

ಈಕೆ ಚೆನ್ನಾಗಿ ಫುಟ್ಬಾಲ್ ಆಡಬಲ್ಲಳು. ಈಕೆಗೆ ಫುಟ್ಬಾಲ್ ಎಂದರೆ ಅಚ್ಚುಮೆಚ್ಚು. ಕ್ಯಾಂಬ್ರಿಜ್ ವಿಶ್ವವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ 24 ವರ್ಷದ ಕಾರಿನಾ ಟೆರ್ರೆಲ್, ಬ್ರೆಜಿಲ್ನಲ್ಲಿ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ನಡೆಯುತ್ತಿರುವ ಸಂದರ್ಭದಲ್ಲೇ ಇಂಗ್ಲೆಂಡ್ ಸುಂದರಿಯಾಗಿ ಆಯ್ಕೆಯಾಗಿದ್ದಾಳೆ.