ನಿಕ್ಷೇಪ್, ವಿಶಾಲ್ ಸೇರಿ 15 ಕ್ರೀಡಾಳುಗಳಿಗೆ ಏಕಲವ್ಯ ಪ್ರಶಸ್ತಿ

ವಿಳಂಬವಾಗಿದ್ದ ರಾಜ್ಯ ಕ್ರೀಡಾ ಸಾಧಕರಿಗೆ ನೀಡುವ ಏಕಲವ್ಯ ಪ್ರಶಸ್ತಿ ಪಟ್ಟಿ...
ಅಭಯ್‌ಚಂದ್ರ ಜೈನ್- ಸಂಗ್ರಹ ಚಿತ್ರ
ಅಭಯ್‌ಚಂದ್ರ ಜೈನ್- ಸಂಗ್ರಹ ಚಿತ್ರ

ಬೆಂಗಳೂರು: ವಿಳಂಬವಾಗಿದ್ದ ರಾಜ್ಯ ಕ್ರೀಡಾ ಸಾಧಕರಿಗೆ ನೀಡುವ ಏಕಲವ್ಯ ಪ್ರಶಸ್ತಿ ಪಟ್ಟಿ ಕೊನೆಗೂ ಬುಧವಾರ ಪ್ರಕಟವಾಗಿದೆ. ಪ್ರಮುಖ 15 ಕ್ರೀಡಾಪಟುಗಳಿಗೆ ಗುರುವಾರ ಸಂಜೆ 5 ಗಂಟೆಗೆ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್‌ನಲ್ಲಿ 2013ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ ಹಾಗೂ ಕ್ರೀಡಾರತ್ನ ಪ್ರಶಸ್ತಿ ನೀಡಲಾಗುವುದು ಎಂದು ಯವನಿಕದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕ್ರೀಡಾ ಸಚಿವ ಅಭಯ್‌ಚಂದ್ರ ಜೈನ್ ತಿಳಿಸಿದರು.

ಕಳೆದ 5 ವರ್ಷಗಳಿಂದ ಕ್ರೀಡೆಗಳಲ್ಲಿ ಮಾಡಿದ ಗಮಾನಾರ್ಹ ಸಾಧನೆಯ ಆಧಾರದ ಮೇಲೆ ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿಯೊಂದಿಗೆ ರು. 2 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

ಜೀವಮಾನ ಸಾಧನೆ ಪ್ರಶಸ್ತಿ
ಕ್ರೀಡಾ ಕ್ಷೇತ್ರಕ್ಕೆ ತಮ್ಮ ಸೇವೆ ಸಲ್ಲಿಸುವ ಮೂಲಕ ಯುವ ಪ್ರತಿಭೆಗಳು ಹೊರಹೊಮ್ಮಲು ನೆರವಾದ ಕರ್ನಾಟಕದ ನಾಲ್ವರು ತರಬೇತುದಾರರಿಗೆ ಜೀಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ. ಇವರು ಪ್ರಶಸ್ತಿಯೊಂದಿಗೆ ತಲಾ ರು. 1.5 ಲಕ್ಷ ನಗದು ಬಹುಮಾನ ಸ್ವೀಕರಿಸಲಿದ್ದಾರೆ.

ಹೆಸರು ಕ್ರೀಡೆ
1, ಗಣಪತಿ ಮನೋಹರನ್-ಬಾಕ್ಸಿಂಗ್
2. ಸುಮಿತ್ರ ಕುಮಾರ್ ಎಂ- ಬಾಡಿ ಬಿಲ್ಡಿಂಗ್
3. ಮಣಿ- ಕಬಡ್ಡಿ
4. ಮೊಹ್ಮದ್ ದಾದಾ ಪೀರ್- ಫುಟ್ಬಾಲ್

ಏಕಲವ್ಯ ಪ್ರಶಸ್ತಿ ವಿಜೇತರು
1. ಅರ್ಶದ್ ಎಂ- ಅಥ್ಲೆಟಿಕ್ಸ್
2. ಡಿ. ಗುರುಪ್ರಸಾದ್- ಬ್ಯಾಡ್ಮಿಂಟನ್
3. ನವನೀತ ಪಿ.ಯು- ಬಾಸ್ಕೆಟ್‌ಬಾಲ್
4. ಶೋಧನ್ ಕುಮಾರ್ ರೈ- ಬಾಡಿ ಬಿಲ್ಡಿಂಗ್
5. ಯಶಸ್ ಡಿ.-ಚೆಸ್
6. ಲೋಕೇಶ್ ಎನ್.- ಸೈಕ್ಲಿಂಗ್
7. ವಿಶಾಲ್ ಕುಮಾರ್ ಆರ್. ಫುಟ್ಬಾಲ್
8. ಸೋಮಣ್ಣ ಕೆ.ಎಂ- ಹಾಕಿ
9. ನಿಕ್ಷೇಪ ಬಿ.ಆರ್ - ಹಾಕಿ
10 ಆನಂದ್‌ಕುಮಾರ್ ಬಿ. - ಬ್ಯಾಡ್ಮಿಂಟನ್
11. ಅಕ್ಷತಾ ಪೂಜಾರ್ತಿ- ಪವರ್‌ಲಿಫ್ಟಿಂಗ್
12. ಪ್ರಕಾಶ ಪಿ.ಎನ್- ರೈಫಲ್ ಶೂಟಿಂಗ್
13. ಅಶ್ವಿನಿ ಮೆನೆನ್-ಈಜು
14. ಸನೋಜ್ ವಿ.ಆರ್-ವಾಲಿಬಾಲ್
15. ಪ್ರೇಮ ಹುಚ್ಚಣ್ಣನವರ್ - ಕುಸ್ತಿ

10 ಕ್ರೀಡಾಪಟುಗಳಿಗೆ ಕ್ರೀಡಾ ರತ್ನ
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಿದಂತೆ ಗ್ರಾಮೀಣ ಕ್ರೀಡೆ ಮತ್ತು ಗ್ರಾಮೀಣ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ 10 ಕ್ರೀಡಾಪಟುಗಳಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಗಿದೆ. ಇವರಿಗೆ ಪ್ರಶಸ್ತಿಯೊಂದಿಗೆ ರು. 1 ಲಕ್ಷ ಬಹುಮಾನ ನೀಡಿ ಗೌರವಿಸಲಾಗುತ್ತದೆ.

ಹೆಸರು ಕ್ರೀಡೆ
1. ಸಂತೋಷ್ ನಾಯಕ್- ಅಟ್ಯಾಪಾಟ್ಯಾ
2. ಶೃತಿ ಎ.ಆರ್ - ಬಾಲ್ ಬ್ಯಾಡ್ಮಿಂಟನ್
3. ಕುಮಾರ್ ಎಸ್. ಜಗದೇವ್- ಗುಂಡು ಎತ್ತುವುದು
4. ವಿನಯ್ ಕುಮಾರ್ ಕೆ. ಎಚ್- ಖೋಖೋ
5. ಮಾರುತಿ ವೈ. ಬಾರಕೇರ್- ಮಲ್ಲಕಂಬ
6. ಐಶ್ವರ್ಯ ಎಂ. ದಳವಿ- ಜಂಗಿ ಕುಸ್ತಿ
7. ಮೊಹ್ಮದ್ ಅಬಿಬ್- ಥ್ರೋಬಾಲ್
8. ಪಲಿಮಾರ್ ದೇವೇಂದ್ರ ಕೋಟ್ಯಾನ್ ವಿಶಿಷ್ಠ ಕ್ರೀಡೆಗಳು(ಕಂಬಳ)
9. ಗೋಪಾಲ ಕಾರ್ವಿ- ವಿಶಿಷ್ಠ ಕ್ರೀಡೆಗಳು(ವಿಶಿಷ್ಟ ಈಜು)
10. ನಾಗಾನಂದ ಸ್ವಾಮಿ ಎಸ್.ಸಿ- ವಿಶಿಷ್ಟ ಕ್ರೀಡೆಗಳು(ಜಲಸ್ಥಂಭನ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com