ನವದೆಹಲಿ: ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ನ ಸ್ಪರ್ಧೆಗಳ ಸಮಿತಿಯ ಸದಸ್ಯರಾಗಿ ಸತತ ಎರಡನೇ ಬಾರಿಗೆ ನೇಮಕಗೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಲಾವುಸನ್ನೆಯಲ್ಲಿ ನಡೆದ ಎಫ್ಐಎಚ್ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಈ ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ.
ಸಂಸ್ಥೆಯ ಎಲ್ಲ ಹೊಸ ಸದಸ್ಯರಿಗೆ ಮತ್ತು ಸಮಿತಿಯಿಂದ ನಿರ್ಗಸುತ್ತಿರುವ ಸದಸ್ಯರು ಹಾಕಿ ಅಭಿವೃದ್ಧಿಗೆ ಸಲ್ಲಿಸಿದ ಸೇವೆಗಾಗಿ ಎಫ್ಐಎಚ್ ಅಧ್ಯಕ್ಷ ಲೀಯಾಂಡ್ರೋ ನೆಗ್ರೆ ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮನ್ನು ಮರು ನೇಮಕ ಮಾಡಿರುವ ಕುರಿತು ಹರ್ಷ ವ್ಯಕ್ತಪಡಿಸಿರುವ ಬಾತ್ರಾ, ಸ್ಪರ್ಧೆಗಳ ಸಮಿತಿ ಸದಸ್ಯರಾಗುವುದು ಗೌರವದ ವಿಷಯ ಎಂದಿದ್ದಾರೆ.