ವಿರಾಟ್-ಅನುಷ್ಕಾ ಮ್ಯಾಚ್ ಫಿಕ್ಸ್?

ವಿರಾಟ್ ಕೊಹ್ಲಿ ಮೊದಲೆಲ್ಲ ತನ್ನ ಗೆಲುವನ್ನು ಹಾಗೂ ಯಶಸ್ಸನ್ನು ಅವಾಚ್ಯ ಶಬ್ದದಲ್ಲಿ ...
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ (ಸಾಂದರ್ಭಿಕ ಚಿತ್ರ)
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ (ಸಾಂದರ್ಭಿಕ ಚಿತ್ರ)
Updated on

ವಿರಾಟ್ ಕೊಹ್ಲಿ ಮೊದಲೆಲ್ಲ ತನ್ನ ಗೆಲುವನ್ನು ಹಾಗೂ ಯಶಸ್ಸನ್ನು ಅವಾಚ್ಯ ಶಬ್ದದಲ್ಲಿ ಕೂಗಾಡಿ ಅಥವಾ ನಡುಬೆರಳನ್ನು ಎತ್ತಿ ತೋರಿಸಿ ಸಂಭ್ರಮಿಸುತ್ತಿದ್ದ, ಆದರೆ ಮೊನ್ನೆ ಆರು ಸಾವಿರ ರನ್ ಪೂರೈಸಿದ ಮರುಕ್ಷಣದಲ್ಲೇ ಆತ ಪೆವಿಲಿಯನ್ ಕಡೆಗೆ ಮುತ್ತೊಂದನ್ನು ಹಾರಿ ಬಿಟ್ಟ.

ವಿರಾಟ್ ಬದಲಾಗಿರುವ ಸೂಚನೆ ಅಂತೀರಾ? ಇಷ್ಟಕ್ಕೂ ಆ ಮುತ್ತು ಹಾರಿ ಹೋಗಿದ್ದೆಲ್ಲಿ ಅಂತ ಬಿಡಿಸಿ ಹೇಳಬೇಕಿಲ್ಲ. ಅಲ್ಲಿದ್ದದ್ದು ಅನುಷ್ಕಾ ಶರ್ಮ, ಕ್ಯಾಚ್ ಬಿಡಲು ಆಕೆಯೇನು ವಿರಾಟ್ ಕೊಹ್ಲಿಯೇ? ಮುತ್ತನ್ನು ಕ್ಯಾಚ್ ಹಾಕ್ಕೊಂಡೇ ಬಿಟ್ಳು.

ಅಂದ ಹಾಗೆ ಈ ಓಪನ್ ಲವಿಡವಿಯ ಬೆನ್ನ ಹಿಂದೆಯೇ ಅವರಿಬ್ಬರ ಮದುವೆ ನಿಶ್ಚಿತಾರ್ಥದ ಸುದ್ದಿ ಅಧಿಕೃತವಾಗುವಂತಿದೆ. ಇತ್ತೀಚೆಗೆ ಸ್ವಲ್ಪ ಅತಿಯೇ ಅನಿಸುವಷ್ಟು ಜೊತೆಗೆ ಕಾಣಿಸಿಕೊಳ್ಳುತ್ತಿರುವ ಈ ಜೋಡಿ ಗುಸುಗುಸುಗಳಿಗೆ ತೆರೆಯೆಳೆಯುವ ಎಲ್ಲ ಲಕ್ಷಣಗಳು ತೋರುತ್ತಿದೆ.

ಪತ್ರಿಕೆಯೊಂದರ ವರದಿಯ ಪ್ರಕಾರ ಇಬ್ಬರ ಮನೆಯವರ ನಡುವೆ ಮಾತುಕತೆ ನಡೆದಿದೆ. ಬಹುಶಃ ಅನುಷ್ಕಾಳ ಪೀಕೇ ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ಅಧಿಕೃತ ಘೋಷಣೆಯಾಗಬಹುದೆಂಬ ಮಾಹಿತಿ ಹೊರಬಿದ್ದಿದೆ.

ಅನುಷ್ಕಾ ತನ್ನ ಸಿನಿಮಾ ಪ್ರೊಮೋಷನ್ ಕಡೆ ಕೂಡ ಮನಸ್ಸು ಕೊಡೋಕಾಗದೆ ಸೀದಾ ಮೊನ್ನೆ ಮ್ಯಾಚ್ ನಡೀತಿದ್ದ ಸ್ಟೇಡಿಯಂಗೆ ಬಂದಿದ್ದಳು. ವಿರಾಟ್ಗೆ ಅನಿಷ್ಟಕ್ಕೆಲ್ಲ ಅನುಷ್ಕಾ ಕಾರಣ ಎಂಬ ಮಾತನ್ನು ಹೋಗಲಾಡಿಸಬೇಕಿತ್ತು. ಆರು ಸಾವಿರ ರನ್ ಸೇರಿಸಿ ಪಂದ್ಯ ಸರಣಿ ಎರಡನ್ನೂ ಗೆಲ್ಲಸೋ ಮೂಲಕ ಅನುಷ್ಕಾ ಮೇಲೆ ಕೂತಿದ್ದ ಗೂಬೆಯನ್ನು ಹೊಡೆದೋಡಿಸಿರೋ ವಿರಾಟ್ ಪಂದ್ಯದ ನಂತರ ರಾಜಾ ರೋಷವಾಗಿ ಅನುಷ್ಕಾಳೊಂದಿಗೆ ಔಟಿಂಗ್ ಹೋಗಿದ್ದನಂತೆ.

ಇನ್ಮುಂದೆ ತನ್ನ ಕಳಪೆ ಫಾರ್ಮ್ಗೆ ಅನುಷ್ಕಾಳನ್ನು ಹೊಣೆ ಮಾಡುವಂತಿಲ್ಲ ಅಥವಾ ನಮ್ಮಿಬ್ಬರ ಬಗೆಗೆ ಜೋಕು ಹರಿಬಿಡುವಂತಿಲ್ಲ ಅಂತೆಲ್ಲ ವಿರಾಟ್ ಪರೋಕ್ಷವಾಗಿ ಡ್ರೆಸ್ಸಿಂಗ್ ರೂಮಲ್ಲಿ ಗುಡುಗಿದ್ದೂ ಆಗಿದೆಯಂತೆ.

ಅಂದ ಹಾಗೆ ವಿರಾಟ್ ಅನುಷ್ಕಾ ಜೋಕ್ಗಳೇನೂ ಹೊಸತಲ್ಲ. ಅನುಷ್ಕಾಳನ್ನು ಡಕ್ ಎಂದು ಬಾಲಿವುಡ್ ಅಲ್ಲಿ ಛೇಡಿಸುವುದು ಗೊತ್ತಿರೋ ವಿಷಯ. ಅದಕ್ಕೆ ಸರಿಯಾಗಿ ವಿರಾಟ್ ಫಾರ್ಮ್ ಕೈಕೊಟ್ಟು ಸಾಲು ಸಾಲಾಗಿ ಡಕ್ ಔಟ್ ಆದಾಗ, ವಿರಾಟ್ನನ್ನು ಡಬಲ್ ಡಕ್ಕರ್ ಅಂತೆಲ್ಲ ಕರೆದು ತಮಾಷೆ ಮಾಡಲಾಗಿತ್ತು.

ಗಂಗೂಲಿಗೆ ಗ್ರೆಗ್ ಚಾಪೆಲ್ ಹೇಗೋ ವಿರಾಟ್ಗೆ ಅನುಷ್ಕಾ ಹಾಗೆ ಅಂತಲೂ ತರಲೆ ಟ್ವೀಟ್ ಹರಿದಿತ್ತು. ಆದರೆ ವಿರಾಟ್ ಈಗ ಮತ್ತೆ ಫಾರ್ಮ್ಗೆ ಮರಳಿದ್ದಾನೆ. ಹಂಗಾಮಿ ನಾಯಕನಾಗಿಯೂ ಯಶಸ್ವಿಯಾಗಿದ್ದಾನೆ. ಇದಕ್ಕೆಲ್ಲ ಕಾರಣ ಅನುಷ್ಕಾ ತಂದ ಅದೃಷ್ಟ ಅಂತ್ಯಾಕೆ ಮಾಧ್ಯಮಗಳು ಹೇಳುತ್ತಿಲ್ಲ ಅನ್ನೋದು ಸದ್ಯಕ್ಕೆ ವಿರಾಟ್ನ ಪ್ರಶ್ನೆಯಂತೆ.




Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com