ಆಸ್ಟ್ರೇಲಿಯನ್ ಓಪನ್ ಟೆನಿಸ್‌ನಲ್ಲಿ ಪೇಸ್-ಹಿಂಗಿಸ್ ಜೋಡಿ ಕಣಕ್ಕೆ

ಮುಂದಿನ ಹೊಸ ವರ್ಷದ ಆರಂಭದಲ್ಲಿ ನಡೆಯಲಿರುವ ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ...
ಲಿಯಾಂಡರ್ ಪೇಸ್ & ಮಾರ್ಟಿನಾ ಹಿಂಗಿಸ್
ಲಿಯಾಂಡರ್ ಪೇಸ್ & ಮಾರ್ಟಿನಾ ಹಿಂಗಿಸ್

ಪುಣೆ: ಮುಂದಿನ ಹೊಸ ವರ್ಷದ ಆರಂಭದಲ್ಲಿ ನಡೆಯಲಿರುವ ಋತುವಿನ ಮೊದಲ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಾಗಿರುವ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಭಾರತದ ಲಿಯಾಂಡರ್ ಪೇಸ್ ಅವರು ಮಿಶ್ರ ಡಬಲ್ಸ್ ವಿಭಾಗದ ಸೆಣಸಿನಲ್ಲಿ ಹೊಸ ಜೊತೆಗಾರರೊಂದಿಗೆ ಹೋರಾಟಕ್ಕಿಳಿಯಲಿದ್ದಾರೆ.

ಮುಖ್ಯವಾಗಿ ಪುರುಷರ ಡಬಲ್ಸ್‌ನಲ್ಲಿ ಪೇಸ್, ಶತಕದ ಜೊತೆಗಾರನ ಹೊಸ್ತಿಲಲ್ಲಿದ್ದಾರೆ. ಅಂದರೆ ಪ್ರಸ್ತುತ ಭಾರತೀಯ ಆಟಗಾರ, ಮುಂದಿನ ಆಸ್ಟ್ರೇಲಿಯನ್  ಓಪನ್‌ನಲ್ಲಿ ದಕ್ಷಿಣ ಆಫ್ರಿಕಾದ ರಾವೆನ್ ಕ್ಲಾಸೆನ್ ಅವರ ಜೊತೆಗೂಡಿ  ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ 41ರ ಪೇಸ್, 99ನೇ ಹೊಸ ಜೊತೆಗಾರನೊಂದಿಗೆ ಸವಾಲು ಮುನ್ನಡೆಸಲಿದ್ದಾರೆ. ಕ್ರಿಕೆಟ್ ಆಟಗಾರರಿಗೆ ಶತಕ ಬಾರಿಸುವುದು ಹೇಗೆ ಹೆಮ್ಮೆಯ ಸಂಗತಿಯಾಗಿರುತ್ತದೋ, ಹಾಗೆಯೇ ಟೆನಿಸ್ ಅಖಾಡದಲ್ಲಿ ಪೇಸ್, ಹೊಸ-ಹೊಸ ಜೋಡಿಯ ಜೊತೆಗಿನ ಆಟದಲ್ಲಿ ನೂರರ ಗಡಿಯತ್ತ ಮುಖ ಮಾಡಿ ನಿಂತಂತಾಗಿದೆ.

ಅದೇ ರೀತಿ, ಮಹಿಳೆಯರ ಡಬಲ್ಸ್‌ನಲ್ಲಿ ಅವರು ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ್ತಿ ಸ್ವಿಜರ್‌ಲೆಂಡ್‌ನ ಮಾರ್ಟಿನಾ ಹಿಂಗಿಸ್ ಅವರೊಂದಿಗೆ ಸ್ಪರ್ಧೆಗಿಳಿಯುವುದಾಗಿ ಪ್ರಕಟಿಸಿದ್ದಾರೆ.ಇದರೊಂದಿಗೆ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪೇಸ್, 24ನೇ ಹೊಸ ಜೊತೆಗಾರ್ತಿಯೊಂದಿಗೆ ತಮ್ಮ ಹೋರಾಟ ಮುಂದುವರಿಸಲಿದ್ದಾರೆ.
ಜೊತೆಗಾರರನ್ನು ಆಯ್ಕೆ ಮಾಡಿಕೊಂಡಾಗ, ನನ್ನಲ್ಲಿನ ದೌರ್ಬಲ್ಯವೇ ನಿಮ್ಮ ಶಕ್ತಿ ಎಂದು ಹೇಳಬಯಸುತ್ತೇನೆ. ರಾವೆನ್ ಕ್ಲಾಸೆನ್ ವಿಶ್ವದರ್ಜೆಯ ಉತ್ತಮ ಬ್ಯಾಕ್‌ಹ್ಯಾಂಡ್ ಆಟಗಾರರಾಗಿದ್ದು, ಉತ್ತಮ ಸರ್ವ್‌ಗಳನ್ನು ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಇದು ನಮ್ಮ ಜೋಡಿಗೆ ಪ್ಲಸ್ ಪಾಯಿಂಟ್ ಎಂದು ಪೇಸ್ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯನ್ ಓಪನ್‌ಗೆ ಮುನ್ನ ದೋಹಾ ಅಥವಾ ಚೆನ್ನೈನಲ್ಲಿ ನಡೆಯಲಿರುವ ಟೂರ್ನಿಗಳಲ್ಲಿ  ಪಾಲ್ಗೊಳ್ಳುವ ಮೂಲಕ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಗೆ ಉತ್ತಮ ರೀತಿಯಲ್ಲಿ ಸಜ್ಜುಗೊಳ್ಳುವುದಾಗಿಯೂ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com