ಈಜು ತಾರೆ ಫೆಲ್ಪ್‌ಗೆ 1 ವರ್ಷ ಜೈಲು ಶಿಕ್ಷೆ

ಖ್ಯಾತ ಈಜುಪಟು ಮೈಕೆಲ್ ಫೆಲ್ಪ್‌ಗೆ ಅಮೆರಿಕದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಅಮೆರಿಕದ ಖ್ಯಾತ ಈಜು ತಾರೆ ಮೈಕಲ್ ಫೆಲ್ಪ್ಸ್ (ಸಂಗ್ರಹ ಚಿತ್ರ)
ಅಮೆರಿಕದ ಖ್ಯಾತ ಈಜು ತಾರೆ ಮೈಕಲ್ ಫೆಲ್ಪ್ಸ್ (ಸಂಗ್ರಹ ಚಿತ್ರ)

ನ್ಯೂಯಾಕ್: ಖ್ಯಾತ ಈಜುಪಟು ಮೈಕೆಲ್ ಫೆಲ್ಪ್‌ಗೆ ಅಮೆರಿಕದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕುಡಿದು ವಾಹನ ಚಲಾಯಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದ ಖ್ಯಾತ ಈಜು ಪಟು ಮೈಕೆಲ್ ಫೆಲ್ಪ್ಸ್‌ಗೆ ನ್ಯಾಯಾಲಯ ಒಂದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 29 ವರ್ಷದ ಒಲಿಂಪಿಕ್ಸ್ ಕ್ರೀಡಾಪಟು ಫೆಲ್ಪ್ಸ್ ಕಳೆದ ಸೆಪ್ಚೆಂಬರ್‌ನಲ್ಲಿ ಪಾನಮತ್ತರಾಗಿ ವಾಹನ ಚಲಾಯಿಸುತ್ತಿದ್ದ ವೇಳೆ ಬಾಲ್ಟಿಮೋರ್ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಫೆಲ್ಪ್ಸ್ ವಾಹನ ಮಿತಿಮೀರಿದ ವೇಗದಲ್ಲಿ ಚಲಿಸುತ್ತಿದ್ದರಿಂದ ಅನುಮಾನಗೊಂಡ ಪೊಲೀಸರು ಫೆಲ್ಸ್ಪ್ ವಾಹನವನ್ನು ಹಿಮ್ಮೆಟ್ಟಿದ್ದರು. ಪೊಲೀಸರು ಹಿಂಬಾಲಿಸುತ್ತಿರುವುದರ ಪರಿಜ್ಞಾನ ಕೂಡ ಇಲ್ಲದೆ ಗರಿಷ್ಟ 65 ಕಿಮೀ ವೇಗದಲ್ಲಿ ಚಲಿಸಬೇಕಿದ್ದ ರಸ್ತೆಯಲ್ಲಿ ಫೆಲ್ಪ್ಸ್ 135 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದರು.

ಹೀಗಾಗಿ ಫೆಲ್ಪ್ಸ್‌ರನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯದಲ್ಲಿ ಹಾಜರು ಪಡಿಸಿದರು. ಸತತ ವಿಚಾರಣೆ ನಡೆಸಿದ ನ್ಯಾಯಾಲಯ ನಿನ್ನೆ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಒಂದು ವರ್ಷಗಳ ಜೈಲು ಶಿಕ್ಷೆವಿಧಿಸಿದೆ. ಇದಿಷ್ಟೇ ಅಲ್ಲದೇ ಈಜು ತರಬೇತಿಯಿಂದಲೂ ಫೆಲ್ಪ್ಸ್ ಅವರಿಗೆ 18 ತಿಂಗಳ ಕಾಲ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ.

ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬರೊಬ್ಬರಿ 18 ಚಿನ್ನದ ಪದಕಗಳನ್ನು ಗೆದ್ದಿರುವ ಅಮೆರಿಕದ ಖ್ಯಾತ ಕ್ರೀಡಾಪಟು ಮೈಕೆಲ್ ಫೆಲ್ಪ್ಸ್, 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ತಮ್ಮ ವೃತ್ತಿ ಜೀವನದ 22ನೇ ಒಲಿಂಪಿಕ್ಸ್ ಪದಕ ಪಡೆದ ಬಳಿಕ ಒಲಿಂಪಿಕ್ಸ್‌ಗೆ ನಿವೃತ್ತಿ ಘೋಷಿಸಿದ್ದರು. ನಿವೃತ್ತಿ ಬಳಿಕ ಈಜು ತರಬೇತುದಾರರಾಗಿ ಫೆಲ್ಪ್ಸ್ ಮುಂದುವರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com