ಪಂಕಜ್, ಕಮಲ್ ಕಮಾಲ್

ಭಾರತದ ಭರವಸೆಯ ಪ್ರತಿಭೆ, ಹಾಟ್ ಫೇವರಿಟ್ ಸ್ಥಳೀಯ ಪಂಕಜ್ ಅಡ್ವಾಣಿ, ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷೆಯಂತೆ ಶುಭಾರಂಭ ಮಾಡಿದ್ದಾರೆ.
ಭಾರತದ ಪಂಕಜ್ ಅಡ್ವಾಣಿ ಮೊದಲ ಪಂದ್ಯದಲ್ಲಿ ಸವಾಲು ಎದುರಿಸಿದ ಕ್ಷಣ
ಭಾರತದ ಪಂಕಜ್ ಅಡ್ವಾಣಿ ಮೊದಲ ಪಂದ್ಯದಲ್ಲಿ ಸವಾಲು ಎದುರಿಸಿದ ಕ್ಷಣ
Updated on

-ಸೋಮಶೇಖರ್ ಪಿ. ಭದ್ರಾವತಿ
ಬೆಂಗಳೂರು:
ಭಾರತದ ಭರವಸೆಯ ಪ್ರತಿಭೆ, ಹಾಟ್ ಫೇವರಿಟ್ ಸ್ಥಳೀಯ ಪಂಕಜ್ ಅಡ್ವಾಣಿ, ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್‌ನಲ್ಲಿ ನಿರೀಕ್ಷೆಯಂತೆ ಶುಭಾರಂಭ ಮಾಡಿದ್ದಾರೆ.

ಬುಧವಾರ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಲೀಗ್ ಹಂತದ ಪಂದ್ಯದಲ್ಲಿ ಬೆಂಗಳೂರಿನ ಪಂಕಜ್ ಅಡ್ವಾಣಿ ತಮ್ಮ ಎದುರಾಳಿ ಮಲೇಷ್ಯಾದ ಕೀನ್ ಮೂ ಹೋ ವಿರುದ್ಧ 4-2 (71-34-,85-0, 25-62, 46-58, 67-17, 69-44) ಫ್ರೇಮ್‌ಗಳ ಗೆಲುವು ದಾಖಲಿಸಿದರು. ಪಂದ್ಯದಲ್ಲಿ ಉತ್ತಮ ಆರಂಭ ಪಡೆದ ಪಂಕಜ್ ಆರಂಭಿಕ ಎರಡು ಫ್ರೇಮ್‌ಗಳನ್ನು ತಮ್ಮದಾಗಿಸಿಕೊಂಡರು. ನಂತರ ಎರಡು ಫ್ರೇಮ್ ಕೀನ್ ಪಾಲಾಯಿತು. ಐದು ಮತ್ತು ಆರನೇ ಫ್ರೇಮ್ ಗೆದ್ದ ಪಂಕಜ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಕಮಲ್‌ಗೆ ಕಷ್ಟಕರ ಗೆಲುವು
ತವರಿನ ಅನುಭವಿ ಪ್ರತಿಭೆ ಕಮಲ್ ಚಾವ್ಲಾ ಸಹ ಉತ್ತಮ ಆರಂಭ ಪಡೆದಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಕಮಲ್, ತಮ್ಮ ಎದುರಾಳಿ ಶಹಬಾಜ್ ಅದಿಲ್ ಖಾನ್ ವಿರುದ್ಧ 4-3 ಫ್ರೇಮ್‌ಗಳ ಅಂತರದಲ್ಲಿ ರೋಚಕ ಗೆಲುವು ದಾಖಲಿಸಿದ್ದಾರೆ. ಮಧ್ಯ ಪ್ರದೇಶದ ಭೋಪಾಲ್‌ನ ಆಟಗಾರರಾಗಿರುವ ಕಮಲ್ ಚಾವ್ಲಾ, ಬಲಗೈನ ಹೆಬ್ಬರಳಿಗೆ ಪೆಟ್ಟು ಬಿದಿದ್ದರೂ ಕಣಕ್ಕಿಳಿದರು. ಅಲ್ಲದೆ ಪಂದ್ಯದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಂದ್ಯದ ಆರಂಭಿಕ ಪ್ರೇಮ್‌ನಲ್ಲಿ ಕಮಲ್, 46-78 ಅಂತರದಲ್ಲಿ ಹಿನ್ನಡೆ ಅನುಭವಿಸಿದರು.

ಎರಡನೇ ಫ್ರೇಮ್‌ನಲ್ಲಿ ತಿರುಗಿ ಬಿದ್ದ ಕಮಲ್ ಚಾವ್ಲಾ 71-14ಅಂತರದಲ್ಲಿ ಮೇಲುಗೈ ಸಾಧಿಸಿದರು. ಮೂರನೇ ಹಾಗೂ ನಾಲ್ಕನೇ ಫ್ರೇಮ್ ನಲ್ಲೂ ಕ್ರಮವಾಗಿ 76-26 ಹಾಗೂ 82-52 ಅಂಕಗಳಿಂದ ಮುನ್ನಡೆ ಸಾಧಿಸಿ ಗೆಲುವಿನ ಸನಿಹಕ್ಕೆ ಬಂದರು. ಐದನೇ ಫ್ರೇಮ್ ನಲ್ಲಿ ಉಭಯ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದರು. ಒಂದು ಹಂತದಲ್ಲಿ 0-67 ಅಂಕಗಳ ಹಿನ್ನಡೆಯಲ್ಲಿದ್ದ ಕಮಲ್, ನಂತರ ಒಂದೇ ಅವಕಾಶದಲ್ಲಿ 56 ಅಂಕಗಳನ್ನು ದಾಖಲಸಿದರು. ಅದಿಲ್ 5 ಮತ್ತು 6ನೇ ಫ್ರೇಮ್ ಅನ್ನು 73-56, 71-6 ಅಂತರದಲ್ಲಿ ಗೆದ್ದುಕೊಂಡರು. ನಿರ್ಣಾಯಕ ಫ್ರೇಮ್‌ನಲ್ಲಿ 76-43 ಅಂತರ ಕಾಯ್ದುಕೊಂಡರು.

ಅಲೋಕ್ ಶುಭಾರಂಭ
ಭಾರತದ ಮತ್ತೊಬ್ಬ ಪ್ರಮುಖ ಆಟಗಾರ ಅಲೋಕ್ ಕುಮಾರ್ ಎದುರಾಳಿ ಆ್ಯಂಡ್ರೆ ವಿಲ್ ವಿರುದ್ಧ 3-0 ಫ್ರೇಮ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದರು. ಮಹಿಳೆಯರ ವಿಭಾಗದಲ್ಲಿ ಭಾರತದ ನೀನಾ ಪ್ರವೀಣ್ ತಮ್ಮ ಎದುರಾಳಿ ಹಾಂಕಾಂಗ್‌ನ ವಾನ್ ಇನ್ ಜೈಕ್ಯು ವಿರುದ್ಧ 3-0 (57-41, 56-26, 49-36) ಫ್ರೇಮ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದರು. ಇನ್ನು ರಾಜ್ಯದ ಉಮಾ ನಾಗರಾಜ್, ಥಾಯ್ಲೆಂಡ್‌ನವರತ್ತನುನ್ ಸುರ್ಕಿತನೆಸ್ ವಿರುದ್ಧ 0-3(67-6, 23-70, 5-64)ಅಂತರದಲ್ಲಿ ಸೋತರು.

ಗೆದ್ದ ಕಿರಿಯ ಆಟಗಾರ
ಮಾಸ್ಟರ್ಸ್ ವಿಭಾಗದಲ್ಲಿ ಟೂರ್ನಿಯಲ್ಲಿ ಭಾಗವಹಿಸಿರುವ ಅತ್ಯಂತ ಕಿರಿಯ ಆಟಗಾರನಾಗಿರುವ ಚೀನಾದ ಯಾನ್ ಬಿಂಟಾವ್ (14 ವರ್ಷ)ಟೂರ್ನಿಯಲ್ಲಿ ಗೆಲುವಿನ ಆರಂಭ ಪಡೆದಿದ್ದಾರೆ. ಇನ್ನು ಭರತದ ನದೀಮ್ ಅಹ್ಮದ್, ಸ್ಕಾಟ್ಲೆಂಡ್‌ನ ಡುಗಿಯಾನ್ ವಿರುದ್ಧ 3-0, (68-31, 56-30, 65-20)ಗೆಲುವು ದಾಖಲಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com