
ನವದೆಹಲಿ: ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿರುವ ಎನ್. ಶ್ರೀನಿವಾಸನ್ ಅವರನ್ನು ಸಮರ್ಥಿಸಿಕೊಂಡು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಮುದ್ಗಲ್ ಸಮಿತಿಗೆ ಅಫಿಡವಿಟ್ ಸಲ್ಲಿಸಿದೆ.
ಶ್ರೀನಿವಾಸನ್ ಮತ್ತು ಮಂಡಳಿಯ ಇತರ ನಾಲ್ವರು ಅಧಿಕಾರಿಗಳಿಗೆ ಕ್ರೀಡಾಪಟುಗಳು ನೀತಿ ಸಂಹಿತೆ ಉಲ್ಲಂಘಿಸಿರುವುದರ ಬಗ್ಗೆ ಮಾಹಿತಿ ಇತ್ತು. ಆದರೆ ಅವರ್ಯಾರು ಈ ಬಗ್ಗೆ ಕ್ರಮಕೈಗೊಂಡಿಲ್ಲ ಎಂದು ನ್ಯಾ. ಮುದ್ಗಲ್ ವರದಿಯಲ್ಲಿ ಹೇಳಲಾಗಿತ್ತು .
ಮುದ್ಗಲ್ ಸಮಿತಿಯ ಅಂತಿಮ ವರದಿಯಲ್ಲಿ ಶ್ರೀನಿವಾಸನ್ ಯಾವುದೇ ತಪ್ಪು ಮಾಡಿಲ್ಲ ಎನ್ನಲಾಗಿದ್ದು, ಶ್ರೀನಿವಾಸನ್‌ಗೆ ಬಿಸಿಸಿಐ ಬೆಂಬಲ ನೀಡಿತ್ತು.
ನವೆಂಬರ್ 18ರಂದು ನಡೆದ ಬಿಸಿಸಿಐ ಕಾರ್ಯಕಾರಿಣಿಸಭೆಯಲ್ಲಿ ಐಪಿಎಲ್ ಫಿಕ್ಸಿಂಗ್ ಕಳಂಕದಿಂದ ಮುಕ್ತರಾಗಿರುವ ಶ್ರೀನಿವಾಸನ್‌ಗೆ ಇಡೀ ಸಭೆ ಬೆಂಬಲ ವ್ಯಕ್ತ ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಡಿ.17ರ ಸಭೆಯಲ್ಲಿ ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷರಾಗಿ ಪುನರಾಯ್ಕೆಗೊಳ್ಳುವುದು ಖಚಿತ ಎನ್ನಲಾಗುತ್ತಿದೆ.
ಶ್ರೀನಿವಾಸನ್ ಫಿಕ್ಸಿಂಗ್ ಆರೋಪದಿಂದ ಬಚಾವಾಗಿದ್ದರೂ, ಆಟಗಾರರ ನೀತಿ ಸಂಹಿತೆ ಉಲ್ಲಂಘಿಸಿದ ವ್ಯಕ್ತಿ ನಂ.3 ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಎದುರಿಸುತ್ತಿದ್ದಾರೆ. ಆದಾಗ್ಯೂ, ವ್ಯಕ್ತಿ ನಂ.3 ಮಾಡಿದ ನೀತಿ ಸಂಹಿತೆ ಉಲ್ಲಂಘನೆಯ ಚಿಕ್ಕ ಪ್ರಮಾಣದ್ದು. ಈ ಬಗ್ಗೆ ಆ ಆಟಗಾರನಿಗೆ ವಾಗ್ದಂಡನೆಯನ್ನೂ ವಿಧಿಸಲಾಗಿತ್ತು ಎಂದು ಬಿಸಿಸಿಐ ಹೇಳಿದೆ.
ಟೀಂ ಪ್ರವಾಸ ಕೈಗೊಂಡಿರುವ ವೇಳೆ ರಂಜಿತ್ ಬಿಸ್ವಾಲ್ ಟೀಂ ಮ್ಯಾನೇಜರ್ ಆಗಿದ್ದರು. ಆ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಿಂದ ಗ್ರಹಿಸಲಾಗಿದೆ ಎಂದು ಬಿಸಿಸಿಐ ಹೇಳಿದೆ.
ಬಿಸಿಸಿಐ ಅಫಿಡವಿಟ್ ಜತೆ ಬಿಸ್ವಾಲ್ ಅವರು ಈ ಎಲ್ಲ ವಿಷಯಗಳನ್ನು ವಿವರಿಸಿ ಪ್ರತ್ಯೇಕ ಅಫಿಡವಿಟ್‌ನ್ನೂ ಸಲ್ಲಿಸಿದ್ದಾರೆ. ಏತನ್ಮಧ್ಯೆ, ಯಾವುದೇ ಆಟಗಾರರ ಹೆಸರು ಉಲ್ಲೇಖಿಸಲಾಗಿಲ್ಲ.
Advertisement