
ಕೋಲ್ಕತಾ: ಆರಂಭದಿಂದ ಅಂತ್ಯದವರೆಗೂ ತೀವ್ರ ಜಿದ್ದಾಜಿದ್ದಿನ ಹೋರಾಟದ ನಡುವೆ ಪಂದ್ಯದ ಅಂತಿಮ ಕ್ಷಣದಲ್ಲಿ ಗಳಿಸಿದ ರೋಚಕ ಗೋಲಿನಿಂದ ಅಟ್ಲೆಟಿಕೊ ಡಿ ಕೋಲ್ಕತಾ ತಂಡ ಚೊಚ್ಚಲ ಆವೃತಿಯ ಇಂಡಿಯನ್ ಸೂಪ್ ಲೀಗ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ
ಶನಿವಾರ ಸಾಲ್ಟ್‌ಲೇಕ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಟ್ಲೆಟಿಕೊ ಡಿ ಕೋಲ್ಕತಾ ತಂಡ 1-0 ಗೋಲುಗಳ ಅಂತರದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಗೆಲುವು ದಾಖಲಿಸಿ, ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.
ಟೂರ್ನಿಯಲ್ಲಿ ಉಭಯ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ಪಂದ್ಯ ಹೆಚ್ಚು ರೋಚಕವಾಗಿರುವ ನಿರೀಕ್ಷೆ ಇತ್ತು. ಅಲ್ಲದೆ ಕೋಲ್ಕತಾ ತಂಡದ ಹಸ ಮಾಲೀಕ ಸೌರವ್ ಗಂಗೂಲಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲೀಕ ಸಚಿನ್ ತೆಂಡೂಲ್ಕರ್ ಆಗಿದ್ದ ಹಿನ್ನೆಲೆಯಲ್ಲಿ, ಈ ಕದನ ಕ್ರಿಕೆಟ್ ದಿಗ್ಗಜರ ಕದನವಾಗಿ ಪರಿಗಣಿಸಲಾಗಿತ್ತು.
ಅಂತಿಮವಾಗಿ 90ನೇ ನಿಮಿಷದಲ್ಲಿ ಕೋಲ್ಕತಾ ತಂಡದ ಮೋಹಮದ್ ರಫೀಕ್ ಗೋಲು ದಾಖಲಿಸುವ ಮೂಲಕ ಸೌರವ್ ಗಂಗೂಲಿ ತಂಡ ಪ್ರಶಸ್ತಿಯನ್ನು ಬಾಚಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಪಂದ್ಯದ 11ನೇ ನಿಮಿಷದಲ್ಲಿ ಕೇರಳ ತಂಡದ ಇಷ್ಫಾಕ್ ಅಹ್ಮದ್ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಪ್ರಯತ್ನ ನಡೆಸಿದರಾದರೂ ಯಶಸ್ವಿಯಾಗಲಿಲ್ಲ. ನಂತರ ಉಭಯ ತಂಡಗಳು ಗೋಲಿಗಾಗಿ ಪ್ರಯತ್ನ ನಡೆಸಿದವು. ಆದರೆ, ಅಂತಿಮ ಕ್ಷಣದಲ್ಲಿ ಮೊಹಮ್ಮದ್ ರಫೀಕ್ ಗೋಲು ದಾಖಲಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.
Advertisement