕ್ಕೆ ಒಗ್ಗುವಂತೆ ಬೆಳೆಸಿಕೊಳ್ಳುವ ಅವರ ಅಂಗಸೌಷ್ಟವ ಒಂದು ಕ್ಷಣ ನಿಬ್ಬೆರಗುವಾಗುವಂತೆ ಮಾಡುವುದರಲ್ಲೇ ಸಂಶಯವಿಲ್ಲ. ಅಂಥ ಸೌಂದರ್ಯಯುತ ಶರೀರವನ್ನು ಸ್ಮಿತ್ ಯಾವುದೇ ಮುಲಾಜಿಲ್ಲದೇ ಗೇ ಟೈಮ್ ಮ್ಯಾಗಜಿನ್ ಕವರ್ ಪೇಜ್ನಲ್ಲಿ ತೆರೆದಿಟ್ಟಿದ್ದಾರೆ. ಮ್ಯಾಗಜಿನ್ ಒಳಪುಟಗಳಲ್ಲೂ ಇದೇ ತೆರನಾದ ಭಾವಚಿತ್ರಗಳಿವೆ.
ಮಜಾ ಎಂದರೆ, ಒಲಿಂಪಿಕ್ ಮುಗಿದ 12 ತಿಂಗಳು ಗತಿಸಿದರೂ, ಅದರ ಯಶಸ್ಸನ್ನು ಬಳಸಿಕೊಂಡು ದುಡ್ಡು ಅಥವಾ ಪ್ರಸಿದ್ಧಿಯನ್ನು ಪಡೆದುಕೊಳ್ಳುವ ಯೋಚನೆಗೆ ಸ್ಮಿತ್ಗೆ ಬಂದಿಲ್ಲವಂತೆ. ಈ ವಿಷಯವನ್ನು ಅವರೇ ಬಹಿರಂಗಪಡಿಸಿದ್ದಾರೆ.
'ಜಿಮ್ನಾಸಿಯಂನಂಥ ರೂಟಿನ್ ಅಲ್ಲದ ಕೆಲಸಗಳಿಗೆ ನೀವು ಮುಂದಾದಾಗ, ನಿಮ್ಮ ಗುರಿ ಶ್ರೀಮಂತ ಅಥವಾ ಜನಪ್ರಿಯವಾಗುವುದಾಗಿರಬಾರದು. ನೀವು ಕ್ರೀಡೆಯನ್ನು ಪ್ರೀತಿಸಬೇಕು. ನಿಮ್ಮ ಆಟ ನೀವು ಆಡುತ್ತಾ ಹೋದಂತೆ ಪರಿಸ್ಥಿತಿ ತನ್ನಿಂತಾನೇ ಬದಲಾಗುತ್ತಾ ಹೋಗುತ್ತದೆ. ಕ್ರಮವಾಗಿ ಬೆಳೆಯುತ್ತಾ ಸಾಗುತ್ತೀರಿ. ನಿಮ್ಮ ಜೀವನದ ಗತಿಯೇ ಬದಲಾಗುತ್ತದೆ' ಎನ್ನುವ 24 ವರ್ಷದ ಸ್ಮಿತ್ ಮಾತಿನಲ್ಲಿ ಸತ್ಯವಿದೆ.
ನಿಮಗೊಂದು ವಿಷಯ ಗೊತ್ತಾ? 1928ರ ಬಳಿಕ ಒಲಿಂಪಿಕ್ನಲ್ಲಿ ಸ್ಥಾನ ಪಡೆದ ಮೊದಲ ಬ್ರಿಟನ್ ಜಿಮ್ನಾಸ್ಟ್ ಇವರು! ಅಷ್ಟು ದೀರ್ಘಕಾಲ ಬ್ರಿಟನ್ನಿಂದ ಒಬ್ಬ ಜಿಮ್ನಾಸ್ಟ್ ಪಟುವನ್ನು ಒಲಿಂಪಿಕ್ಗೆ ಕಳುಹಿಸಕೊಡಲು ಸಾಧ್ಯವಾಗಿರಲಿಲ್ಲ. ಆ ನಿರಾಶೆಯನ್ನು ಮುರಿದಿದ್ದು ಲೂಯಿಸ್ ಸ್ಮಿತ್. ಇವರು ಬೀಜಿಂಗ್ ಹಾಗೂ ಲಂಡನ್ ಒಲಿಂಪಿಕ್ನಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆಲ್ಲುವ ಮೂಲಕ ಇಡೀ ವಿಶ್ವದ ಗಮನ ಸೆಳೆದರು.
ಬೆತ್ತಲೆಯಾನ
ಬೆತ್ತಲೆಯನ್ನೂ ಒಂದು ರೀತಿಯ ಕಲಾತ್ಮಕತೆಯಿಂದ ಆರಾಧಿಸುವ ಮನೋಭಾವ ಪಾಶ್ಚಾತ್ಯರದ್ದು. ಅವರ ಈ ವಿಭಿನ್ನ ಶೈಲಿಯ ಅಭಿರುಚಿ, ಕ್ರೀಡಾಲೋಕಕ್ಕೂ ಕಾಲಿಟ್ಟಿರುವುದು ಹಳೇಮಾತು. ಆದರೆ, ಇತ್ತೀಚೆಗೆ 'ಕ್ಯಾಮೆರಾಗೆ ಬೆತ್ತಲೆ ಪೋಸು ನೀಡಿದ್ದು ತುಂಬಾ ಖುಷಿ ಕೊಟ್ಟಿದೆ' ಎಂದು ಹೇಳುವ ಮೂಲಕ ವಾಲಿಬಾಲ್ ಆಟಗಾರ್ತಿ ಕೆರ್ರಿ ವಾಲ್ಷ್ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ.
ಆಕೆಯ ಮಾತನ್ನು ನೆನಪಿಸಿಕೊಂಡರೆ, ಕ್ರೀಡಾಲೋಕ ಖ್ಯಾತನಾಮರಲ್ಲಿ ಬೆತ್ತಲಾದವರೆಲ್ಲರೂ ಒಮ್ಮೆ ನೆನಪಾಗುತ್ತಾರೆ. ಪ್ರಸಿದ್ಧ ಕ್ರೀಡಾ ನಿಯತಕಾಲಿಕೆಯಾದ ಇಎಸ್ಪಿಎನ್ ಮ್ಯಾಗಝಿನ್, ಜಗತ್ತಿನ ಪ್ರಸಿದ್ಧ ಕ್ರೀಡಾ ತಾರೆಗಳನ್ನು ಕಲಾತ್ಮಕವಾಗಿ ಬೆತ್ತಲೆಗೊಳಿಸಿ, ಆ ಫೋಟೋಗಳನ್ನು ಬಿಡುಗಡೆಗೊಳಿಸಿದೆ.
ಜಗತ್ತಿನ ನಂಬರ್ ಒನ್ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್, ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ವಿಜೇತೆ ಹಾಗೂ ವಾಲಿಬಾಲ್ ಆಟಗಾರ್ತಿ ಕೆರ್ರಿ ವಾಲ್ಷ್ ಸೇರಿದಂತೆ ದೊಡ್ಡ ಕ್ರೀಡಾ ಪ್ರತಿಭೆಗಳೇ ಅಲ್ಲಿ ಬೆತ್ತಲೆಗೊಂಡಿದ್ದಾರೆ. ಅಂದ ಹಾಗೆ, ಇಲ್ಲಿ ಬೆತ್ತಲಾಗಿರೋದು ಬರೀ ಹೆಂಗಸರಷ್ಟೇ ಅಲ್ಲ. ಗಂಡಸರೂ ಹೌದು. 77 ವರ್ಷದ ದಕ್ಷಿಣ ಆಫ್ರಿಕದ ಗಾಲ್ಫ್ ಕ್ರೀಡಾಳು ಗ್ಯಾರಿ ಪ್ಲೇಯರ್, ಬ್ಯಾಸ್ಕೆಟ್ ಬಾಲ್ ಆಟಗಾರ ಡೆನ್ವರ್ ನಗ್ಗೆಟ್ಸ್, ರಗ್ಬಿ ಆಟಗಾರ ಕೋಲಿನ್ ಕೆಪೆರ್ನಿಕ್ ಅವರೂ ಇಲ್ಲಿ ವಿವಸ್ತ್ರರಾಗಿದ್ದಾರೆ. ಇದು, ಸ್ತ್ರೀವಾದಿಗಳಿಗೆ ಕೊಂಚ ಸಮಾಧಾನ ತರಬಹುದಷ್ಟೇ. ಇಲ್ಲಿ ಇನ್ನೊಂದು ವಿಷಯ. ಅದು ಫೋಟೋಗ್ರಫಿಗೆ ಸಂಬಂಧಿಸಿದ್ದು. ಫೋಟೋಗ್ರಫಿಯಲ್ಲಿ ಫ್ಯಾಷನ್ ಫೋಟೋಗ್ರಫಿ ಒಂದು ವಿಭಿನ್ನವಾದ ಆಯಾಮ. ಇಎಸ್ಪಿಎನ್ ಮ್ಯಾಗಝಿನ್ನಲ್ಲಿ, ಕ್ರೀಡಾವ್ಯಕ್ತಿಗಳನ್ನೂ ಮಾಡೆಲ್ಗಳನ್ನಾಗಿ ತೋರಿಸುವ ಹೊಸ ಪ್ರಯತ್ನ ಮಾಡಲಾಗಿದೆ. ಜಗತ್ತಿನಲ್ಲೇ ಇದೊಂದು ವಿನೂತನ ಅಥವಾ ಕೆಲ ದೇಶಗಳಲ್ಲಿ ಮಾಡಲು ಸಾಧ್ಯವಿರದಂಥ ಪ್ರಯತ್ನ. ಏಕೆಂದರೆ, ಭಾರತದಂಥ ರಾಷ್ಟ್ರಗಳಲ್ಲಿ ಇಂಥ ಪ್ರಯತ್ನಗಳು ವಿವಾದಕ್ಕೆಡೆ ಮಾಡುವುದಂತೂ ನಿಶ್ಚಿತ. ಹಾಗಂತ, ಇಎಸ್ಪಿಎನ್ ಈ ಪ್ರಯೋಗ ಸೂಪರ್ ಅಂತ ಹೇಳಲಾಗದಿದ್ದರೂ, ಒಂದು ಕಲಾತ್ಮಕ ದೃಷ್ಟಿಯಿಂದ ಇದನ್ನು ಅಥೈಸಬಹುದಷ್ಟೇ.
- ಶೋಮ