ದಾಮಿನಿ, ಅರವಿಂದ್ಗೆ ಸ್ವರ್ಣ

ಮಿಂಚಿನ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕದ ಈಜು...
ಮಹಿಳೆಯರ 200ಮೀ ಬಟರ್‌ಫ್ಲೈ ಸ್ಟ್ರೋಕ್‌ನಲ್ಲಿ ದಾಮಿನಿ ಕೆ. ಗೌಡ
ಮಹಿಳೆಯರ 200ಮೀ ಬಟರ್‌ಫ್ಲೈ ಸ್ಟ್ರೋಕ್‌ನಲ್ಲಿ ದಾಮಿನಿ ಕೆ. ಗೌಡ

ಕೋಲ್ಕತಾ: ಮಿಂಚಿನ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಕರ್ನಾಟಕದ ಈಜುಪಟುಗಳಾದ ಅರವಿಂದ್ ಎಂ ಹಾಗೂ ದಾಮಿನಿ ಕೆ. ಗೌಡ 68ನೇ ರಾಷ್ಟ್ರೀಯ ಹಿರಿಯರ ಈಜು ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಚಾಂಪಿಯನ್ ಶಿಪ್ ನ ಎರಡನೇ ದಿನವಾದ ಶುಕ್ರವಾರ ನಡೆದ ಪುರುಷರ 400 ಮೀಟರ್ ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ರಾಜ್ಯದ ಅರವಿಂದ್ ಎಂ 04:40:44 ನಿಮಿಷದಲ್ಲಿ ಗುರಿ ತಲುಪುವ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇನ್ನು ಮಹಿಳೆಯರ 200 ಮೀಟರ್ ಬಟರ್ ಫ್ಲೈ ಸ್ಟ್ರೋಕ್ನಲ್ಲಿ ಕರ್ನಾಟಕದ ದಾಮಿನಿ ಕೆ. ಗೌಡ 02:24:85 ನಿಮಿಷದಲ್ಲಿ ಗುರಿ ತಲುಪಿ ಸ್ವರ್ಣ ಪದಕ ಬಾಚಿಕೊಂಡರು.

ಇನ್ನು 200 ಮೀಟರ್ ಬ್ಯಾಕ್ಸ್ಟ್ರೋಕ್ನಲ್ಲಿ ದಾಮಿನಿ (02:26:58 ನಿ.) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಈ ವಿಭಾಗದಲ್ಲಿ ಗುಜರಾತ್ನ ಮಾನಾ ಪಟೇಲ್ (02:25:94 ನಿ) ಚಿನ್ನ ಪಡೆದರು. ಇನ್ನು ರಾಜ್ಯದ ಮತ್ತೊರ್ವ ಈಜುಗಾರ್ತಿ ವಾಣಿ ಕಪೂರ್ ಅಚ್ಚುತನ್ (02:28:64) ಕಂಚಿನ ಪದಕ ಪಡೆದರು.

ಇನ್ನು ಮಹಿಳೆಯರ 4/100 ಮೀಟರ್ ಮೆಡ್ಲೆರಿಲೇಯಲ್ಲಿ ಕರ್ನಾಟಕ ತಂಡದ ದಾಮಿನಿ ಕೆ. ಗೌಡ, ಚಾರು ಹಂಸೀಣಿ, ಸಿಯಾ ಮಂಜೇಶ್ವರ್ ಮತ್ತು ಮಾಳವಿಕಾ ವಿ (04:40:46 ನಿ.) ಬೆಳ್ಳಿ ಪದಕ ಪಡೆದರು.

ಪುರುಷರ 4/100 ಮೀಟರ್ ಮೆಡ್ಲೆ ರಿಲೇಯಲ್ಲಿ ಕರ್ನಾಟಕದ ಅರವಿಂದ್ ಎಂ, ಅವಿನಾಶ್ ಎಂ, ಲಿಖಿತ್ ಎಸ್.ಪಿ, ಯಾಕೂಬ್ ಸಲೀಂ (04:00:42 ನಿ.) ಬೆಳ್ಳಿ ಪದಕ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com