ಸಾನಿಯಾ-ಶೋಯೆಬ್ ವಿರಸಕ್ಕೆ ಚಿರು ಪುತ್ರ ಕಾರಣ?

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ..
ಉಪಾಸನಾ-ರಾಮ್‌ಚರಣ್ ತೇಜಾ-ಸಾನಿಯಾ
ಉಪಾಸನಾ-ರಾಮ್‌ಚರಣ್ ತೇಜಾ-ಸಾನಿಯಾ
Updated on

ಹೈದರಾಬಾದ್‌: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟ್ ತಾರೆ ಶೋಯೆಬ್ ಮಲ್ಲಿಕ್ ದಾಂಪತ್ಯ ಮುರಿದು ಬೀಳುವ ಹಂತ ತಲುಪಿದ್ದು, ಇದಕ್ಕೆ ಕೇಂದ್ರ ಮಾಜಿ ಸಚಿವ ಹಾಗೂ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ, ನಟ ರಾಮ್‌ಚರಣ್ ತೇಜಾ ಕಾರಣ ಎಂದು ಟಾಲಿವುಡ್ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ.

ಪ್ರೀತಿಸಿ ಮದುವೆಯಾಗಿದ್ದ ಸಾನಿಯಾ ಹಾಗೂ ಶೋಯೆಬ್ ನಡುವೆ ಎಲ್ಲವೂ ಸರಿಯಿಲ್ಲ. ಇಬ್ಬರ ನಡುವೆ ಹೊಂದಾಣಿಕೆ ಇಲ್ಲ. ಹೀಗಾಗಿಯೇ ಶೋಯೆಬ್ ಪಾಕಿಸ್ತಾನದಲ್ಲಿ ಗುಂಡು-ತುಂಡು ಹಾಕ್ತಿದ್ರೆ, ಇತ್ತ ಹೈದರಾಬಾದ್‌ನಲ್ಲಿ ಸಾನಿಯಾ ಪಾರ್ಟಿ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅವರಿಗೆ ರಾಮ್ ಚರಣ್ ತೇಜಾ ಸಾಥ್ ನೀಡುತ್ತಿದ್ದಾರೆ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿವೆ.

ಸಾನಿಯಾ ಇದ್ದ ಕಡೆ ಪದೆಪದೇ ರಾಮ್ ಚರಣ್ ತೇಜಾ ಕಾಣಿಸಿಕೊಳ್ಳುತ್ತಿರುವುದೇ ಈ ಗಾಸಿಪ್‌ಗಳಿಗೆ ಕಾರಣ ಎಂದು ಟಾಲಿವುಡ್ ಪಂಡಿತರು ಹೇಳುತ್ತಿದ್ದಾರೆ. ಇತ್ತೀಚಿಗಷ್ಟೇ ಟೆನಿಸ್ ರಾಕೆಟ್ ಹಿಡಿದು ಸಾನಿಯಾ ಜೊತೆ ಪಂದ್ಯವಾಡಿದ್ದ ರಾಮ್ ಚರಣ್ ತೇಜಾ, ಈಗ ಕುಂತರೂ-ನಿಂತರೂ ಮೂಗುತಿ ಸುಂದರಿಯ ಕನವರಿಕೆಯಲ್ಲೇ ಇದ್ದಾರಂತೆ. ಅಲ್ಲದೆ ಇಬ್ಬರೂ ಪ್ರತಿ ದಿನ ಪಾರ್ಟಿ ಮಾಡುವುದೇ ಇವರ ಚಾಳಿಯಾಗಿದೆಯಂತೆ. ಇದೆಲ್ಲಾ ಬರಿ ಅಂತೆ-ಕಂತೆ ಅಂದುಕೊಂಡರೂ ಫೋಟೋಗಳು ಮಾತ್ರ ಸುಳ್ಳು ಹೇಳುತ್ತಿಲ್ಲ!

ರಾಮ್‌ಚರಣ್ ತೇಜಾ ಪತ್ನಿ ಉಪಾಸನಾಗೆ ಆಪ್ತ ಸ್ನೇಹಿತೆಯಾಗಿರು ಸಾನಿಯಾ ಈಗ ಆಕೆಯ ಪತಿಗೂ ಅಷ್ಟೇ ಆಪ್ತೆಯಾಗಿದ್ದಾಳೆ. ಇದಕ್ಕೆ ಪುಷ್ಠಿ ನೀಡುವಂತೆ ರಾಮ್ ಚರಣ್ ತೇಜಾ ಅವರ ಮುಂದಿನ ಚಿತ್ರದಲ್ಲಿ ಸಾನಿಯಾ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com