
ಮುಂಬೈ: ಮುಂದಿನ ವರ್ಷ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಟ್ರೋಫಿ, ವಿಶ್ವದಾದ್ಯಂತ ಪರ್ಯಟನೆ ನಡೆಸುತ್ತಿದೆ. ಈಗ ಭಾರತಕ್ಕೆ ಆಗಮಿಸಿರುವ ಟ್ರೋಫಿ 6 ದಿನಗಳ ಕಾಲ ಭಾರತದಲ್ಲಿ ಪ್ರವಾಸ ಮಾಡಲಿದೆ.
ಮಂಗಳವಾರ ಮುಂಬೈಗೆ ಆಗಮಿಸಿರುವ ವಿಶ್ವಕಪ್ ಟ್ರೋಫಿ ಪ್ರತಿ ದಿನ ದೇಶದ ಪ್ರಮುಖ ನಗರಗಳಿಗೆ ತೆರಳಲಿದೆ. ಈ ಟ್ರೋಫಿ ಕ್ರಮವಾಗಿ ಬುಧವಾರ ಹೈದರಾಬಾದ್, ಗುರುವಾರ ಬೆಂಗಳೂರು, ಶುಕ್ರವಾರ ನವದೆಹಲಿ, ಶನಿವಾರ ಜಲಂದರ್ ಮತ್ತು ಭಾನುವಾರ ಆಹ್ಮದಾಬಾದ್‌ಗೆ ತೆರಳಲಿದೆ.
ಮನಿಗ್ರಾಮ್ ಕಂಪನಿ ನೇತೃತ್ವದಲ್ಲಿ ವಿಶ್ವಕಪ್ ಪ್ರಶಸ್ತಿಯನ್ನು ಮಂಗಳವಾರ ಮುಂಬೈನ ಹೈ ಸ್ಟ್ರೀಟ್ ಫೊನಿಕ್ಸ್ ಮಾಲ್‌ಗೆ ತರಲಾಗಿತ್ತು. ಈ ವೇಳೆ ಭಾರತದ ಸ್ಫೋಟಕ ಬ್ಯಾಟ್ಸ್‌ಮಾನ್ ವೀರೇಂದ್ರ ಸೆಹವಾಗ್ ಉಪಸ್ಥಿತರಿದ್ದರು.
ಕ್ರಿಕೆಟ್ ಪ್ರೇಮಿಗಳು ಈ ಪ್ರತಿಷ್ಠಿತ ಟ್ರೋಫಿಯನ್ನು ಕಣ್ತುಂಬಿಕೊಳ್ಳಲು ಉತ್ತಮ ಅವಕಾಶವಾಗಿದ್ದು, ಇದನ್ನು ನೋಡಲು ಸಾಕಷ್ಟು ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದೆ.
ಕ್ರಿಕೆಟ್ ಪ್ರಿಯರು ಈ ಆಕರ್ಷಕ ಟ್ರೋಫಿಯನ್ನು ನೋಡಲು ಇದೊಂದು ಉತ್ತಮ ಅವಕಾಶ. ಐಸಿಸಿ ಹಾಗೂ ಮನಿಗ್ರಾಮ್ ಭಾರತದಲ್ಲಿ ವಿಶ್ವಕಪ್ ಟ್ರೋಫಿ ಪ್ರವಾಸವನ್ನು ಆಯೋಜಿಸಲು ಉತ್ಸುಕವಾಗಿದೆ. ಮುಂದಿನ ದಿನಗಳಲ್ಲಿ ದೇಶದ ಇತರೆ ನಗರಗಳಿಗೂ ಸಂಚರಿಸಲಿದ್ದು, ಅಭಿಮಾನಿಗಳ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ವಿಶ್ವಾಸವಿದೆ ಎಂದು ಮನಿಗ್ರಾಮ್‌ನ ದಕ್ಷಿಣ ಏಷ್ಯಾದ ಸ್ಥಳೀಯ ಹಿರಿಯ ನಿರ್ದೇಶಕ ಕೌಶಿಕ್ ರಾಯ್ ತಿಳಿಸಿದ್ದಾರೆ.
Advertisement