ಮೈಸೂರು: ನಗರದಲ್ಲಿ ನಡೆದ 16 ವರ್ಷದೊಳಗಿನ ಅಂತಾರಾಷ್ಟ್ರೀಯ ಅಂತರ ಕ್ಯಾಂಪ್ಗಳ ಟಿ- 20 ಕ್ರಿಕೆಟ್ ಪಂದ್ಯಾವಳಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮೈಸೂರು ಎಸ್ಎಕೆ ಮತ್ತು ಡಿವೈಇಎಸ್ ತಂಡವು ಸೂಪರ್ ಓವರ್ ಮೂಲಕ ಜಯಗಳಿಸಿತು. ಬಿಆರ್ಎನ್ಎಂಪಿಎಲ್ನ ಆವರಣದಲ್ಲಿ ಯುವಜನ ಮತ್ತು ಸಬಲೀಕರಣ ಕ್ರೀಡಾ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕ್ರೀಡಾ ಪ್ರಾಧಿಕಾರ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ನಗರದ ಎಸ್ಎಕೆ ಮತ್ತು ಡಿವೈಇಎಸ್ ತಂಡ ಟಾಸ್ ಗೆದ್ದು ನ್ಯೂಜಿಲೆಂಡ್ನ ಹಟ್ಟ್ ಕ್ರಿಕೆಟ್ ಇಂಕ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಹಟ್ ಕ್ರಿಕೆಟ್ ತಂಡವು ನಿಗದಿತ 20 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 112 ರನ್ ಕಲೆಹಾಕಿತು. ತಂಡದ ಪರ ನಿಕ್ (22), ತ್ವಾಲ್ಲಾನ್ಸ್ (23), ಲೀಮ್ (14) ರನ್ ಗಳಿಸಿದರು. ಇದಕ್ಕೆ ಪ್ರತಿಯಾಗಿ ಎಸ್ಎಕೆ ಮತ್ತು ಡಿವೈಇಎಸ್ ತಂಡವು 6 ವಿಕೆಟ್ ನಷ್ಟಕ್ಕೆ 112 ರನ್ ಕಲೆ ಹಾಕಿತು. ಈ ವೇಳೆ ಸೂಪರ್ ಓವರ್ನಲ್ಲಿ ನ್ಯೂಜಿಲೆಂಡ್ ತಂಡವು 5 ಬಾಲ್ ಎದುರಿಸಿ 2 ವಿಕೆಟ್ ಕಳೆದುಕೊಂಡು 2 ರನ್ ಕಲೆ ಹಾಕಿದರೆ, ಎಸ್ಎಕೆ ಮತ್ತು ಡಿವೈಇಎಸ್ ವಿಕೆಟ್ ನಷ್ಟವಿಲ್ಲದೆ 5 ರನ್ಗಳಿಂದ ಜಯಿಸಿತು.