ಕನ್ನಡಿಗರ ದಾಳಿಗೆ ಹೆದರಿದ ರೈಲ್ವೇಸ್

ಒಂದೆಡೆ ಅತೀವ ಚಳಿ, ಮಗದೊಂದೆಡೆ ಚೆಂಡು ಎದುರಿಸಲಾಗದ ಕಠಿಣ ಕ್ಷಣ....
ಸಿ.ಎಂ. ಗೌತಮ್
ಸಿ.ಎಂ. ಗೌತಮ್

ನವದೆಹಲಿ; ಒಂದೆಡೆ ಅತೀವ ಚಳಿ, ಮಗದೊಂದೆಡೆ ಚೆಂಡು ಎದುರಿಸಲಾಗದ ಕಠಿಣ ಕ್ಷಣ. ಈ ಸಂಕಟದ ಪರಿಸ್ಥಿತಿಗಳ ನಡುವೆಯೇ ಮರುಹುಟ್ಟು ಪಡೆಯಲು ಕರ್ನಾಟಕ ಉತ್ತಮ ಹೋರಾಟವನ್ನೇ ನಡೆಸಿದೆ.

ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ 'ಎ' ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಎದುರಾಗಿರುವ ರೈಲ್ವೇಸ್ ಎದುರು ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 247 ರನ್‌ಗಳ ಸಾಧಾರಣ ಮೊತ್ತವನ್ನಷ್ಟೇ ಸಂಪಾದಿಸಿದೆ. ಆದರೆ, ಪ್ರತಿಯಾಗಿ ರೈಲ್ವೇಸ್‌ಗೂ ಸಹ ಆರಂಭದಲ್ಲೇ ದೊಡ್ಡ ಆಘಾತಗಳನ್ನೇ ನೀಡುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ಇನಿಂಗ್ಸ್ ಮುನ್ನಡೆಯ ಉತ್ತಮ ಅವಕಾಶವನ್ನೂ ತನ್ನದಾಗಿಸಿಕೊಂಡಿದೆ. ಬೆಳಿಗ್ಗೆ ಇಬ್ಬನಿಯಿಂದಾಗಿ ಎರಡನೇ ದಿನದಾಟವೂ ತಡವಾಗಿ ಆರಂಭವಾಯಿತು. ಇಂದು ಕೇವಲ 51.2 ಓವರುಗಳನ್ನು ಎಸೆಯಲು ಮಾತ್ರ ಸಾಧ್ಯವಾಯಿತು.

ಕರ್ನಾಟಕವನ್ನು ಸಾಧಾರಣ ಸ್ಕೋರ್‌ಗೆ ನಿಯಂತ್ರಿಸಿ ತನ್ನ ಮೊದಲ ಸರದಿ ಆರಂಭಿಸಿರುವ ರೈಲ್ವೇಸ್, ಕರ್ನೈಲ್ ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ ಎರಡನೇ ದಿನದಾಟ ನಿಂತಾಗ 4 ವಿಕೆಟ್ ಕಳೆದುಕೊಂಡು 105 ರನ್‌ಗಳಿಸಿತ್ತು. ಮಧ್ಯಮ ಕ್ರಮಾಂಕದ ದಾಂಡಿಗರಾದ ಅನುಸ್ಟುಪ್ ಮಜುಂದಾರ್ 25 ಮತ್ತು ಅವಿನಾಶ್ ಯಾದವ್ 1 ರನ್‌ಗಳಿಸಿ ದಾಟಲು ರೈಲ್ವೇಸ್‌ಗೆ ಇನ್ನೂ 143 ರನ್‌ಗಳ ಅವಶ್ಯವಿದೆ.

ಕರ್ನಾಟಕದ ಬೌಲಿಂಗ್ ಸಾಮರ್ಥ್ಯ ನೋಡಿದರೆ, ಈಗಿನ ಪರಿಸ್ಥಿತಿಯಲ್ಲಿ ರೈಲ್ವೇಸ್‌ಗೆ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಿಗುವುದು ಕಷ್ಟ ಎಂಬಂತಾಗಿದೆ. ಆದರೂ, ಒಂದೆರಡು ಅತ್ಯುತ್ತಮ ಜೊತೆಯಾಟಗಳು ಬಂದರೆ ಮಾತ್ರ ಇದು ಸಾಧ್ಯವಾಗಬಹುದು.

ಇದಕ್ಕೆ ಮುನ್ನ ಮೊದಲ ದಿನದ ಮೊತ್ತ 7 ವಿಕೆಟ್ ನಷ್ಟಕ್ಕೆ 207 ರನ್‌ಗಳಿಂದ ಎರಡನೇ ದಿನದಾಟ ಮುಂದುವರಿಸಿದ ಕರ್ನಾಟಕ, ಮತ್ತೆ ತನ್ನ ಖಾತೆಗೆ ಕೇವಲ 40 ರನ್ ಸೇರಿಸುವಷ್ಟರಲ್ಲಿ ಅಂತಿಮ ಮೂರು ವಿಕೆಟ್ ಕಳೆದುಕೊಂಡಿತು. ನಿನ್ನೆ ಅಜೇಯರಾಗುಳಿದಿದ್ದ ವಿಕೆಟ್ ಕೀಪರ್ ಸಿ.ಎಂ. ಗೌತಮ್ ಮತ್ತು ಶ್ರೇಯಸ್ ಗೋಪಾಲ್ ಸಹ ನಿರೀಕ್ಷಿತ ಮಟ್ಟದಲ್ಲಿ ತಂಡವನ್ನು ಮೇಲೆತ್ತುವಲ್ಲಿ ಸಫಲರಾಗಲಿಲ್ಲ. ಸ್ವಲ್ಪ ಮಟ್ಟಿಗೆ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿದ ಗೌತಮ್ ಅರ್ಧಶತಕ ಗಳಿಸಿದರು. ಅವರು, 158 ನಿಮಿಷ ಕ್ರೀಸ್‌ನಲ್ಲಿದ್ದು 109 ಎಸೆತಗಳಲ್ಲಿ 12 ಬೌಂಡರಿಗಳಿದ್ದ 64 ರನ್‌ಗಳಿಸಿದರು. ಇವರ ಜೊತೆ ದಿನದಾಟ ಮುಂದುವರಿಸಿದ ಶ್ರೇಯಸ್ 18ರ ಮೊತ್ತದಲ್ಲಿ ಔಟಾದರೆ, ಕೊನೆಯ ಕ್ರಮಾಂಕದಲ್ಲಿ ಬಂದ ಅರವಿಂದ್ ತಾವು ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವುದರೊಂದಿಗೆ ಕರ್ನಾಟಕದ ಮೊದಲ ಇನಿಂಗ್ಸ್‌ಗೆ ತೆರೆ ಬಿದ್ದಿತು. ರೈಲ್ವೇಸ್ ಪರ ಚುರುಕಿನ ದಾಳಿ ಸಂಘಟಿಸಿದ ಉಪಾಧ್ಯಾಯ 7 ವಿಕೆಟ್ ಉರುಳಿಸಿದರು.

ರೈಲ್ವೇಸ್‌ಗೆ ಶುರುವಿನಲ್ಲೇ ಆಘಾತ

ಕರ್ನಾಟಕವನ್ನು ಬೇಗನೆ ನಿಯಂತ್ರಿಸಿದ ಹುರುಪಿನಲ್ಲಿ ತಮ್ಮ ಮೊದಲ ಇನಿಂಗ್ಸ್ ಆರಂಭಿಸಿದ ರೈಲ್ವೇಸ್ ಆಟಗಾರರಿಗೆ ಪ್ರಾರಂಭದಿಂದಲೇ ಒಂದರ ಮೇಲೊಂದರಂತೆ ಆಘಾತಗಳು ಉಂಟಾದವು. ಆರಂಭಿಕ ಅಭಿಷೇಕ್ ಕೌಶಿಕ್ (59ರನ್, 90 ಎಸೆತ, 9 ಬೌಂಡರಿ) ಕರ್ನಾಟಕದ ಬೌಲರ್‌ಗಳಿಗೆ ತೀಕ್ಷ್ಣ ಉತ್ತರ ನೀಡಿ ಅರ್ಧಶತಕ ಗಳಿಸಿ ಮಿಂಚಿದರೆ, ಇತರೆ ದಾಂಡಿಗರಾದ ರೋಹನ್, ಭಿಲ್ಲೆ ಮತ್ತು ಘೋಷ್ ಬೇಗನೆ ನಿರ್ಗಮಿಸಿದ್ದು ರೈಲ್ವೇಸ್ ಆತ್ಮವಿಶ್ವಾಸಕ್ಕೆ ದೊಡ್ಡ ಪೆಟ್ಟು ಬಿದ್ದಿತು.

ಸ್ಟುವರ್ಟ್ ಬಿನ್ನಿ 2 ಹಾಗೂ ಮಿಥುನ್ ಮತ್ತು ಪಾಂಡೆ ತಲಾ 1 ವಿಕೆಟ್ ಉರುಳಿಸಿ ಕರ್ನಾಟಕಕ್ಕೆ ಶುರುವಿನಲ್ಲಿಯೇ ಭರ್ಜರಿ ಯಶಸ್ಸು ತಂದುಕೊಟ್ಟರು.

ಸ್ಕೋರ್ ವಿವರ

ಕರ್ನಾಟಕ ಮೊದಲ ಇನಿಂಗ್ಸ್ 82.3 ಓವರುಗಳಲ್ಲಿ 247 (ಮೊದಲ ದಿನ 7ಕ್ಕೆ 207ರಿಂದ ಮುಂದುವರಿದಿದೆ)


ಸಿ.ಎಂ. ಗೌತಮ್ ಸಿ. ಅರ್ನಬ್ ನಂದಿ ಬಿ. ಕೃಷ್ಣಕಾಂತ್ ಉಪಾಧ್ಯಾಯ  64
ಶ್ರೇಯಸ್ ಗೋಪಾಲ್ ಸಿ. ಮಹೇಶ್ ರಾವತ್، ಬಿ. ಕೃಷ್ಣಕಾಂತ್ ಉಪಾಧ್ಯಾಯ  18
ಅಭಿಮನ್ಯು ಮಿಥುನ್㐌 ಔಟಾಗದೆ  03
ಎಸ್‌. ಅರವಿಂದ್ ಬಿ. ಕೃಷ್ಣಕಾಂತ್ ಉಪಾಧ್ಯಾಯ  00
ಇತರೆ: (ಲೆಗ್ ಬೈ-1)  01
ವಿಕೆಟ್ ಪತನ: 8-226 (ಶ್ರೇಯಸ್‌; 76.6), 9-247 (ಗೌತಮ್‌; 82.2),
10-247 (ಅರವಿಂದ್; 82.3).
ಬೌಲಿಂಗ್‌: ಅನುರೀತ್ ಸಿಂಗ್ 32-7-85-0, ಕೃಷ್ಣಕಾಂತ್ ಉಪಾಧ್ಯಾಯ 31.3-8-98-7, ರಂಜಿತ್瀌 ಮಾಲಿ 14-3-43-2, ಅವಿನಾಶ್ ಯಾದವ್ 5-0-20-1.
ರೈಲ್ವೇಸ್ ಮೊದಲ ಇ.ವರ್‌ಗಳಲ್ಲಿ 4 ವಿಕೆಟ್‌ಗೆ 105
ರೋಹನ್⠌ ಭೋಸಲೆ ಸಿ. ಸಿ.ಎಂ. ಗೌತಮ್ ಬಿ. ಅಭಿಮನ್ಯು ಮಿಥುನ್  04
ಅಭಿಷೇಕ್ ಕೌಶಿಕ್ ಎಲ್‌ಬಿಡಬ್ಲ್ಯು ಬಿ. ಮನೀಷ್⠌ ಪಾಂಡೆ  59
ನಿತಿನ್ ಭಿಲ್ಲೆ ಸಿ. ಮನೀಷ್⠌ ಪಾಂಡೆ ಬಿ. ಸ್ಟುವರ್ಟ್ ಬಿನ್ನಿ  10
ಅರಿಂಧಮ್ ಘೋಷ್ ಎಲ್‌ಬಿಡಬ್ಲ್ಯು ಬಿ. ಸ್ಟುವರ್ಟ್ ಬಿನ್ನಿ  01
ಅನುಸ್ತಪ್ ಮುಜುಮ್ದಾರ್ ಬ್ಯಾಟಿಂಗ್  25
ಅವಿನಾಶ್ ಯಾದವ್ ಬ್ಯಾಟಿಂಗ್  01
ಇತರೆ: (ಬೈ-4, ಲೆಗ್ ಬೈ-1)  05
ವಿಕೆಟ್嘌 ಪತನ: 1-5 (ಭೋಸಲೆ; 1.4), 2-63 (ಭಿಲ್ಲೆ; 17.1), 3-67
(ಘೋಷ್‌; 21.5), 4-92 (ಕೌಶಿಕ್; 31.6)
ಬೌಲಿಂಗ್‌: ಆರ್‌. ವಿನಯ್ ಕುಮಾರ್ 9-4-26-0, ಅಭಿಮನ್ಯು ಮಿಥುನ್琌
9.5-1-35-1, ಅರವಿಂದ್ ಶ್ರೀನಾಥ್ 8-2-21-0, ಸ್ಟುವರ್ಟ್ ಬಿನ್ನಿ
8-1-18-2, ಮನೀಷ್ ಪಾಂಡೆ 2-2-0-1.

ಎ ಗುಂಪಿನ ಇನ್ನಿತರ ಪಂದ್ಯಗಳ 2ನೇ ದಿನದಾಟ
ಸ್ಥಳ. ವಡೋದರಾ
ಜಮ್ಮು-ಕಾಶ್ಮೀರ 497 ಹಾಗೂ ಬರೋಡಾ 116/0

ಸ್ಥಳ: ಚೆನ್ನೈ
ಮಧ್ಯಪ್ರದೇಶ 432 ಹಾಗೂ ತಮಿಳುನಾಡು 4 ವಿಕೆಟ್‌ಗೆ 112

ಸ್ಥಳ: ಕಾನ್ಪುರ
ಉತ್ತರಪ್ರದೇಶ 206 ಹಾಗೂ ಮುಂಬೈ 3 ವಿಕೆಟ್‌ಗೆ 42

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com