
ಜಮಖಂಡಿ: ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಡೆಯುತ್ತಿರುವ 19ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅತಿಥೇಯ ಕರ್ನಾಟಕದ ಬಸವರಾಜ ಕಡಪಟ್ಟಿ ಚಿನ್ನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಮೂರನೇ ದಿನವಾದ ಭಾನುವಾರ ದೂರದ ರೇಸ್‌ಗಳಲ್ಲಿ ಕರ್ನಾಟಕದ ಪುರುಷರ ಮತ್ತು ಮಹಿಳೆಯರೂ ಹೇಳಿಕೊಳ್ಳುವಷ್ಟು ಸಾಧನೆ ಮಾಡದಿದ್ದರೂ ಬಸವರಾಜ ಕಡಪಟ್ಟಿ ಮಾನ ಉಳಿಸಿದರು.
ತಾಲೂಕಿನ ಹುನ್ನೂರು ಗ್ರಾಮದ ಶ್ರೀಧರ ಸವಣೂರು ರೈಲ್ವೇಸ್ ತಂಡದಲ್ಲಿ ಆಡುತ್ತಿದ್ದು, ಶ್ರೀಧರ ಸವಣೂರ ಅವರು 140ಕಿಮೀ ದೂರದ ರೇಸ್‌ನಲ್ಲಿ ಪ್ರಥಮಸ್ಥಾನ ಪಡೆದುಕೊಂಡರು. ಇನ್ನು ಕರ್ನಾಟಕದ ಎನ್.ಲೋಕೇಶ ತೃತೀಯ ಸ್ಥಾನ ಪಡೆದರು.
23 ವರ್ಷದೊಳಗಿನ ಪುರುಷರ 120 ಕಿ.ಮೀ ಮಾಸ್ ಸ್ಟಾರ್ಟ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನ ಪಡೆದು, ಚಿನ್ನದ ಪದಕ ಪಡೆದಿದ್ದಾರೆ. ಇದೇ ವಿಭಾಗದಲ್ಲಿ ತಮಿಳುನಾಡಿನ ಬಿ ಮುಚೇಚಶ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದರೆ, ಕರ್ನಾಟಕದ ಮತ್ತೋರ್ವ ಸೈಕ್ಲಿಸ್ಟ್ ಲಕ್ಷ್ಮಣ ಕುರಣಿ ತೃತೀಯ ಸ್ಥಾನ ಪಡೆದು ಕಂಚಿಗೆ ತೃಪ್ತಿಪಟ್ಟಿದ್ದಾರೆ.
ಮಹಿಳೆಯರ ಎಲೈಟ್ 80ಕಿ.ಮೀ ಮಾಸ್ ಸ್ಪಾರ್ಟ್‌ನಲ್ಲಿ ಕರ್ನಾಟಕದ ಶಹರಾ ಅತ್ತಾರ ದ್ವೀತಿಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡರು.
-ಗುರುರಾಜ ವಾಳ್ವೇಕರ
Advertisement