
ಲೂಯಿಸ್‌ವಿಲ್ಲೆ(ಅಮೆರಿಕ): ಇತ್ತೀಚೆಗಷ್ಟೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ, ಬಿಡುಗಡೆಗೊಂಡಿದ್ದ ವಿಶ್ವ ಬಾಕ್ಸಿಂಗ್‌ನ ದಂತ ಕಥೆ ಮೊಹಮ್ಮದ್ ಅಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
72 ವರ್ಷ ವಯಸ್ಸಿನ ಅಲಿ ಈಗಗಲೇ ಪಾರ್ಕಿನ್ಸನ್ಸ್ ಕಾಯಿಲೆಯಿಂದ ಬಳಲುತ್ತಿದ್ದು, ಈಗ ಅವರು ಶ್ವಾಸಕೋಶದ ಸೋಂಕಿಗೂ ಒಳಗಾಗಿದ್ದಾರೆಂದು ಅವರ ವಕ್ತಾರ ಬಾಬ್ ಗುನ್ನೆಲ್ ತಿಳಿಸಿದ್ದಾರೆ.
ಆದರೆ, ಈ ಸೋಂಕು ಪ್ರಾಥಮಿಕ ಹಂತದ್ದಾಗಿದ್ದು, ಅಲಿಯವರ ಸ್ಥಿತಿ ಗಂಭೀರವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ, ಅಲಿಯವರ ಸ್ಥಿತಿ ಸ್ಥಿರವಾಗಿದ್ದು, ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದಾರೆ ಎಂದು ಅವರನ್ನು ಚಿಕಿತ್ಸೆಗೊಳಪಡಿಸಿರುವ ವೈದ್ಯರು ತಿಳಿಸಿದ್ದಾರೆ.
Advertisement