ಸಾಧಿಸಲು ಬೆಟ್ಟದಷ್ಟಿದೆ: ದ್ವಿ-ದ್ವಿಶತಕ ವೀರ ರೋಹಿತ್ ಶರ್ಮ

ಒಂದು ದಿನದ ಕ್ರಿಕೆಟ್ ಪಂದ್ಯಗಳಲ್ಲಿ ೨ ದ್ವಿಶತಕ ಗಳಿಸುವ ದಾಖಲೆ ಸಾಧನೆ ಮಾಡಿರುವ ಈ ಏಕೈಕ ಭಾರತೀಯ...
ಎರಡನೆ ದ್ವಿಶತಕ ದಾಖಲಿಸಿ ಸಂಭ್ರಮಿಸುತ್ತಿರುವ ರೋಹಿತ್ ಶರ್ಮ
ಎರಡನೆ ದ್ವಿಶತಕ ದಾಖಲಿಸಿ ಸಂಭ್ರಮಿಸುತ್ತಿರುವ ರೋಹಿತ್ ಶರ್ಮ

ಒಂದು ದಿನದ ಕ್ರಿಕೆಟ್ ಪಂದ್ಯಗಳಲ್ಲಿ ೨ ದ್ವಿಶತಕ ಗಳಿಸುವ ದಾಖಲೆ ಸಾಧನೆ ಮಾಡಿರುವ ಈ ಏಕೈಕ ಭಾರತೀಯ ಬ್ಯಾಟ್ಸ್ ಮನ್ ರೋಹಿತ್ ಶರ್ಮ, ಈಗ ನನ್ನ ಮೇಲಿನ ನಿರೀಕ್ಷೆ ಮತ್ತು ಜವಾಬ್ದಾರಿಗಳು ಹೆಚ್ಚಿರುವುದರಿಂದ ಇನ್ನೂ ಸಾಧಿಸಲು ಸಾಕಷ್ಟಿದೆ ಎಂದಿದ್ದಾರೆ.

ನೆನ್ನೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ೧೫೩ ಬಾಲುಗಳಲ್ಲಿ ೨೬೪ ರನ್ ಗಳಿಸಿ ವಿಶ್ವ ದಾಖಲೆ ಸೃಷ್ಟಿಸಿದ ರೋಹಿತ್, ಒಂದು ದಿನ ಪಂದ್ಯದ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯಲ್ಲದೆ, ಇಲ್ಲಿಯವರೆಗೂ ೨ ದ್ವಿಶತಕ ಹೊಡೆದು, ಸಚಿನ್ ಮತ್ತು ವೀರೇಂದ್ರ ಸೆಹ್ವಾಗ್ ದಾಖಲೆಯನ್ನು ಮುರಿದಿದ್ದಾರೆ. "ಇನ್ನೂ ಸಾಧಿಸಲು ಸಾಕಷ್ಟಿದೆ. ನಾನು ಸಣ್ಣವನಿದ್ದಾಗ ಅಂತರಾಷ್ಟ್ರೀಯ ಪಂದ್ಯದಲ್ಲಿ ಆಡುವ ಕನಸಿತ್ತು. ಇವೆಲ್ಲಾ ಆಗಬಹುದೆಂದು ನಾನೆಂದಿಗೂ ಅಂದುಕೊಂಡಿರಲಿಲ್ಲ." ಎಂದು ವರದಿಗಾರರಿಗೆ ತಿಳಿಸಿದ್ದಾರೆ.

"ಸವೆಯುವ ಹಾದಿಯಲ್ಲಿ ಎಲ್ಲಾ ದಾಖಲೆಗಳೂ ಸೃಷ್ಟಿಯಾಗುತ್ತವೆ. ನಿರೀಕ್ಷೆ ಹೆಚ್ಚಿರುವುದರಿಂದ ಇನ್ನುಮುಂದೆ ನಾನು ಹೆಚ್ಚು ಪರಿಶ್ರಮ ಪಡಬೇಕು. ಈಗ ನನ್ನ ಹೆಗಲ ಮೇಲೆ ಹಚ್ಚು ಜವಾಬ್ದಾರಿಗಳಿವೆ ಎಂದೆನಿಸುತ್ತಿದೆ" ಎಂದಿದ್ದಾರೆ. ಈ ಹಿಂದೆ ಸೌತ್ ಆಫ್ರಿಕಾ ವಿರುದ್ದ ರನ್ ಗಳಿಸಲು ಹೆಣಗಾಡಿದ್ದ ರೋಹಿತ್, ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ತಂಡಕ್ಕೆ ಸೇರ್ಪಡೆಯಾದ ನಂತರ ನೆನ್ನೆಯದೇ ಮೊದಲ ಪಂದ್ಯ. ಹಿಂದಿನ ವೈಫಲ್ಯಗಳು ಮುಂದಿನ ವಿಜಯನ್ನು ತಡೆಯಲಾಗುವುದಿಲ್ಲ ಎಂದ ಅವರು "ಸೋಲು ಗೆಲುವುಗಳನ್ನು ಸಮಾನವಾಗಿ ಒಪ್ಪಿಕೊಂಡು ಮುಂದುವರೆಯಬೇಕು. ನಾನದನ್ನೇ ಮಾಡಿರುವುದು. ಒಂದೆರಡು ವಿದೇಶಿ ಪ್ರವಾಸದ ವೈಫಲ್ಯಗಳು ನನ್ನ ಕ್ರಿಕೆಟ್ ಗೆ ಅಡ್ದಿಯಾಗಲು ಸಾಧ್ಯವಿಲ್ಲ. ನನ್ನ ಕ್ರಿಕೆಟ್ ಮತ್ತು ನನ್ನ ಪರಿಶ್ರಮ ಇನ್ನೂ ಮುಂದುವರೆಯುತ್ತವೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com